Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಟಪ್ಪರ್‌ವೇರ್ ನೀರಿನ ಬಾಟಲಿ, ಟಿಫಿನ್ ಬಾಕ್ಸ್ ಬಳಸಿದ್ದೀರಾ?: ಇನ್ಮುಂದೆ ನೋಡೋಕೆ ಸಿಗೋದೆ ಡೌಟ್..!!
ನೀವು ಚಿಕ್ಕವರಿರುವಾಗ ಅಥವಾ ಆಫೀಸ್, ಕೆಲಸಕ್ಕೆ, ಇಲ್ಲವೆ ಹೊರಗೆ ದೂರ ಪ್ರಯಾಣ ಮಾಡುವಾಗ ಈ ಬಾಟಲಿ ಅಥವಾ ಟಿಫಿನ್ ಬಾಕ್ಸ್ ಬಳಸಿರುತ್ತೇವೆ. ಒಂದು ಕಾಲದಲ್ಲಿ ಈ ಬಾಟಲಿ ಇರದ ಮನೆಯೇ ಇಲ್ಲ ಎನ್ನಬಹುದು. ನಾವು ಸಹ ಶಾಲೆಗೆ, ಕಾಲೇಜಿಗೆ ನೀರು ತುಂಬಿಸಿಕೊಂಡು ಹೋಗುತ್ತಿದ್ದ ನೆನಪು ಇಂದಿಗೂ ಹಾಗೆ ಇದೆ.
ಆದ್ರೆ ಇದಾದ ಬಳಿಕ ಪ್ಲಾಸ್ಟಿಕ್ ಬಾಟಲಿಯ ಬದಲಾಗಿ, ಕಾಪರ್, ಸ್ಟೀಲ್‌ನಂತಹ ಬಾಟಲಿಗಳ ಹಾವಳಿಯಿಂದ ಈ ಪ್ಲಾಸ್ಟಿಕ್‌ನ ಬಾಟಲಿ ಮೂಲೆ ಸೇರಿತು. ಈಗಲೂ ಕೂಡ ಮನೆಯಲ್ಲಿ ಈ ಬಾಟಲಿ ಇದ್ದರೆ ಅದು ಮೂಲೆಯಲ್ಲೇ ಬಿದ್ದಿರುತ್ತೆ. ಇದು ಫೇಮಸ್ ಆಗಿದ್ದೇ ಕಂಪನಿಯ ಹೆಸರಿನಿಂದ ಟಪ್ಪರ್‌ವೇರ್ ಎಂಬ ಕಂಪನಿ ಈ ಬಾಟಲಿ ಹಾಗೂ ಟಿಫಿನ್ ಬಾಕ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.

ಟಪ್ಪರ್‌ವೇರ್ ಉತ್ಪನ್ನಗಳೆಂದರೆ ಗೃಹಿಣಿಯರಿಗೂ ಅಚ್ಚು ಮೆಚ್ಚಾಗಿತ್ತು. ಏಕೆಂದರೆ ಎಲ್ಲಾ ರೀತಿಯ ಗೃಹ ಬಳಕೆ ಉತ್ಪನ್ನಗಳನ್ನು ಈ ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಡಿಸೈನ್‌ನಲ್ಲಿ ಹೊರತರುತ್ತಿತ್ತು. ಹೀಗಾಗಿ ಟಪ್ಪರ್‌ವೇರ್ ಕಂಪನಿ ಭಾರತೀಯರ ಮನೆ ಮನೆಯ ವಸ್ತು ನೀಡುವ ಕಂಪನಿಯಾಗಿತ್ತು. ಇದೇ ಟಪ್ಪರ್‌ವೇರ್ ಬಾಟಲಿ ನಾವೆಲ್ಲಾ ಬಳಸಿದ್ದೆವು.
ಆದ್ರೆ ಇನ್ನು ಮುಂದೆ ಈ ಬಾಟಲಿ ಕಣ್ಮರೆಯಾಗಲಿದೆ. ದಶಕಗಳಿಂದ ಮಾರುಕಟ್ಟೆಯಲ್ಲಿ ಮೆರೆದಾಡಿದ್ದ ಈ ಉತ್ಪನ್ನಗಳು ಇನ್ಮುಂದೆ ಕಾಣಿಸದಂತೆ ಮರೆಯಾಗಲಿದೆ. ನೀವು ಮಾರುಕಟ್ಟೆಯಲ್ಲಿ ಹುಡುಕಾಡಿದರು ಕೂಡ ಟಪ್ಪರ್‌ವೇರ್ ಕಂಪನಿಯ ಉತ್ಪನ್ನ ಸಿಗೋದು ಅನುಮಾನವಾಗಲಿದೆ.
