Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Tulsi Vivah 2025: ತುಳಸಿ ವಿವಾಹ ಯಾವಾಗ? ಏಕೆ ಆಚರಿಸಬೇಕು ಗೊತ್ತಾ?
ಹಿಂದೂ ಪುರಾಣಗಳಲ್ಲಿ ಹಬ್ಬಗಳಿಗೆ ಬಹಳ ಮುಖ್ಯ ಪ್ರಾಮುಖ್ಯತೆ ನೀಡಲಾಗುತ್ತದೆ. ಅದ್ರಲ್ಲೂ ವಿಶೇಷವಾಗಿ ಪುರಾಣಗಳಲ್ಲಿ ಉಲ್ಲೇಖವಿರುವಂತಹ ಹಬ್ಬಗಳನ್ನು ಎಲ್ಲರು ಮಾಡುತ್ತಾರೆ. ಹಾಗೆ ಅವುಗಳಿಗೆ ಅಷ್ಟೇ ಮುಖ್ಯ ಸ್ಥಾನ ನೀಡಲಾಗುತ್ತೆ. ಈ ನವರಾತ್ರಿ ಹಾಗೆ ದಸರಾ ಸಮಯದಲ್ಲಿ ಆಚರಿಸುವ ಹಿಂದೂ ಕೆಲವೊಂದು ಆಚರಣೆಗಳು ಬಹಳ ಮುಖ್ಯ ಎನಿಸಲಿದೆ.
ಹಾಗೆ ದಸರಾದಲ್ಲಿ ಬರುವ ತುಳಸಿ ವಿವಾಹ ಕೂಡ ಬಹಳ ಮುಖ್ಯ ಹಬ್ಬ ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬವನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ಆಚರಿಸಲಾಗುತ್ತದೆ. ಇದನ್ನು ದೇವುತಾನಿ ಏಕಾದಶಿಯ ನಂತರದ ದಿನ ಆಚರಿಸಲಾಗುತ್ತದೆ.

ತುಳಸಿ ಪೂಜಿಸುವ ಪ್ರತಿಯೊಬ್ಬರು ಇದನ್ನು ಆಚರಿಸುತ್ತಾರೆ. ಹಾಗೆ ಆಚರಿಸುವುದರಿಂದ ಬಹಳ ಲಾಭವಿದೆ ಎಂದು ಹೇಳಲಾಗಿದೆ. ಅದ್ರಲ್ಲೂ ಈ ದಿನದಿಂದಲೇ ತುಳಸಿ ಪೂಜೆಯನ್ನಾಗಿ ಆಚರಿಸಿಕೊಂಡು ಬರಲಾಗಿದೆ. ಮುಂದಿನ ಷಷ್ಠಿ ದೀಪೋತ್ಸವದ ವರೆಗೂ ಇದು ಮುಂದುವರೆಯಲಿದೆ. ಈ ತುಳಸಿ ವಿವಾಹವನ್ನು ನವೆಂಬರ್ 2ರಂದು ಆಚರಿಸಲಾಗುತ್ತದೆ.
ಈ ದಿನದಂದು ಭಗವಾನ್ ವಿಷ್ಣುವು ತನ್ನ ಸುದೀರ್ಘ 4 ತಿಂಗಳ ಯೋಗ ನಿದ್ರೆಯಿಂದ ಎಚ್ಚರಗೊಂಡ ಎಂದು ಹೇಳಲಾಗಿದೆ. ಈ ದಿನದ ಬಳಿಕ ವಿಷ್ಣು ಶುಭ ಘಟನೆಗಳಿಗೆ ಕಾರಣನಾದನು ಎಂದು ಕೂಡ ಪುರಾಣಗಳು ಹೇಳುತ್ತವೆ. ಹೀಗಾಗಿ ತುಳಸಿ ಪೂಜೆಯನ್ನು ಬಹಳಷ್ಟು ಮಂದಿ ಆಚರಿಸುತ್ತಾರೆ.
ದೃಕ್ ಪಂಚಾಂಗದ ಪ್ರಕಾರ ಕಾರ್ತಿಕ ಶುಕ್ಲ ದ್ವಾದಶಿ ನವೆಂಬರ್ 2 ರಂದು ಬೆಳಗ್ಗೆ 7:31 ಕ್ಕೆ ಪ್ರಾರಂಭವಾಗಿ ನವೆಂಬರ್ 3 ರಂದು ಬೆಳಗ್ಗೆ 5:07 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಈ ವರ್ಷ, ತುಳಸಿ ವಿವಾಹವನ್ನು ನವೆಂಬರ್ 2 ರ ಭಾನುವಾರದಂದು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ ಈ ದಿನವೇ ತುಳಸಿಯು ದೇವುತ್ಥಾನ ಏಕಾದಶಿಯಂದು ಸಾಲಿಗ್ರಾಮವನ್ನು ಮದುವೆಯಾಗುತ್ತಾಳೆ ಎಂದು ಹೇಳಲಾಗಿದೆ.
