Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಗೊರಿಲ್ಲಾದೊಂದಿಗೆ ಬಾಕ್ಸಿಂಗ್ ಅವಕಾಶಕ್ಕೆ 10 ಸಾವಿರ ಡಾಲರ್ ನೀಡಿದ್ದ ಟೈಸನ್..! ಆಮೇಲೆ ಆಗಿದ್ದೇನು?
ವಿಶ್ವದ ಶ್ರೇಷ್ಟ ಬಾಕ್ಸಿಂಗ್ ಕಿಂಗ್ ಮೈಕ್ ಟೈಸನ್ ಕುರಿತು ನೀವೆಲ್ಲಾ ಕೇಳಿರಬಹುದು. ದಿಗ್ಗಜ ಬಾಕ್ಸಿಂಗ್ ಪ್ರಮುಖದಲ್ಲಿ ಮೊದಲ ಸ್ಥಾನ ಈ ಮೈಕ್ ಟೈಸನ್‌ಗೆ ಇದೆ. ಹಲವು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಅವರು ಬಾಕ್ಸಿಂಗ್ ಲೋಕದಲ್ಲಿ ರಾಜರಂತೆ ಮೆರೆದವರು. ಅವರು ಬಾಲಿವುಡ್ ಸಿನಿಮಾದಲ್ಲೂ ನಟಿಸಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು. ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾದಲ್ಲಿ ಮೈಕ್ ಟೈಸನ್ ನಟಿಸಿದ್ದರು. ಹಾಗೆ ಕನ್ನಡದ ಪೊಗರು ಸಿನಿಮಾದಲ್ಲಿ ನಟಿಸಲು ಒಪ್ಪಿದ್ದರು, ಆದ್ರೆ ಕೊನೆ ಗಳಿಗೆಯಲ್ಲಿ ಅವರು ನಟಿಸಲು ಒಪ್ಪಿರಲಿಲ್ಲ.
ಇಂತಹ ದಿಗ್ಗಜ ಚಾಂಪಿಯನ್ ಹಾಗೆ ಮತ್ತೋರ್ವ ಚಾಂಪಿಯನ್ ಜೇಕ್ ಪಾಲ್ ನಡುವೆ ಈಗ ಮತ್ತೆ ಪಂದ್ಯ ನಡೆದಿದೆ. ಯುಎಸ್ ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಸ್ಟೇಡಿಯಂನಲ್ಲಿ ಮೈಕ್ ಟೈಸನ್ ಹಾಗೂ ಜೇಕ್ ಪಾಲ್ ನಡುವೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜೇಕ್ ಜಯಗಳಿಸಿದ್ದರು. ಈ ಪಂದ್ಯವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನಿನ್ನೆ ಪ್ರಸಾರ ಮಾಡಲಾಗಿತ್ತು.

ಈ ಪಂದ್ಯವನ್ನು 60 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದು ನೆಟ್‌ಫ್ಲಿಕ್ಸ್ ತಿಳಿಸಿದೆ. ಹಾಗೆ ಈ ಸಮಯದಲ್ಲಿ ನೆಟ್ ಫ್ಲಿಕ್ಸ್ ಕ್ರ್ಯಾಷ್ ಆಗಿದ್ದನ್ನು ಕೂಡ ವೀಕ್ಷಕರು ಹಂಚಿಕೊಂಡಿದ್ದಾರೆ. ಮೈಕ್ ಟೈಸನ್ ಪಂದ್ಯ ಹಾಗೂ ಅವರು ಎಲ್ಲಾದರು ಕಾಣಿಸಿಕೊಂಡರೆ ದೊಡ್ಡ ಸುದ್ದಿಯಾಗುತ್ತದೆ. ಈ ಬಾರಿಯ ಈ ಪಂದ್ಯ ಭಾರೀ ಕುತೂಹಲಕ್ಕೂ ಕಾರಣವಾಗಿತ್ತು. ಈ ಪಂದ್ಯದಲ್ಲಿ ಜೇಕ್ ಜಯ ಗಳಿಸಿದ್ದಾರೆ.
ಇನ್ನು ಮೈಕ್ ಟೈಸನ್ ದಢೂತಿ ದೇಹದ ಬಾಕ್ಸರ್. ಅಚ್ಚರಿ ಅಂದ್ರೆ ಹಿಂದೊಮ್ಮೆ ಅವರಿಗೆ ಗೊರಿಲ್ಲಾ ಜೊತೆಗೆ ಬಾಕ್ಸಿಕ್ ಮಾಡಲು ಅವಕಾಶ ನೀಡಲಾಗಿತ್ತಂತೆ. ನ್ಯೂಯಾರ್ಕ್ ಮೃಗಾಲಯದಲ್ಲಿ ಗೊರಿಲ್ಲಾ ವಿರುದ್ಧ ಹೋರಾಡಲು ಮೃಗಾಲಯದ ವೀಕ್ಷಕನಿಗೆ 10 ಸಾವಿರ ಡಾಲರ್ ನೀಡಲು ಮುಂದಾಗಿದ್ದರಂತೆ. ಆದ್ರೆ ಅನಂತರ ಏನಾಯಿತು ಎಂಬುದೇ ಇಲ್ಲಿನ ಕುತೂಹಲ.
