Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
Tulsi Vivah 2025: ತುಳಸಿ ಪೂಜೆಯ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರಗಳು!
ಎಲ್ಲೆಡೆ ತುಳಸಿ ಹಬ್ಬದ ಸಂಭ್ರಮ. 'ತುಳಸಿ' ಎಂದರೆ ಗುಣದಲ್ಲಿ ಯಾವುದಕ್ಕೂ ಹೋಲಿಕೆ ಇಲ್ಲದ ಸಸ್ಯ. ಈ ದಿನವನ್ನು ಕೆಲವರು 'ಕಿರು ದೀಪಾವಳಿ' ಎಂತಲೂ ಕರೆಯುವರು. ಆಷಾಢ ಶುಕ್ಲ ಪಕ್ಷದ ದೇವಶಯನಿ ಏಕಾದಶಿಯಂದು ಶ್ರೀ ಹರಿವಿಷ್ಣುವು ನಾಲ್ಕು ತಿಂಗಳ ಯೋಗ ನಿದ್ರೆಯಿಂದ ಎಚ್ಚರಗೊಳ್ಳುವ ಮಹತ್ವದ ದಿನವಿದು. ವಿಷ್ಣುವಿನ ಜಾಗೃತಿಯ ನಂತರ, ತುಳಸಿಯನ್ನು ಸಾಲಿಗ್ರಾಮ ಅವತಾರದೊಂದಿಗೆ ವಿವಾಹ (Tulsi Vivah) ಮಾಡುವ ಸಂಪ್ರದಾಯವಿದೆ. ಇದನ್ನೇ ಕಾರ್ತಿಕ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹವಾಗಿ ಆಚರಿಸಲಾಗುತ್ತದೆ.
ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹವನ್ನು (Tulsi Vivah Date 2025) ಆಚರಿಸಲಾಗುತ್ತದೆ. ಈ ದಿನ ತುಳಸಿಯನ್ನು ಸಾಲಿಗ್ರಾಮದೊಂದಿಗೆ ವಿವಾಹ ಮಾಡಿಸಲಾಗುತ್ತದೆ. ದೀಪಾವಳಿ ಹಬ್ಬದ ನಂತರ ತುಳಸಿ ವಿವಾಹದ ಸಂಭ್ರಮ ಎಲ್ಲೆಡೆ ಮನೆ ಮಾಡುತ್ತದೆ. ಏಕಾದಶಿ ತಿಥಿಯಂದು ಈ ಹಬ್ಬವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಇದು ವೈವಾಹಿಕ ಜೀವನದ ಕಷ್ಟಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ತುಳಸಿ ವಿವಾಹದ ಶುಭ ಮುಹೂರ್ತ (Tulsi Vivah Shubh Muhurat) ಮತ್ತು ಪೂಜಾ ವಿಧಾನದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ತುಳಸಿ ವಿವಾಹ 2025: ದಿನ ಮತ್ತು ಮುಹೂರ್ತ
ದ್ವಾದಶಿ ತಿಥಿಯು ನವೆಂಬರ್ 2 ರಂದು ಬೆಳಗ್ಗೆ 07:31 ಗಂಟೆಗೆ ಪ್ರಾರಂಭವಾಗಿ, ನವೆಂಬರ್ 3 ರಂದು ಬೆಳಗ್ಗೆ 05:07 ಗಂಟೆಗೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ತುಳಸಿ ವಿವಾಹವನ್ನು ನವೆಂಬರ್ 2 ರಂದು ಆಚರಿಸಲಾಗುತ್ತದೆ.
ಪೂಜೆಗೆ ಶುಭ ಸಮಯ
• ಸೂರ್ಯೋದಯ: ಬೆಳಗ್ಗೆ 06:34
• ಸೂರ್ಯಾಸ್ತ: ಸಂಜೆ 05:35
• ಚಂದ್ರೋದಯ: ಮಧ್ಯಾಹ್ನ 03:21 (ನವೆಂಬರ್ 2 ರಂದು)
• ಚಂದ್ರೋದಯ: ಬೆಳಗ್ಗೆ 03:50 (ನವೆಂಬರ್ 3 ರಂದು)
• ಬ್ರಹ್ಮ ಮುಹೂರ್ತ: ಬೆಳಗ್ಗೆ 04:50 ರಿಂದ ಬೆಳಗ್ಗೆ 05:42
ತುಳಸಿ ವಿವಾಹದ ಪೂಜಾ ವಿಧಾನ
• ತುಳಸಿ ವಿವಾಹದ ದಿನ ಬೆಳಿಗ್ಗೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು.
