Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಈ ಚಪ್ಪಲಿ ನಿಮ್ಮ ಬಳಿಯೂ ಇದೆಯೇ..? ಒಂದು ಜೋಡಿಗೆ ₹1 ಲಕ್ಷ ರೂಪಾಯಿ!
ನಿಮ್ಮ ಬಳಿಯೂ ಟ್ರೆಂಡಿ ಚಪ್ಪಲಿ ಇರಬಹುದು. ಅಂದ್ರೆ ಒಂದು ಸಮಯದಲ್ಲಿ ಮಾತ್ರ ಈ ಚಪ್ಪಲಿಗಳು ಭಾರೀ ಸದ್ದು ಮಾಡುತ್ತವೆ. ಇಂತಹ ಚಪ್ಪಲಿಯನ್ನ ಯುವ ಸಮುದಾಯ ಇಂತಹ ಟ್ರೆಂಡ್‌ಗಳ ಮೊರೆ ಹೋಗುವುದನ್ನು ನಾವು ನೋಡದ್ದೇವೆ. ಆದ್ರೆ ನೀವು ಈ ಪ್ಯಾರಗಾನ್ ಚಪ್ಪಲಿಯನ್ನ ಧರಿಸಿರಬಹುದು.
ಹೌದು ಒಂದು ಕಾಲದಲ್ಲಿ ಪ್ಯಾರಗಾನ್ ಚಪ್ಪಲಿ ತುಂಬಾನೆ ಫೇಮಸ್ ಆಗಿತ್ತು. ಆದ್ರಲ್ಲೂ ರೈತರು, ಕೆಲಸಕ್ಕೆ ಹೋಗುವವರು ಈ ಚಪ್ಪಲಿಗಳ ಹೆಚ್ಚಾಗಿ ಬಳಸುತ್ತಿದ್ದರು. ಹಾಗೆ ಮನೆಯ ಸುತ್ತ ಓಡಾಡಲು ಈ ಚಪ್ಪಲಿ ಇರಲೇಬೇಕಿತ್ತು, ನೀಲಿ ಪಟ್ಟಿ ಹಾಗೂ ಬಿಳಿ ಬಣ್ಣದಿಂದ ಕೂಡಿರುತ್ತಿದ್ದ ಈ ಚಪ್ಪಲಿ ಒಂದು ಕಾಲದ ಟ್ರೆಂಡಿ ಚಪ್ಪಲಿ ಎನಿಸಿತ್ತು.

ಆದ್ರೆ ಈ ಸುದ್ದಿ ಈಗ್ಯಾಗೆ ಹೇಳುತ್ತಿದ್ದೇವೆ ಎಂದು ನಿಮಗೆ ಅಚ್ಚರಿಯಾಗುತ್ತಿರಬಹುದು. ಈ ಚಪ್ಪಲಿ ಭಾರತದಲ್ಲಿ 200 ರೂಪಾಯಿ ಒಳಗೆ ಸಿಗಬಹುದು. ಅಥವಾ 100 ರೂಪಾಯಿಗೂ ಸಿಗಬಹುದು. ಏಕೆಂದರೆ ಇದು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಚಪ್ಪಲಿಯಾಗಿದೆ. ಈಗ ಈ ಚಪ್ಪಲಿಯನ್ನ ಹಿರಿಯರು ಮನೆಯಲ್ಲಿ ಓಡಾಡಲು, ಕೆಲಸಕ್ಕೆ ಹೋಗುವಾಗ ಹಾಕಲು ಬಳಸುತ್ತಾರೆ.
ಆದ್ರೆ ಇದೇ ಚಪ್ಪಲಿಗೆ 1 ಲಕ್ಷ ರೂಪಾಯಿ ಅಂದರೆ ನಂಬುತ್ತೀರಾ? ಹೌದು ಈ ಚಪ್ಪಲಿಗೆ ಕುವೈತ್‌ನ ಮಾಲ್‌ನಲ್ಲಿ ಬರೋಬ್ಬರಿ 4,500 ರಿಯಲ್ ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 1 ಲಕ್ಷ ರೂಪಾಯಿಗಳು. ನಿಮಗೆ ಅಚ್ಚರಿಯಾಗಬಹುದು. ಇಲ್ಲಿನ ಅಂಗಡಿಯೊಂದರೆ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಚಪ್ಪಲಿಯ ದರ ನೋಡಿ ಜನ ಶಾಕ್ ಆಗಿದ್ದಾರೆ.
