Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವಿಮಾನದ ಕಿಟಕಿಯಿಂದ ಕಂಡಿತು ವಿಚಿತ್ರ ವಸ್ತು..! ಯುಎಫ್ಓ ನಿಗೂಢತೆ ಇನ್ನೂ ಜೀವಂತ
ನೀವು ಆಕಾಶದಲ್ಲಿ ವಿಚಿತ್ರ ವಸ್ತುಗಳ ಹಾರಾಡುವುದು, ಕಾಣಿಸಿಕೊಳ್ಳುವ ಕುರಿತ ಘಟನೆಗಳ ಕೇಳಿರುತ್ತೀರಿ. ಕೆಲವು ತಿಂಗಳಿನಿಂದ ಇಂತಹ ಘಟನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಅಮೆರಿಕದ ಪ್ರಮುಖ ನಗರಗಳಲ್ಲಿ ಈ ಘಟನೆಗಳು ಮರುಕಳಿಸುತ್ತಿವೆ. ಇತ್ತೀಚಿಗೆ ಸಂಭವಿಸಿದ್ದ ಸೂರ್ಯಗ್ರಹಣದ ವೇಳೆ ವಿಚಿತ್ರ ವಸ್ತುವೊಂದು ಮೋಡಗಳ ನಡುವೆ ಮರೆಯಾಗಿದ್ದ ಘಟನೆ ನಡೆದಿತ್ತು.
ಈ ಘಟನೆ ನಡೆದ ಬಳಿಕ ಇದೀಗ ಮತ್ತೊಂದು ವಿಡಿಯೋದಲ್ಲಿ ವಿಚಿತ್ರ ವಸ್ತುವೊಂದು ಆಕಾಶದಲ್ಲಿ ಹಾರಾಡಿದ ಘಟನೆ ವರದಿಯಾಗಿದೆ. ಈ ವಿಡಿಯೋವನ್ನು ಮಹಿಳೆಯೊಬ್ಬರು ತಾವು ಪ್ರಯಾಣಿಸುತ್ತಿದ್ದ ವಿಮಾನದ ಕಿಟಕಿಯ ಮೂಲಕ ಸೆರೆಹಿಡಿದು ಹಂಚಿಕೊಂಡಿದ್ದಾರೆ. ಇಲ್ಲಿಯೂ ಸಹ ಆ ವಸ್ತು ಯಾವುದು ಎಂದು ಪತ್ತೆ ಮಾಡುವುದು ಕಷ್ಟವಾಗಿದೆ.

ಮಿಚೆಲ್ ರೆಯೆಸ್ ಎಂಬಾಕೆ ಲಾಗಾರ್ಡಿಯಾ ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸುವಾಗ ನ್ಯೂಯಾರ್ಕ್‌ನ ಕ್ವೀನ್ಸ್ ನಗರದ ಮೇಲ್ಭಾಗದಲ್ಲಿ ಇಂತಹದೊಂದು ವಿಚಿತ್ರ ವಸ್ತು ಪತ್ತೆಯಾಗಿದೆ. ಕಪ್ಪು ಬಣ್ಣದ ವಸ್ತುವೊಂದು ಆಕಾಶದಲ್ಲಿ ಕಾಣಿಸುತ್ತಿದ್ದು, ಆ ವಸ್ತು ಯಾವುದು ಎಂಬುದನ್ನು ಪತ್ತೆ ಮಾಡಲು ಕಷ್ಟವಾಗಿದೆ.
ಈ ಸಂಬಂಧ ವಿಡಿಯೋ ಹಂಚಿಕೊಂಡಿರುವ ಅವರು, ನ್ಯೂಯಾರ್ಕ್‌ಗೆ ತೆರಳುವಾಗ ನಾನು ನನ್ನ ಫ್ಲೈಟ್ ಮೂಲಕ ಈ ವಿಡಿಯೋ ಸೆರೆಹಿಡಿದಿದ್ದೇನೆ. ಯಾರಾದರು ಇದರ ಗುರುತು ಪತ್ತೆ ಮಾಡಲು ಸಹಾಯ ಮಾಡಿ. ವಿಡಿಯೋ ಮತ್ತು ಫೋಟೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಪೋಸ್ಟ್ ಆದ ಬಳಿಕ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಆಕೆ ಸುಂದರವಾದ ಸೇತುವೆಯನ್ನು ಸೆರೆಹಿಡಿಯುವಾಗ ಥಟ್ ಎಂದು ಕಪ್ಪು ಬಣ್ಣದ ವಸ್ತುವೊಂದು ಅತೀ ವೇಗವಾಗಿ ಹಾದು ಹೋಗುತ್ತದೆ. ಆದರೆ ಆ ವಸ್ತು ಏನು ಎಂಬುದು ಪತ್ತೆಯಾಗುವುದಿಲ್ಲ.