ತುಳಸಿ ವಿವಾಹದ ಸಾರವು ತುಳಸಿ ದೇವಿ ಮತ್ತು ಸಾಲಿಗ್ರಾಮದ ದೈವಿಕ ಮಿಲನದ ಆಚರಣೆಯಾಗಿದೆ. ಮಂಟಪವನ್ನು ಅಲಂಕರಿಸುವುದು, ವಧುವನ್ನು ದಾನ ಮಾಡುವುದು ಮತ್ತು ಏಳು ವ್ರತಗಳನ್ನು ತೆಗೆದುಕೊಳ್ಳುವುದು ಮುಂತಾದ ಸಾಂಪ್ರದಾಯಿಕ ವಿವಾಹ ಆಚರಣೆಗಳನ್ನು ನೈಜ ವಿವಾಹದಂತೆ ಪೂರ್ಣ ಆಚರಣೆಗಳೊಂದಿಗೆ ನಡೆಸಲಾಗುತ್ತದೆ.
ದೇವುತಾನಿ ಏಕಾದಶಿಯ ನಂತರ ವಿಷ್ಣು ಯೋಗ್ನಿದ್ರದಿಂದ ಎಚ್ಚರವಾದಾಗ, ಮದುವೆಗಳು ಮತ್ತು ಗೃಹಪ್ರವೇಶ ಸಮಾರಂಭಗಳಂತಹ ಎಲ್ಲಾ ಶುಭ ಸಮಾರಂಭಗಳು ಪ್ರಾರಂಭವಾಗುತ್ತವೆ ಎಂದು ಪರಿಗಣಿಸಲಾಗುತ್ತದೆ. ತುಳಸಿ ವಿವಾಹವು ಈ ಶುಭ ಸಮಾರಂಭಗಳ ಆರಂಭವನ್ನು ಸೂಚಿಸುತ್ತದೆ. ಈ ಸಮಯದಲ್ಲಿ ದೀಪಾವಳಿ ಬರುವುದು, ದೀಪಾವಳಿಯಲ್ಲಿ ತುಳಸಿ ಪೂಜೆ ಹಾಗೆ ಗೋಪೂಜೆಗಳು, ಶುಭ ಕಾರ್ಯಗಳು ಆರಂಭವಾಗಲಿವೆ.
ತುಳಸಿ ಪೂಜೆ ಹಾಗೂ ವಿವಾಹವನ್ನು ನಿರ್ವಹಿಸುವ ಕುಟುಂಬವು ಸಂತೋಷ, ಸಮೃದ್ಧಿ ಮತ್ ಅದೃಷ್ಟವನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ಉಪವಾಸವನ್ನು ಆಚರಿಸುವುದು ಮನೆಯ ಸಂಪೂರ್ಣ ಯೋಗಕ್ಷೇಕ್ಕೆ ಕಾರಣವಾಗಲಿದೆ ಎಂದು ನಂಬಲಾಗಿದೆ. ಹಾಗೆ ಪಾಪ ಕರ್ಮಗಳು, ನಿಮಗೆ ತಿಳಿಯದೆಯೇ ಮಾಡಲಾದ ಕರ್ಮಗಳು ಕೂಡ ಇದರಿಂದ ಸಮಾಪ್ತಿಯಾಗಲಿದೆ. ಮೋಕ್ಷ ಸಾಧನೆಗೆ, ಮನಸ್ಸಿನ ಶಾಂತಿಗೆ ಇದು ಕಾರಣವಾಗಲಿದೆ ಎಂದು ನಂಬಲಾಗಿದೆ.
ಸಂಧ್ಯಾಕಾಲವನ್ನು ಸಾಲಿಗ್ರಾಮ ಮತ್ತು ತುಳಸಿ ವಿವಾಹಕ್ಕೆ ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತ ಮತ್ತು ಚಂದ್ರೋದಯವಾಗುವ ಸಮಯದಲ್ಲಿ ಈ ಆಚರಣೆ ಮಾಡಲಾಗುತ್ತದೆ. ಈ ಸಮಯ ಸಂಜೆ 05 ರಿಂದ 07 ರವರೆಗೆ ಇರಲಿದೆ. ಹಾಗೆ ತುಳಸಿ ಗಿಡವನ್ನು ಹೊಸದಾಗಿ ನೆಟ್ಟು ಕೂಡ ಈ ಆಚರಣೆ ಮಾಡಲಾಗುತ್ತದೆ. ಇದರಿಂದ ವಿಷ್ಣುವಿನ ಆಶೀರ್ವಾದ ಸಿಗಲಿದೆ ಎಂದು ಹೇಳಲಾಗಿದೆ.



Click it and Unblock the Notifications