Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ಗ್ರಹಣದ ವಿಧಗಳು: ಏಪ್ರಿಲ್ 20ಕ್ಕೆ ಸಂಭವಿಸಲಿದೆ ಅಪರೂಪದ ಹೈಬ್ರಿಡ್ ನಿಂಗಲೂ ಗ್ರಹಣ
ಏಪ್ರಿಲ್ 20ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ನಭೋ ಮಂಡಲದಲ್ಲಿ ನಡೆಯುವ ಅನೇಕ ಕೌತುಕಗಳಲ್ಲಿ ಗ್ರಹಣ ಕೂಡ ಹೌದು. ಸೂರ್ಯ ಹಾಗೂ ಭೂಮಿ ಮಧ್ಯ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುವುದು. ಸೂರ್ಯಗ್ರಹಣದಲ್ಲಿ ನಾಲ್ಕುವಿಧ, ಅವುಗಳ ಕುರಿತ ಮಾಹಿತಿ ಸಂಪೂರ್ಣವಾಗಿ ನೋಡುವುದಾದರೆ...

1. ಪೂರ್ಣ ಸೂರ್ಯಗ್ರಹಣ: ಭೂಮಿ ಹಾಗೂ ಸೂರ್ಯನ ನಡುವೆ ಚಂದ್ರ ಬಂದು ಸೂರ್ಯನನ್ನು ಸಂಪೂರ್ಣ ಮ್ಎ ಮಾಚಿದಾಗ ಪೂರ್ಣ ಸೂರ್ಯಗ್ರಹಣ ಸಂಭವಿಸುವುದು. ಈ ಸಮಯದಲ್ಲಿ ವಾತಾವರಣದಲ್ಲು ಕತ್ತಲು ಆವರಿಸುವುದು. ಇತರ ಸೂರ್ಯಗ್ರಹಣದಲ್ಲಿ ಸ್ವಲ್ಪ ಬೆಳಕು ಇರುತ್ತದೆ. ಆದರೆ ಪೂರ್ಣ ಸೂರ್ಯಗ್ರಹಣ ಸಂಭವಿಸಿದಾಗ ಸಂಜೆ ಹೊತ್ತಿನಂತೆ ಕಂಡು ಬರುವುದು.
ಪೂರ್ಣ ಸೂರ್ಯಗ್ರಹಣ 2023 ಏಪ್ರಿಲ್ 8, 2024ರಂದು ಸಂಭವಿಸಲಿದೆ.
2. ಪಾರ್ಶ್ವ ಸೂರ್ಯಗ್ರಹಣ: ಭೂಮಿ ಹಾಗೂ ಸೂರ್ಯನ ನಡುವೆ ಚಂದ್ರ ಪಾರ್ಶ್ವವಾಗಿ ಅಡ್ಡಬಂದಾಗ ಪಾರ್ಶ್ವಸೂರ್ಯಗ್ರಹಣ ಸಮಭವಿಸುವುದು. ಇದರಲ್ಲಿ ಸೂರ್ಯ ಸಂಪೂರ್ಣವಾಗಿ ಮರೆಯಾಗುವುದಿಲ್ಲ. ಈ ಪಾರ್ಶ್ವ ಸೂರ್ಯಗ್ರಹಣದಲ್ಲಿ ಗ್ರಹಣ ಅರ್ಧ ಚಂದ್ರಾಕೃತಿಯಲ್ಲಿ ಕಂಡು ಬರುವುದು.
3. ಆನ್ಯೂಲರ್ ಅಥವಾ ವಾರ್ಷಿಕ ಸೂರ್ಯಗ್ರಹಣ: ಈ ಬಗೆಯ ಸೂರ್ಯಗ್ರಹಣ ಸೂರ್ಯ ಹಾಗೂ ಭೂಮಿ ಬಂದಾಗ ಸಂಭವಿಸುವುದು.ಆದರೆ ಈ ಅವಧಿಯಲ್ಲಿ ಚಂದ್ರ ಭೂಮಿಯ ಸಮೀಪದಲ್ಲಿ ಅಥವಾ ದೂರದಲ್ಲಿ ಇರುವುದರಿಂದ ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಸೂರ್ಯನ ಪ್ರಕಾಶಮಾನವಾದ ಬೆಳಕನ್ನು ಚಂದ್ರ ಸಂಪೂರ್ಣವಾಗಿ ಆವರಿಸುವುದಿಲ್ಲ. ಇದರಿಂದಾಗಿ ಚಂದ್ರನ ಸುತ್ತ ಉಂಗುರ ಉಂಟಾದಂತೆ ಈ ಸೂರ್ಯಗ್ರಹಣ ಕಂಡು ಬರುವುದು. ಈ ಸೂರ್ಯಗ್ರಹಣ 2023ರಲ್ಲಿ ಅಕ್ಟೋಬರ್ 14ರಂದು ಸಂಭವಿಸಲಿದೆ.
4. ಹೈಬ್ರಿಡ್ ಸೂರ್ಯಗ್ರಹಣ
ಈ ಬಾರಿ ಏಪ್ರಿಲ್ 20ರಂದು ಸಂಭವಿಸಲಿರುವ ಸೂರ್ಯಗ್ರಹಣ ಹೈಬ್ರಿಡ್ ಸೂರ್ಯಗ್ರಹಣವಾಗಿದೆ. ಭೂಮಿಯ ಮೇಲ್ಮೆ ವಕ್ರವಾಗಿರುವುದರಿಂದ ಗ್ರಹಣ ವಾರ್ಷಿಕ ಸೂರ್ಯಗ್ರಹಣದಿಂದ ಪೂರ್ಣ ಸೂರ್ಯಗ್ರಹಣದತ್ತ ಬದಲಾಗುವುದು. ಚಂದ್ರದ ನೆರಳು ಪ್ರಪಂಚಾದ್ಯಂತ ಸುತ್ತುವಾಗ ಈ ರೀತಿ ಉಂಟಾಗುವುದು. ಇದು ಅಪರೂಪದ ವಿದ್ಯಾಮಾನವಾಗಿದ್ದು ಇದನ್ನು ಹೈಬ್ರಿಡ್ ಸೂರ್ಯಗ್ರಹಣ ಎಂದು ಕರೆಯಲಾಗುವುದು.



Click it and Unblock the Notifications