ದಿವಾಳಿಯಾಯಿತು ಟಪ್ಪರ್‌ವೇರ್
ಅಮೆರಿಕನ್ ಕಂಪನಿಯಾಗಿದ್ದ ಇದನ್ನು 1942ರಲ್ಲಿ ಅರ್ಲ್ ಟಪ್ಪರ್ ಆರಂಭಿಸಿದ್ದರು. ಕೆಲವೇ ವರ್ಷದಲ್ಲಿ ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಗೃಹಪಯೋಗಿ ಉತ್ಪನ್ನ ಮಾರಾಟ ಮಾಡಿದ ಸಂಸ್ಥೆ ಎಂಬ ಕೀರ್ತಿ ಗಳಿಸಿತು. ಈ ಕಂಪನಿ ತಯಾರಿಸದ ವಸ್ತುಗಳೇ ಇಲ್ಲ ಎಂಬ ಮಟ್ಟಿಗೆ ಬೆಳೆಯಿತು. ಹೀಗಾಗಿ ಭಾರತದಲ್ಲೂ ಅತ್ಯಂತ ಬೇಗ ಪ್ರಸಿದ್ಧಿ ಪಡೆದಿತ್ತು.
ಕೋವಿಡ್ ಬಳಿಕ ನಷ್ಟದತ್ತ
ಕೋವಿಡ್ ಕಾಲ ಸಣ್ಣ ಪುಟ್ಟ ಕಂಪನಿಗಳ ನಾಶಕ್ಕೆ ಕಾರಣವಾಗಿದ್ದು ಮಾತ್ರವಲ್ಲ ಇಂತಹ ಬಹುಕೋಟಿ ಉದ್ಯಮವನ್ನೇ ಅಲುಗಾಡಿಸಿತ್ತು, ಕೊರೊನಾ ಬಂದೊದಗಿದ 2 ವರ್ಷದಲ್ಲೇ ಲಾಭದಲ್ಲಿದ್ದ ಕಂಪನಿ ನಷ್ಟದ ಹಾದಿ ಹಿಡಿದಿತ್ತು. ಕಚ್ಚಾ ವಸ್ತುಗಳ ಕೊರತೆ, ದುಬಾರಿಯಾದ ನಿರ್ಮಾಣ ವೆಚ್ಚ ಎಲ್ಲವೂ ಕಂಪನಿಯ ವೆಚ್ಚ ದುಪ್ಪಟ್ಟಾಗಿಸಿತು.
ಆಗಸ್ಟ್‌ನಲ್ಲಿ, ಟಪ್ಪರ್‌ವೇರ್ ನವೆಂಬರ್ 2022 ರಿಂದ ನಾಲ್ಕನೇ ಬಾರಿಗೆ ಮುಂದುವರಿಯುವ ಅದರ ಸಾಮರ್ಥ್ಯದ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತು. ಈಗ ತನ್ನ ಬ್ರಾಂಡ್ ಉಳಿಸಿಕೊಳ್ಳಲು ನ್ಯಾಯಾಲಯವನ್ನು ಕೋರಿದೆ. ಕಂಪನಿಯು ಸುಮಾರು ₹4 ಸಾವಿರ ಕೋಟಿಯಿಂದ ₹10 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದೆ. ಆದರೆ ಸಾಲವು ₹10 ಸಾವಿರ ಕೋಟಿಯಿಂದ ₹1 ಲಕ್ಷ ಕೊಟಿಯಷ್ಟಿದೆ ಎಂದು ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಿವಾಳಿ ಅರ್ಜಿಯಲ್ಲಿ ತಿಳಿಸಿದೆ. ಈ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಕಂಪನಿಯ ಶೇರು ಮೌಲ್ಯ ಶೇ.50ರಷ್ಟು ಕುಸಿತಕಂಡು ದೊಡ್ಡ ಹೊಡೆತ ನೀಡಿದೆ.
ಸದ್ಯ ಈಗ ಕಂಪನಿ ಆನ್‌ಲೈನ್ ಮಾರುಕಟ್ಟೆಯತ್ತ ಸಂಪೂರ್ಣ ತೊಡಗಿಸಿಕೊಳ್ಳುವುದಾಗಿ ಅರ್ಜಿಯಲ್ಲಿ ತಿಳಿಸಿದೆ. ಹಾಗೆ ವಿನ್ಯಾಸದಲ್ಲಿ ಬದಲಾವಣೆ ಸೇರಿದಂತೆ ಗ್ರಾಹಕ ಸ್ನೇಹಿ ಹಾಗೂ ಪರಿಸರ ಸ್ನೇಹಿ ಉತ್ಪನ್ನ ಮಾರುಕಟ್ಟೆಗೆ ತರುವುದಾಗಿಯೂ ಹೇಳಿದೆ. ಆದ್ರೆ ಒಮ್ಮೆ ದಿವಾಳಿಯ ಕದ ತಟ್ಟಿರುವ ಸಂಸ್ಥೆ ಮತ್ತೆ ತನ್ನ ಮಾರುಕಟ್ಟೆ ಉಳಿಸಿಕೊಳ್ಳುವುದು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಷ್ಟು ಸುಲಭದ ಮಾತಲ್ಲ. ಹಿಂದೆಂದಿಗಿಂತಲೂ ಹೊಸತನದಲ್ಲಿ ಮಾರುಕಟ್ಟೆಗೆ ಆಗಮಿಸಿದರೆ ಗ್ರಾಹಕರು ಮತ್ತೆ ಟಪ್ಪರ್‌ವೇರ್ ಉತ್ಪನ್ನ ಬಳಸಬಹುದಾಗಿದೆ.



Click it and Unblock the Notifications