ಆದರೆ ಈ ವಿಡಿಯೋ ಕುರಿತು ಯುಎಫ್‌ಓ ತಜ್ಞರು ಹಾಗೂ ಅನ್ಯಗ್ರಹ ಜೀವಿಗಳ ಕುರಿತು ವಿಶ್ಲೇಷಣೆ ನಡೆಸುವರು ಹೇಳುತ್ತಿರುವುದು ಬೇರೆಯಾಗಿದೆ. ಬೆನ್ ಹ್ಯಾನ್ಸೆನ್ ಪ್ರಕಾರ, ಈ ವಿಡಿಯೋ ನಕಲಿಯಾಗಿರ ಬಹುದು ಎಂದಿದ್ದಾರೆ. ಏಕೆಂದರೆ ಏಲಿಯನ್ ಅಥವಾ ಯುಎಫ್‌ಓಗಳು ವಿಮಾನಗಳು ಹಾರಾಡುವ ಎತ್ತರಕ್ಕೆ ಸಮನಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲವಂತೆ, ಸಾಮಾನ್ಯವಾಗಿ ಅವು ತುಂಬ ಎತ್ತರದಲ್ಲಿ ಕಂಡುಬರುತ್ತವೆ. ಹೀಗೇನಾದರು ತುಂಬ ಕೆಳಗೆ ಕಂಡುಬಂದಿದ್ದರೆ ಅದು ಮತ್ತಷ್ಟು ಅಪಾಯಕಾರಿ ಎಂದಿದ್ದಾರೆ.
ಜೊತೆಗೆ ಈ ಪೋಸ್ಟ್‌ಗೆ ಉತ್ತರಿಸಿರುವ ಮ್ಯಾಕ್ನಮೆರಾ ಎಂಬುವರು ಇದೇ ರೀತಿಯ ವಸ್ತು ತನ್ನ ಮನೆ ಮೇಲೆಯೂ ನೋಡಿರುವುದಾಗಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಯಾವ ದಿನ ಎಂಬುದನ್ನು ಅವರ ಸ್ಪಷ್ಟಪಡಿಸಿಲ್ಲ. ಕೆಲವರ ಪ್ರಕಾರ ವಿಮಾನದ ಯಾವುದೋ ತುಂಡು ಗಾಳಿಯಲ್ಲಿ ಹಾರಿ ಹೋಗಿದೆ ಎನ್ನುತ್ತಿದ್ದಾರೆ.
ಇದಕ್ಕೂ ಮೊದಲು ಅರಿಝೋನಾದಲ್ಲಿ ನಿಗೂಢವಾದ ನೀಲಿ ಬಣ್ಣದ ಹೊಳೆಯುವ ವಸ್ತುವೊಂದು ಆಕಾಶದಲ್ಲಿ ಕಂಡುಬಂದಿತ್ತು. ನಿಧಾನವಾಗಿ ಅದು ಚಲಿಸಿದಂತೆ ಕಂಡುಬಂದಿತ್ತು, ಈ ವಿಡಿಯೋ ಸಹ ವೈರಲ್ ಆಗಿ ಯುಎಫ್‌ಓ ಕುರಿತ ಚರ್ಚೆಗೆ ಕಾರಣವಾಗಿತ್ತು. ಇದಲ್ಲದೆ ಗ್ರಹಣದ ದಿನವೂ ಯುಸ್‌ನ ಆರ್ಲಿಂಗ್ಟನ್ ಪ್ರದೇಶದಲ್ಲಿ ಸೂರ್ಯನ ವೀಕ್ಷಿಸುವಾಗ ವಿಚಿತ್ರ ವಸ್ತುವೊಂದು ಮೋಡಗಳ ನಡುವೆ ಮರೆಯಾಗಿತ್ತು. ಅಲ್ಲಿ ಗ್ರಹಣ ನೋಡಲು ನೆರೆದಿದ್ದ ಮಂದಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದರು. ಈ ರೀತಿಯ ಘಟನೆಗಳನ್ನು ವರದಿ ಮಾಡಲೆಂದೆ ಒಂದು ಸಂಸ್ಥೆ ಇದ್ದು, ಇಂತಹ ಘಟನೆಗಳ ಮೇಲೆ ಕಣ್ಣಿಟ್ಟಿರಲಿದೆ.
ಇದರ ಜೊತೆ ಕ್ಯಾಲಿಫೋರ್ನಿಯಾದ ಸಿಕ್ವೊಯಾ ಪಾರ್ಕ್‌ನ ಮೇಲೆ ಮಾನವ ಆಕೃತಿಯ ವಿಚಿತ್ರ ವಸ್ತುವೊಂದು ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ನೀಲಿ ಆಕಾಶ ಬಿಳಿಯಾದ ಆಕೃತಿಯೊಂದು ಕಾಣಿಸಿಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.



Click it and Unblock the Notifications
