Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕೌಂಟುಬಿಕ ಸಮಸ್ಯೆಗಳಿಂದ ಮುಕ್ತಿ ಸಿಗಬೇಕಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ!
ಮದುವೆ ಎಂದರೆ ಕೇವಲ ಮೂರು ಗಂಟಿನ ನಂಟು ಮಾತ್ರವಲ್ಲ. ಅದಕ್ಕೂ ಮೀರಿದ ಮತ್ತೊಂದು ಬಂಧ ಎಂದರೆ ಅದು ಪ್ರೀತಿ. ಯಾವಾಗ ಗಂಡ ಹಾಗೂ ಹೆಂಡತಿಯ ಮಧ್ಯೆ ಪ್ರೀತಿ, ಕಾಳಜಿ, ಮಮಕಾರ ಹೆಚ್ಚಾಗಿರುತ್ತೋ ಆಗ ಎಂತಹ ಸಮಸ್ಯೆ ಎದುರಾದ್ರೂ ಕೂಡ ಅವರು ಅದನ್ನು ನಿಭಾಯಿಸಿಕೊಂಡು ಹೋಗ್ತಾರೆ.
ಆದ್ರೆ ಕೆಲವು ಸಂಬಂಧಗಳು ಆರಂಭದಲ್ಲಿ ಚೆನ್ನಾಗಿರುವಂತೆ ಕಂಡರೂ ಕೂಡ ಬರು ಬರುತ್ತಾ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳೋದಕ್ಕೆ ಶುರುವಾಗುತ್ತೆ. ಇದಕ್ಕೆ ವಾಸ್ತು ದೋಷ ಕೂಡ ಕಾರಣವಾಗಬಹುದು. ಅಷ್ಟಕ್ಕು ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಯಾವುದೇ ಕಾರಣಕ್ಕೂ ದಾಂಪತ್ಯದಲ್ಲಿ ಬಿರುಕು ಮೂಡೋದೇ ಇಲ್ಲ. ಹಾಗಾದ್ರೆ ದಾಂಪತ್ಯ ಜೀವನವನ್ನು ಖುಷಿಯಾಗಿಡುವ ವಾಸ್ತು ಟಿಪ್ಸ್ ಯಾವುದು ಅನ್ನೋದನ್ನು ತಿಳಿಯೋಣ.

ನಿಮ್ಮ ಕೋಣೆಯಲ್ಲಿ ಮನಿ ಪ್ಲಾಂಟ್ ಇಟ್ಟುಕೊಳ್ಳಿ
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಕೋಣೆಯಲ್ಲಿ ಅಥವಾ ಮನೆಯಲ್ಲಿ ಮನಿಪ್ಲಾಂಟ್ ಇಟ್ಟುಕೊಂಡರೆ ಅದು ಶುಭ ಸೂಚನೆಯಂತೆ. ಇದರಿಂದ ಗಂಡ-ಹೆಂಡತಿಯ ನಡುವಿನ ಸಂಬಂಧ ಉತ್ತಮವಾಗುತ್ತಂತೆ. ಜೊತೆಗೆ ಒಬ್ಬರ ನಡುವಿನ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.
ಕೋಣೆಯಲ್ಲಿ ದೇವರ ಫೋಟೋ ಇಡಬೇಡಿ
ಹಂಡ-ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ದೇವರ ಫೋಟೋವನ್ನು ಇಡಬೇಡಿ. ಅದರ ಬದಲಾಗಿ ಹರಿಯುವ ನದಿಯ ಚಿತ್ರವನ್ನು ಇಟ್ಟರೆ ತುಂಬಾನೇ ಒಳ್ಳೆಯದು. ಯಾಕಂದ್ರೆ ಹರಿಯುವ ನದಿಯು ಪ್ರೀತಿಯ ಸಂಕೇತವಾಗಿದೆ.
ಸರಿಯಾದ ಬಣ್ಣವನ್ನು ಬಳಕೆ ಮಾಡಿ
ಗಂಡ-ಹೆಂಡತಿ ಮಲಗುವ ಕೋಣೆಯ ಪೈಂಟ್ ಬಣ್ಣದ ಬಗ್ಗೆ ಕೂಡ ಗಮನ ಕೊಡೋದು ತುಂಬಾನೇ ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಗಂಡ-ಹೆಂಡತಿ ಮಲಗುವ ಕೋಣೆಯಲ್ಲಿ ತಿಳಿ ಗುಲಾಬಿ ಅಥವಾ ತಿಳಿ ಹಸಿರು ಬಣ್ಣವನ್ನು ಹಚ್ಚಬೇಕು.
ಯಾವುದೇ ಕಾರಣಕ್ಕೂ ಗಾಢವಾದ ಬಣ್ಣ ಬಳಕೆ ಮಾಡಲೇಬಾರದು. ತಿಳಿ ಗುಲಾಬಿ ಅಥವಾ ತಿಳಿ ಹಸಿರು ಬಣ್ಣವನ್ನು ಅಹ್ಲಾದಕರ ಬಣ್ಣವೆಂದು ಪರಿಗಣಿಸಲಾಗಿದೆ. ಈ ಬಣ್ಣವು ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜೋಡಿಗಳನ್ನು ಹತ್ತಿರ ತರುತ್ತಂತೆ.
