Latest Updates
-
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ
3 ವರ್ಷದಿಂದ ಕಂಕುಳ ಕೂದಲು ತೆಗೆಯದ ಟಿಕ್‌ಟಾಕ್ ಸ್ಟಾರ್: ವಿಡಿಯೋ ವೈರಲ್, ನೆಟ್ಟಿಗರು ಫುಲ್‌ಫಿದಾ
ಕಂಕುಳದಲ್ಲಿ ಕೂದಲು ಇಟ್ಟುಕೊಳ್ಳುವುದು ಎಂದರೆ ಅನೇಕರಿಗೆ ಅಲರ್ಜಿ. ಅದರಲ್ಲೂ ಸ್ಲೀವ್ ಲೆಸ್ ಡ್ರೆಸ್ ತೊಡುವ ಯುವತಿಯರು, ಮಹಿಳೆಯರಂತೂ ತೋಳಿನ ಕೆಳಗೆ ದಿನ ನಿತ್ಯ ಶೇವ್ ಮಾಡುತ್ತಲೇ ಇರುತ್ತಾರೆ. ನಿತ್ಯ ಶೇವ್ ಮಾಡುವುದರಿಂದ ಕೈ ನ ಅಂದ ಹೆಚ್ಚಿವುದಲ್ಲದೆ, ಅಲರ್ಜಿ ಕಡಿಮೆ ಮಾಡುತ್ತದೆ, ಅಲ್ಲದೇ ಅಲ್ಲಿ ಉಂಟಾಗುವ ತುರಿಕೆಯನ್ನು ದೂರ ಮಾಡುತ್ತದೆ. ಆದ್ದರಿಂದ ಕಂಕುಳಿನ ಸ್ವಚ್ಛತೆಯೂ ಮುಖ್ಯ.
ಆದರೆ ಇಲ್ಲೊಬ್ಬಳು ಯುವತಿ ಬರೋಬ್ಬರಿ ಮೂರು ವರ್ಷದಿಂದ ತೋಳಿನಡಿಯಲ್ಲಿರುವ ಕೂದಲನ್ನು ಶೇವ್ ಮಾಡೇ ಇಲ್ಲ. ಹೌದು, ಅಚ್ಚರಿಯಾದ್ರೂ ಇದು ಸತ್ಯ.

ಯುವತಿಯರು ಪ್ರತೀ ದಿನ ಕಂಕುಳದಲ್ಲಿರುವ ಕೂದಲನ್ನು ಶೇವ್ ಮಾಡುತ್ತಾರೆ. ತಪ್ಪಿದರೂ ವಾರಕ್ಕೆ ಒಂದು ಬಾರಿ ಆದ್ರೂ ಶೇವ್ ಮಾಡುತ್ತ ಕಂಕುಳವನ್ನು ನೀಟ್ ಆಗಿ ಇಟ್ಟುಕೊಳ್ಳುತ್ತಾರೆ. ಆದರೆ ಅಮರಿಕದ ನಾರ್ಥ್ ಕೆರೊಲಿನಾದ ಟಿಕ್ ಟಾಕ್ ಸ್ಟಾರ್ ಮೂರು ವರ್ಷದಿಂದ ಕಂಕುಳದ ಕೂದಲನ್ನು ಶೇವ್ ಮಾಡದೆ ಹಾಗೇ ಇಟ್ಟಿದ್ದಾಳೆ.
ಟಿಕ್ ಟಾಕ್ ನಲ್ಲಿ ಈ ಸಂಬಂಧ ವಿಡಿಯೋ ಹರಿಬಿಟ್ಟಿರುವ ಯುವತಿ ತಾನು ಯಾಕೆ ಕಂಕುಳದ ಕೂದಲು ಶೇವ್ ಮಾಡಿಲ್ಲ ಎಂದು ಹೇಳಿದ್ದಾಳೆ. ಆಕೆಯ ಉತ್ತರಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹಾಗಾದರೆ ಆಕೆ ಹೇಳಿದ್ದೇನು? ಮುಂದೆ ಓದೋಣಾ ಬನ್ನಿ.
ಆಕೆಯ ವಿಡಿಯೋನಲ್ಲಿ ಏನಿದೆ?
ತನ್ನ ಕಂಕುಳದ ಕೂದಲನ್ನು ತೋರಿಸಿರುವ 24 ವರ್ಷದ ಜಾಡಾ ಟ್ರಾವಿಸ್ ತಾನು ಮೂರು ವರ್ಷದಿಂದ ಕಂಕುಳದ ಕೂದಲನ್ನು ಶೇವ್ ಮಾಡಿಲ್ಲ ಎಂದಿದ್ದಾಳೆ. ಇದರಿಂದಾಗಿ ನಮ್ಮ ಜನರಿಂದ ನಾನು ಟೀಕೆಗೆ ಒಳಗಾಗಿದ್ದೇನೆ ಎಂದು ಕೂಡ ಜಾಡಾ ಹೇಳಿದ್ದಾಳೆ.
