Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ವಿಶ್ವ ತಂಬಾಕು ರಹಿತ ದಿನ 2021: ಇಲ್ಲಿದೆ ಮನಮುಟ್ಟುವ ಕೋಟ್ಸ್, ಸ್ಲೋಗನ್
ಮೇ. 31 ವಿಶ್ವ ತಂಬಾಕು ರಹಿತ ದಿನ. ತಂಬಾಕು ಸೇವನೆಯಿಂದ ಉಂಟಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸಿ, ಜನರು ತಂಬಾಕು ಚಟದಿಂದ ದೂರವಿರುವಂತೆ ಮಾಡುವ ಉದ್ದೇಶದಿಂದ ಈ ದಿನ ಆಚರಿಸಲಾಗುತ್ತಿದೆ.
ಕೋವಿಡ್ 19 ಬಂದ ಮೇಲೆ ಸಾಕಷ್ಟು ಧೂಮಪಾನಿಗಳು ಆ ಚಟ ಬಿಟ್ಟಿದ್ದಾರೆ, ಇನ್ನು ಕೆಲವರು ಆ ಚಟದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾರೆ.
ತಂಬಾಕು ಸೇವನೆ, ಧೂಮಪಾನ ಅಭ್ಯಾಸ ಅದರ ಚಟ ಇರುವವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲ, ಮನೆಯವರನ್ನೂ ಸಂಕಷ್ಟಕ್ಕೆ ದೂಡುತ್ತದೆ. ತಂಬಾಕು ಚಟದಿಂದಾಗಿ ಅತೀ ಹೆಚ್ಚು ಕ್ಯಾನ್ಸರ್ ರೋಗ ಕಂಡು ಬರುತ್ತಿದೆ. ವ್ಯಕ್ತಿಗೆ ಕ್ಯಾನ್ಸರ್ ಬಂದ್ರೆ ಮನೆಯವರು ಆ ವ್ಯಕ್ತಿಗಾಗಿ ಸಾಕಷ್ಟು ಹಣ ಖರ್ಚು ಮಾಡಲಾಗುತ್ತದೆ. ಕೊನೆಗೆ ವ್ಯಕ್ತಿಯೂ ಬದುಕಿಳಿಯುವುದಿಲ್ಲ, ಮನೆಯವರ ಆರ್ಥಿಕ ಸ್ಥಿತಿಯೂ ಶೋಚನೀಯವಾಗಿರುತ್ತದೆ. ಇದರಿಂದಾಗಿ ಮಕ್ಕಳ ಭವಿಷ್ಯ ರೂಪಿಸಲು ಕೂಡ ಕಷ್ಟವಾಗುವುದು.
ಆದ್ದರಿಂದ ಈ ಚಟದಿಂದ ದೂರವಿರೋಣ. ಈ ಚಟ ರೂಢಿಸಿಕೊಂಡವರು ಇಂದೇ ತಂಬಾಕಿಗೆ ಹೇಳಿ ಗುಡ್ ಬೈ... ಇಲ್ಲಿ ಕೆಲ ಮನಮುಟ್ಟುವ ಕೋಟ್ಸ್ ನೀಡಲಾಗಿದೆ, ಅದನ್ನು ತುಂಬಾ ತಂಬಾಕು ಸೇವನೆ ಮಾಡುವವರಿಗೆ ಕಳುಹಿಸಿ ಅಥವಾ ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಜಾಗೃತಿ ಮೂಡಿಸಿ. ಆರೋಗ್ಯಕರ ಬದುಕಿನತ್ತ ಹೆಜ್ಜೆ ಇಡೋಣ.....

ಕೋಟ್ಸ್ 1
ಕ್ಯಾನ್ಸರ್ ತಮಾಷೆಯಲ್ಲ
ಧೂಮಪಾನ ಚಟ ಕಟ್ಟುವುದು ಚಟ್ಟ
ಮೇ 31
ವಿಶ್ವ ತಂಬಾಕು ರಹಿತ ದಿನ

ಕೋಟ್ಸ್ 2
ತಂಬಾಕಿನ ಚಟದಿಂದಾಗಿ ವ್ಯಕ್ತಿಗಳು ಕಾಯಿಲೆ ಬಿದ್ದಾಗ, ಸಾವನ್ನಪ್ಪಿದಾಗ ಅದರಿಂದ ಕಷ್ಟ ಅನುಭವಿಸುವುದು ಕುಟುಂಬವರು
ಆರೋಗ್ಯ ಜೀವನಶೈಲಿ ಬೆಳೆಸೋಣ
ತಂಬಾಕು ಮುಕ್ತ ಬದುಕು ಸಾಗಿಸೋಣ

ಕೋಟ್ಸ್ 3
ಅಭ್ಯಾಸಗಳು ಬದುಕಿನ ಮೇಲೆ ತುಂಬಾನೇ ಪರಿಣಾಮ ಬೀರುವುದು
ಒಳ್ಳೆಯದು ಆದರೆ ಒಳಿತಾಗುವುದು, ಕೆಟ್ಟದಾದರೆ ಕೆಡಕಾಗುವುದು
ಧೂಮಪಾನ ಚಟ ಬಿಡಿ
ಆರೋಗ್ಯಕರ ಜೀವನ ನಿಮ್ಮದಾಗಿಸಿ

ಕೋಟ್ಸ್ 4
ಧೂಮಪಾನ, ತಂಬಾಕಿಗೆ ಗುಡ್‌ಬೈ ಹೇಳಿ
ಆಗ ಆರೋಗ್ಯ ಹೇಳುತ್ತೆ ಹಾಯ್

ಕೋಟ್ಸ್ 5
ತಮಾಷೆಗೆ ಪ್ರಾರಂಭಿಸುವ ತಂಬಾಕಿನ ಅಭ್ಯಾಸ ಮುಂದೆ ಚಟವಾಗಿ, ಚಟ್ಟ ಕಟ್ಟಿಸುವುದು
ತಂಬಾಕು ಸೇವನೆಯಿಂದ ದೂರವಿರಿ, ಯುವ ಪೀಳಿಗೆಯನ್ನು ಇದರಿಂದ ರಕ್ಷಿಸಿ.

ಕೋಟ್ಸ್ 6
ತಂಬಾಕು ತರುವುದು ಕ್ಯಾನ್ಸರ್
ನಿಮ್ಮ ಆರೋಗ್ಯ ಹೋಗುತ್ತೆ, ಮನೆಯವರ ನೆಮ್ಮದಿ, ನಗುವೂ ಹೋಗುತ್ತೆ
ಇಂದೇ ಆ ಕೆಟ್ಟ ಚಟದಿಂದ ಹೊರಬರುವ ಪ್ರಯತ್ನ ಮಾಡಿ

ಕೋಟ್ಸ್ 7
ಸಿಗರೇಟ್ ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎಂದಾದರೆ
ಮುಂದೆ ಕುಟುಂಬ ನಿಮ್ಮನ್ನು ಕಳೆದುಕೊಂಡು ಬದುಕಬೇಕಾಗುವುದು
ನಿಮಗಾಗಿ ಅಲ್ಲದಿದ್ದರೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಆ ಚಟದಿಂದ ಹೊರಬನ್ನಿ.



Click it and Unblock the Notifications