• ಸಂಜೆ ಸಮಯದಲ್ಲಿ ತುಳಸಿ ವಿವಾಹ ಪೂಜೆ ಮಾಡಲಾಗುತ್ತದೆ.
• ಪೂಜೆಗಾಗಿ, ಶುಭ್ರವಾದ ಬಟ್ಟೆಯ ಮೇಲೆ ತುಳಸಿ ಗಿಡ ಮತ್ತು ಶಾಲಿಗ್ರಾಮವನ್ನು ಸ್ಥಾಪಿಸಿ.
• ನಂತರ ತುಳಸಿ ಮತ್ತು ಶಾಲಿಗ್ರಾಮಕ್ಕೆ ಗಂಗಾಜಲವನ್ನು ಸಿಂಪಡಿಸಿ.
• ತುಳಸಿ ಮತ್ತು ಶಾಲಿಗ್ರಾಮಕ್ಕೆ ಶ್ರೀಗಂಧದ ತಿಲಕವನ್ನು ಹಚ್ಚಿ.
• ತುಳಸಿ ಗಿಡದ ಕುಂಡದ ಮೇಲೆ ಕಬ್ಬಿನಿಂದ ಮಂಟಪ ಮಾಡಿ.
• ತುಳಸಿ ಗಿಡದ ಎಲೆಗಳಿಗೆ ಅರಿಶಿನ, ಕುಂಕುಮ, ಸಿಂಧೂರ, ಬಳೆ, ಬಿಂದಿ ಮುಂತಾದ ವಸ್ತುಗಳನ್ನು ಅರ್ಪಿಸಿ.
• ನೀರು ತುಂಬಿದ ಹೂದಾನಿ ಇಟ್ಟು ತುಪ್ಪದ ದೀಪ ಹಚ್ಚಿ.
• ಕೈಯಲ್ಲಿ ಸಾಲಿಗ್ರಾಮವನ್ನು ಇಟ್ಟುಕೊಂಡು ತುಳಸಿಗೆ ಪ್ರದಕ್ಷಿಣೆ ಹಾಕಿ, ನಂತರ ಆರತಿ ಮಾಡಿ.
• ಪೂಜೆ ಮುಗಿದ ನಂತರ, ಕೈ ಮುಗಿದು ತುಳಸಿ ಮಾತೆ ಮತ್ತು ಸಾಲಿಗ್ರಾಮ ದೇವರನ್ನು ಸಂತೋಷದ ದಾಂಪತ್ಯ ಜೀವನಕ್ಕಾಗಿ ಪ್ರಾರ್ಥಿಸಿ.
ತುಳಸಿ ಪೂಜೆ ಮಾಡುವಾಗ ಪಠಿಸಬೇಕಾದ ಶ್ಲೋಕಗಳು
• ಇದಂ ವ್ರತಂ ಮಯಾದೇವ ಕೃತಂ ಪ್ರೀತ್ಯೈ ತವ ಪ್ರಭೋ |
ನ್ಯೂನಂ ಸಂಪೂರ್ಣತಾಂ ಯಾತು ತ್ವತ್ಪ್ರಸಾದಾತ್ ಜನಾರ್ಧನ||
ಶ್ರೀ ಸಖಿತ್ವಂ ಸದಾನಂದೇ ಮುಕುಂದಸ್ಯ ಸದಾ ಪ್ರಿಯೇ |
ವರದಾಭಯ ಹಸ್ತಾಭ್ಯಾಂ ಮಾಂ ವಿಲೋಕಯ ದುರ್ಲಭೇ |
ಪ್ರಸೀದ ತುಲಸೀದೇವೀ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೋತೇ ತುಲಸೀತ್ವಾಂ ನಮಾಮ್ಯಹಂ |
• ಯಾದೃಷ್ಠಾ ನಿಖಿಲಾಘಸಂಗಶಮನೀ ಸ್ಪ್ರುಷ್ಟ್ಪಾವಪುಪಾವನೀ ರೋಗಾಣಾಮಭಿವಂದಿತಾ ನಿರಸನಿ ಸಿಕ್ತಾಂತಕತ್ರಾಸಿನಿ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ |
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ: |'
ತುಳಸಿ ಪ್ರದಕ್ಷಿಣೆ ವೇಳೆ ಹೇಳಬೇಕಾದ ಮಂತ್ರ
'ತುಲಸೀಲಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿ: |
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾ: ಸರಿತಸ್ತಥಾ |
ವಾಸುದೇವಾದಯೋ ದೇವಾ ವಸಂತಿ ತುಲಸೀವನೇ |
ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಂ |



Click it and Unblock the Notifications