ಇನ್ನು ಈ ವಿಡಿಯೋವನ್ನು ಬರೋಬ್ಬರಿ 4.7 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ತನ್ನನ್ನು ಟೀಕಿಸುವ ಜನಗಳಿಗೆ ಈ ವಿಡಿಯೋವನ್ನು ಕಳುಹಿಸುತ್ತೇನೆ ಎಂದು ಜಾಡಾ ಟ್ರಾವಿಸ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾಳೆ. ಒಟ್ಟಾರೆ ಈ ವಿಡಿಯೋದಲ್ಲಿ ಆಕೆ ತಮಗೆ ಇಷ್ಟವಾದುದ್ದನ್ನು, ತಮಗೆ ಖುಷಿ ಕೊಡುವ ಕೆಲಸವನ್ನು ನಾವು ಮಾಡಬೇಕು. ನಾವು ಬೇರೆಯವರ ಅಭಿಪ್ರಾಯಕ್ಕೆ ಒಳಗಾಗಬಾರದು ಎಂದಿದ್ದಾಳೆ.
ಆಕೆ ಕಂಕುಳದ ಕೂದಲಿನ ಬಗ್ಗೆ ಹೇಳುವುದೇನು?
ಆಕೆ ವಿಡಿಯೋದಲ್ಲಿ ಕಂಕುಳದ ಕೂದಲಿನ ಸಂಬಂಧ ತನಗಾದ ಅನುಭವವನ್ನು ಹೇಳಿಕೊಂಡಿದ್ದಾಳೆ. ತಮ್ಮ ನಗರದಲ್ಲಿ ತಾನು ಎಲ್ಲಿ ಹೋದರು, ಏನು ಮಾಡಿದರೂ ಯಾರೂ ಕೂಡ ಕೇರ್ ಮಾಡೋದೆ ಇಲ್ಲ. ಆದರೆ ಇತರೆ ಸ್ಥಳಗಳಲ್ಲಿ ತನ್ನ ಕೈ ಎತ್ತಿ ಕಂಕುಳದ ಕೂದಲನ್ನು ತೋರಿಸಿದರೆ ಒ ಮೈ ಗಾಡ್ ಅಂತಾರೆ. ನಮ್ಮ ಜನರಿಗೆ ತನ್ನ ಕಂಕುಳದ ಕೂದಲಿನ ಬಗ್ಗೆಯೇ ಚಿಂತೆ. ಅವರಿಗೆ ಅವರ ಸಾವಿರ ಸಮಸ್ಯೆ ಇದ್ದರೂ ನನ್ನ ಕಂಕುಳದ ಕೂದಲಿನ ಬಗ್ಗೆ ಅಭಿಪ್ರಾಯ ಹೇಳುವುದು ಅಂದರೆ ಅವರಿಗೆ ಇಷ್ಟ ಎಂದು ಜನರ ಕಾಲೆಳೆದಿದ್ದಾಳೆ.
ಅಲ್ಲದೇ ನಾವು ಹೀಗೆ ಇರಬೇಕು, ಹೀಗೆ ಮಾಡಬೇಕು ಎನ್ನುವುದನ್ನು ನಮ್ಮ ಜನ ಯೋಚಿಸುತ್ತಾರೆ. ಇವರ ಯಾವ ಝಮಾನದಲ್ಲಿ ಇದ್ದಾರೆ ಎಂದರೆ ಭೂಮಿಯನ್ನು ತೇಲುವ ಬಂಡೆ ಎಂದು ಅಂದುಕೊಂಡಿದ್ದಾರೆ. ತೇಲುವ ಬಂಡೆ ಮೇಲೆ ನಾವು ಇದ್ದೇವೆ ಎಂದು ನಂಬಿಕೊಂಡು ಬಂದಿದ್ದು ಅದನ್ನೇ ಪಾಲಿಸುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಜನರಿಗೆ ಜಾಡಾ ಟ್ರಾವಿಸ್ ಚಾಟಿ ಬೀಸಿದ್ದಾರೆ.
ಹೀಗಾಗಿ ಇಂತಹ ಜನರಿಗೆ ನಾನು ಈ ವಿಡಿಯೋ ಮೂಲಕ ಅರ್ಥ ಮಾಡಿಸಲು ಮುಂದಾಗಿದ್ದೇನೆ ಎಂದಿದ್ದಾರೆ. ಅದೇನೆ ಇದ್ದರೂ ನಾವು ನಮ್ಮ ತನದಲ್ಲಿ ಬದುಕಬೇಕು, ಬೇರೆಯವರ ಇಷ್ಟ, ಅವರ ಅಭಿಪ್ರಾಯಕ್ಕೆ ಬದುಕಬಾರದು. ನನಗೆ ನನ್ನ ಕಂಕುಳದ ಕೂದಲನ್ನು ತೆಗೆಯಲು ಇಷ್ಟವಿಲ್ಲ ಎಂದರೆ ಅದನ್ನೇ ನಾನು ಪಾಲಿಸಬೇಕು. ಅವರು ಏನು ಅನ್ನುತ್ತಾರೆ ಅನ್ನುವುದನ್ನ ಯೋಚಿಸಬಾರದು ಎಂದು ಜಾಡಾ ಟ್ರಾವಿಸ್ ದಿಟವಾಗಿ ನುಡಿದಿದ್ದಾಳೆ.