ಟೈಸನ್ ಮಾಜಿ ಪತ್ನಿ ರಾಬಿನ್ ಗಿವೆನ್ಸ್ ಅವರೊಂದಿಗೆ ಮೃಗಾಲಯಕ್ಕೆ ಭೇಟಿ ನೀಡಿದ್ದ ಸಂಬರ್ಭದಲ್ಲಿ ಟೈಸನ್ ಝೂ ಕೀಪರ್‌ಗೆ 10 ಸಾವಿರ ಡಾಲರ್ ನೀಡಿ ಗೊರಿಲ್ಲಾ ಜೊತೆಗೆ ಬಾಕ್ಸಿಂಗ್ ಮಾಡಲು ಅವಕಾಶ ನೀಡುವಂತೆ ಕೇಳಿದ್ದರಂತೆ. ಆ ಸಿಲ್ವರ್ ಗೊರಿಲ್ಲಾ ಮೈಕ್ ಟೈಸನ್ ಅವರಿಗಿಂತ ದುಪ್ಪಟ್ಟು ತೂಕದ ದುಪ್ಪಟ್ಟು ಬಲಶಾಲಿಯಾದ ಪ್ರಾಣಿಯಾಗಿತ್ತು. ಹೀಗಾಗಿ ಝೂ ಕೀಪರ್ ಈ ಆಫರ್ ಅನ್ನು ಒಪ್ಪಿಕೊಳ್ಳಲಿಲ್ಲ. ಹಾಗೆ ಗೊರಿಲ್ಲಾ ಜೊತೆಗೆ ಬಾಕ್ಸಿಂಗ್ ಮಾಡಲು ಅವಕಾಶ ನಿರಾಕರಿಸಿದ. ಒಂದು ವೇಳೆ ಅವಕಾಶ ನೀಡಿದರು ಮೈಕ್ ಟೈಸನ್ ಗೊರಿಲ್ಲಾ ಜೊತೆಗೆ ಬಾಕ್ಸಿಂಗ್ ಮಾಡುವಾಗ ಟೈಸನ್ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಕೂಡ ಇತ್ತು.
ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಮೈಕ್ ಟೈಸನ್ ಹಂಚಿಕೊಂಡಿದ್ದರು. ಹಾಗೆ ನಾನೆಂತ ಮೂರ್ಖತನದ ಕೆಲಸಕ್ಕೆ ಕೈ ಹಾಕಿದ್ದೆ ಎಂದು ನಕ್ಕಿದ್ದರು. ಅದು ಎಂದಿಗೂ ಸಾಧ್ಯವಾಗುವುದಿಲ್ಲ ಅಂತಲೂ ನನಗೆ ತಿಳಿದಿದೆ ಎಂದು ಹಂಚಿಕೊಂಡಿದ್ದರು. ಮೈಕ್ ಟೈಸನ್ ಸದ್ಯ ವಿಶ್ವದ ಶ್ರೇಷ್ಠ ಬಾಕ್ಸಿಕ್ ಪಟು ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ.
ಮೈಕ್ ಟೈಸನ್ ಕೇವಲ ಬಾಕ್ಸಿಂಕ್‌ನಲ್ಲಿ ಮಾತ್ರ ಕಿಂಗ್ ಆಗಿ ಮೆರೆದವರಲ್ಲ. ಬದಲಿಗೆ ಆಸ್ತಿಯಲ್ಲೂ ಅವರು ಕಿಂಗ್ ಆಗಿದ್ದಾರೆ. ಇತ್ತಿಚಿನ ವರದಿಯಲ್ಲಿ ಅವರು ಬರೋಬ್ಬರಿ 10 ಮಿಲಿಯನ್ ಡಾಲರ್ ನಿವ್ವಳ ಆಸ್ತಿ ಮೌಲ್ಯ ಹೊಂದಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಬಂಗಲೆ, ಐಷಾರಾಮಿ ಕಾರು, ವಾಚ್ ಸೇರಿ ಹಲವು ಆಸ್ತಿ ಹೊಂದಿದ್ದಾರೆ. 58 ವರ್ಷದ ಅವರು ಈಗ ಬಾಕ್ಸಿಂಗ್‌ನಿಂದ ದೂರವೇ ಉಳಿದಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ.



Click it and Unblock the Notifications