ಮಲಗುವ ಭಂಗಿ ಸರಿಯಾಗಿ ಇರಬೇಕು
ವಾಸ್ತು ಶಾಸ್ತ್ರದ ಪ್ರಕಾರ ಗಂಡ ಹಾಗೂ ಹೆಂಡತಿ ಮಲಗುವ ಭಂಗಿ ಸರಿಯಾಗಿರಬೇಕಂತೆ. ಹೆಂಡತಿ ಯಾವಾಗಲೂ ಗಂಡನ ಎಡ ಬದಿಯಲ್ಲಿ ಮಲಗಬೇಕು. ಹಾಗೂ ಇಬ್ಬರೂ ಒಂದು ದೊಡ್ಡ ದಿಂಬನ್ನು ಬಳಕೆ ಮಾಡಬೇಕಂತೆ. ಈ ರೀತಿ ಮಾಡೋದ್ರಿಂದ ಇಬ್ಬರ ನಡುವಿನ ಪ್ರೇಮ ಮತ್ತಷ್ಟು ಹೆಚ್ಚಾಗುತ್ತಂತೆ.
ಮಲಗುವ ಕೋಣೆಯಲ್ಲಿ ಮುಳ್ಳಿನ ಹೂ ಇಡಬಾರದು
ಗಂಡ ಮತ್ತು ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಒಣಗಿದ ಅಥವಾ ಮುಳ್ಳಿನ ಹೂವನ್ನು ಇಡಬಾರದು. ಇದರಿಂದಾಗಿ ಗಂಡ ಹಾಗೂ ಹೆಂಡತಿಯ ನಡುವೆ ಒತ್ತಡ ಮತ್ತಷ್ಟು ಹೆಚ್ಚಾಗುತ್ತಂತೆ.
ಎಲೆಕ್ಟ್ರಾನಿಕ್ ವಸ್ತುಗಳಿಂದ ದೂರವಿರಿ
ಇತ್ತೀಚಿಗಂತೂ ಮೊಬೈಲ್ ಗೀಳು ಜನರಿಗೆ ಹೆಚ್ಚಾಗಿದ್ದು, ಸಂಬಂಧಗಳ ಮಹತ್ವವನ್ನೇ ಮರೆತು ಬಿಟ್ಟಿದ್ದಾರೆ. ಹೀಗಾಗಿ ಯಾವುದೇ ರೀತಿ ಎಲೆಲಕ್ಟ್ರಾನಿಕ್ ಡಿವೈಸ್ ಗಳನ್ನು ಕೋಣೆಯಲ್ಲಿ ಇಟ್ಟುಕೊಳ್ಳಬಾರದಂತೆ. ಇದರಿಂದ ಕೋಣೆಯಲ್ಲಿದ್ದ ಧನಾತ್ಮಕ ಶಕ್ತಿ ಕಡಿಮೆಯಾಗುತಂತೆ. ಹೀಗಾಗಿ ಇದು ನೇರವಾಗಿ ನಿಮ್ಮ ಸಂಸಾರದ ಮೇಲೆ ಪರಿಣಾಮ ಬೀರುತ್ತದೆ.
ಲವ್ ಬರ್ಡ್ಸ್
ದಂಪತಿಗಳು ಮಲಗುವ ಕೋಣೆಯಲ್ಲಿ ಲವ್ ಬರ್ಡ್ಸ್ ಫೋಟೋ ಇಟ್ಟುಕೊಂಡರೆ ತುಂಬಾನೇ ಒಳ್ಳೆಯದು. ಇದರಿಂದ ಇಬ್ಬರ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ಲವ್ ಬರ್ಡ್ಸ್ ಪ್ರೀತಿಯ ಸಂಕೇಯ ಆಗಿರೋದ್ರಿಂದ ನಿಮ್ಮ ಮಧ್ಯೆ ಪ್ರೀತಿ ಹೆಚ್ಚಾಗಲು ಇದು ಸಹಾಯ ಮಾಡುತ್ತದೆ.
ಕ್ನನಡಿ
ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಂಡರೆ ಅದು ಶುಭ ಸಂಕೇತವಂತೆ. ಇದರ ಪ್ರಭಾವದಿಂದಾಗಿ ಗಂಡ-ಹೆಂಡತಿ ನಡುವಿನ ಕಲಹಗಳು ಕಡಿಮೆಯಾಗಿ ಪ್ರೀತಿ ಹೆಚ್ಚಾಗುತ್ತಂತೆ.
ಮಲಗುವ ಕೋಣೆಗೆ ಕಿಟಕಿ ಇರಬೇಕು
ದಂಪತಿಗಳು ಮಲಗುವ ಕೋಣೆಯಲ್ಲಿ ಕಿಟಕಿ ಇರಲೇಬೇಕಂತೆ. ವಾಸ್ತು ಶಾಸ್ತ್ರದ ಪ್ರಕಾರ ಇದು ನಮ್ಮ ಒತ್ತಡ ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತಂತೆ. ಹಾಗೂ ಇಬ್ಬರಿಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ತುಂಬಾನೇ ಪ್ರೀತಿ ಇರುತ್ತಂತೆ.
ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳು ನಮ್ಮ ನಡುವೆ ಗೊಂದಲ ಹಾಗೂ ಗಲಾಟೆ ಸೃಷ್ಟಿಯಾಗೋದಕ್ಕೆ ಕಾರಣವಾಗಬಹುದು. ಇನ್ನು ಮುಂದಾದ್ರೂ ನಿಮ್ಮ ಮಲಗುವ ಕೋಣೆಯಲ್ಲಿ ಈ ವಿಚಾರಗಳ ಬಗ್ಗೆ ಗಮನವಿರಲಿ.



Click it and Unblock the Notifications