ಆಕೆಯ ಮಾತಿಗೆ ಇದೀಗ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ನಾನು ಈ ಹಿಂದೆ ಕೂಡ ಜನರು ಏನು ಅಂತಾರೆ ಎಂದು ಜೀವಿಸುತ್ತಿದೆ. ಈ ವೇಳೆ ಒಂದು ದಿನ ನನ್ನ ಜೀವನದ ಬಗ್ಗೆ ಯೋಚಿಸಿದೆ. ನಾವು ಜನರ ಅಭಿಪ್ರಾಯಗಳಿಗೆ ಜೀವಿಸುತ್ತಿದ್ದೇವೆ. ನಮಗಾಗಿ ನಾವು ಜೀವಿಸುತ್ತಿಲ್ಲ. ಅವರು-ಇವರು ಏನು ಹೇಳುತ್ತಾರೆ ಎಂದು ಯೋಚಿಸುತ್ತಲೇ ನಮ್ಮ ಜೀವನದ ಖುಷಿಯನ್ನು ನಾನು ಕಳೆದುಕೊಂಡಿದ್ದೇನೆ ಎಂದು ನನಗೆ ಅರಿವಾಗಿದೆ. ಹೀಗಾಗಿ ಇಂತಹ ಯೋಚನೆಯಿಂದ ನಾವು ದೂರ ಇರಬೇಕು ಎಂದು ಜಾಡಾ ಟ್ರಾವಿಸ್ ಜನತೆಗೆ ತಿಳಿ ಹೇಳಿದ್ದಾರೆ.
ಜಾಡಾ ಟ್ರಾವಿಸ್ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ!
ಇನ್ನು ಜಾಡಾ ಟ್ರಾವಿಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದ್ದು ಬರೋಬ್ಬರಿ 4.7 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅನೇಕರು ಈಕೆಯ ಧೈರ್ಯಕ್ಕೆ ಶಹಬ್ಬಾಸ್ ಎಂದಿದ್ದಾರೆ. ಒಬ್ಬ ನೆಟ್ಟಿಗ ನೀವೆ ನಮ್ಮ ಪ್ರೆಸಿಡೆಂಟ್ ಎಂದು ಜಾಡಾ ಟ್ರಾವಿಸ್ ನನ್ನು ಕೊಂಡಾಡಿದ್ದಾನೆ. ಇನ್ನೊಬ್ಬ ನೆಟ್ಟಿಗ ನೀವು ಹೇಳೋದು ಸರಿ ನಿಮ್ಮ ನಿಯಮವನ್ನೇ ನನ್ನ ಜೀವನದಲ್ಲಿ ನಾನು ಅಳವಡಿಸುತ್ತೇನೆ ಎಂದಿದ್ದಾನೆ. ಇನ್ನೊಬ್ಬಳು, ನನ್ನ ಪ್ರೀತಿಯ ತಂಗಿ ಸಮಯ ಹಾಗೂ ಹಣವನ್ನು ಉಳಿಸುತ್ತಿದ್ದಾಳೆ ಎಂದು ಕಾಲೆಳೆದಿದ್ದಾಳೆ. ಇನ್ನೊಬ್ಬರು ನೀನು ತುಂಬಾ ಧೈರ್ಯವಂತೆ ಎಂದು ಹೇಳಿದ್ದಾಳೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ಒಪಿನಿಯನ್ ಜಾಡಾ ಟ್ರಾವಿಸ್ ಪೋಸ್ಟ್ ಗೆ ಹಂಚಿಕೊಂಡಿದ್ದಾರೆ.
ಇನ್ನು ಕೊನೆಯದಾಗಿ ಬಾಡಿ ಹೇರ್ + ನಾರ್ಮಲ್ ಎಂದು ಜಾಡಾ ಟ್ರಾವಿಸ್ ಬರೆದುಕೊಂಡಿದ್ದು. ದೇಹದ ಯಾವುದೇ ಭಾಗದಲ್ಲಿ ಕೂದಲು ಬರಲಿ ಅದು ಸಾಮಾನ್ಯವಾಗಿದೆ. ಅದನ್ನು ತೆಗೆಯಬೇಕೋ, ಬೇಡವೋ ಎನ್ನುವುದು ನಮ್ಮ ನಮ್ಮ ಇಷ್ಟ ಎಂದು ಹೇಳಿಕೊಂಡಿದ್ದಾರೆ.



Click it and Unblock the Notifications