ಈ ಸಂಬಂಧ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದ್ದು ಭಾರೀ ವೈರಲ್ ಆಗುತ್ತಿದೆ. ಆದ್ರೆ ಭಾರತೀಯ ಬಳಕೆದಾರರಿಗೆ ಇದು ಅಚ್ಚರಿ ಮೂಡಿಸಿದೆ. ಕೇವಲ 150 ರೂಪಾಯಿಗೆ ಸಿಗುವ ಈ ಚಪ್ಪಲಿ ಅಲ್ಲಿ 1ಲಕ್ಷ ರೂಪಾಯಿಗೆ ಏಕೆ ಮಾರಾಟವಾಗುತ್ತಿದೆ ಎಂಬ ಅಚ್ಚರಿ ಮೂಡಿಸಿದೆ.
ಹೀಗಾಗಿ ಈ ಪೋಸ್ಟ್‌ಗೆ ಸಾವಿರಾರು ಮಂದಿ ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಚಪ್ಪಲಿ ಭಾರತದಲ್ಲಿ ಇಷ್ಟು ಕಡಿಮೆಗೆ ಸಿಗುತ್ತದೆ. ಅಲ್ಲದೆ ಮನೆ ಮನೆಯಲ್ಲೂ ಈ ಚಪ್ಪಲಿಗಳಿಗೆ ಆದ್ರೆ ಕುವೈತ್‌ನಲ್ಲಿ ಈ ಚಪ್ಪಲಿ ಏಕೆ ಈಗ ಟ್ರೆಂಡಿಯಾಗಿದೆ ಎಂದು ಪ್ರಶ್ನಸಿದ್ದಾರೆ.
ಈ ಚಪ್ಪಲಿಯನ್ನು ಭಾರತದಲ್ಲಿ ಟಾಯ್ಲೆಟ್ ಚಪ್ಪಲಿ ಎಂದು ಕರೆಯಲಾಗುತ್ತೆ. ಜನ ಬಾತ್‌ರೂಮ್‌ಗೆ ಹೋಗಲು ಬಳಸುತ್ತಾರೆ. ಆದ್ರೆ ಇಷ್ಟೊಂದು ದುವಾರಿ ಆಗಿಲ್ಲ ಅಷ್ಟೇ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.
ಈ ಚಪ್ಪಲಿ ಪ್ರತಿಯೊಬ್ಬ ಭಾರತೀಯ ತಾಯಿಯ ಆಯುಧವಾಗಿದೆ. ತಾಯಿ ಮಕ್ಕಳ ಮೇಲೆ ಪ್ರಯೋಗಿಸುವ ಮೊದಲ ಆಯುಧ ಇದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ನಾವು ಸಹ ವರ್ಷಗಳ ಹಿಂದೆಯೇ ಈ ಲಕ್ಷ ರೂಪಾಯಿಯ ಚಪ್ಪಲಿ ಧರಿಸಿದ್ದೇವೆ. ನಾವು ಯಾವಾಗಿಂದಲೂ ಶ್ರೀಮಂತರಾಗಿದ್ದೇವೆ ಎಂದು ಮತ್ತೊಬ್ಬರ ಕಮೆಂಟ್ ಗಮನ ಸೆಳೆದಿದೆ.
ಭಾರತೀಯರು ಇಲ್ಲಿ ಚಪ್ಪಲ್‌ಗಳನ್ನು 100 ರೂಪಾಯಿಗೆ ಖರೀದಿಸಿ 4,500 ರಿಯಾಲ್‌ಗೆ ಮಾರಾಟ ಮಾಡಲು ಅವಕಾಶ ನೀಡಬೇಕು. ಈ ಚಪ್ಪಲಿ ಮೇಲಿನ ಹೂಡಿಕೆ 1000x ಹೆಚ್ಚಾಗಿದೆ, ಸದ್ಯದ ಮಾರುಕಟ್ಟೆಯಲ್ಲಿ ಇದಕ್ಕಿಂತ ಲಾಭದಾಯಕ ಉದ್ಯಮ ಮತ್ತೊಂದು ಇಲ್ಲವೇ ಇಲ್ಲ ಎಂದು ಬಳಕೆದಾರರೊಬ್ಬರು ಇದರ ಮಾರಾಟ ಸಂಬಂಧ ತಮಾಷೆಯ ಕಮೆಂಟ್ ಮಾಡಿದ್ದಾರೆ.
ಈ ಚಪ್ಪಲಿಯನ್ನು ರಫ್ತು ಮಾಡುವ ಅನುಮತಿ ನನಗೆ ನೀಡಲಿ ಕೇವಲ 2 ಸಾವಿರ ರೂಪಾಯಿಗೆ ಒಂದು ಜೊತೆ ಚಪ್ಪಲಿಯಂತೆ ಒಂದು ಲೋಡ್ ಚಪ್ಪಲಿ ಕಳುಹಿಸುತ್ತೇನೆ, ಇದರಿಂದ ನಮಗೂ ಲಾಭ, ಮಾರಾಟ ಮಾಡುವವರಿಗೂ ಲಾಭ ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications
