Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
Bhavina Patel: ಪ್ಯಾರಾ ಒಲಿಂಪಿಕ್ಸ್: ಬೆಳ್ಳಿ ಪದಕ ಗೆದ್ದ ಭಾವಿನಾ ಪಟೇಲ್ ಕುರಿತ ಆಸಕ್ತಿಕರ ಸಂಗತಿಗಳು
ಭಾವಿನಾ ಪಟೇಲ್ ಇಂದು ಪ್ಯಾರಾ ಒಲಿಂಪಿಕ್ಸ್ 2020ರಲ್ಲಿ ಟೇಬಲ್ ಟೆನಿಸ್ ವಿಭಾಗದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ಪ್ಯಾರಾ ಒಲಿಂಪಿಕ್ಸ್ ಇತಿಹಾಸದಲ್ಲೇ ಒಂದು ಹೊಸ ದಾಖಲೆ ಮಾಡಿದ್ದಾರೆ.
ಕಾಲುಗಳಿಗೆ ಪೋಲೀಯೋ ಬಾಧಿಸಿದ್ದರೂ ಅವರ ಕನಸುಗಳಿಗೆ, ಛಲಕ್ಕೆ, ಸಾಧನೆಗೆ ಅದು ಯಾವುದೂ ಅಡ್ಡಿಯಾಗಲಿಲ್ಲ.

ಗುಜರಾತ್‌ನ ಮೆಹಸಾನ ಜಿಲ್ಲೆಯ ವಡನಗರ್‌ದ 34 ವರ್ಷದ ಭಾವಿನಾ ಪಡೇಲ್ ಅವರು ತಮ್ಮ ದೌರ್ಬಲ್ಯವನ್ನು ಗೆಲ್ಲಬೇಕು, ಫಿಟ್ನೆಸ್ ಪಡೆಯಬೇಕು ಎಂದು 2004ರಲ್ಲಿ ಟೇಬಲ್ ಟೆನಿಸ್ ಆಡಲು ಶುರು ಮಾಡಿದರು. ಹೀಗೆ ಅಭ್ಯಾಸ ಮಾಡುತ್ತಿರುವಾಗ ಅವರಿಗೆ ಟೇಬಲ್ ಟೆನಿಸ್ ಮೇಲೆ ಅವರ ಆಸಕ್ತಿ ಹೆಚ್ಚಾಯಿತು. ತುಂಬಾ ಕಠಿಣ ಅಭ್ಯಾಸ ಮಾಡಲಾರಂಭಿಸಿದರು. ಮೂರೇ ವರ್ಷದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇದೀಗ 2020ರ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಯಾರೂ ನಿರೀಕ್ಷಿಸಿರದ ಸಾಧನೆ ಮಾಡಿದ್ದಾರೆ. ವಿಶ್ವದ 12ನೇ ಶ್ರೇಯಾಂಕದ ಭಾವಿನಾ ಪಟೇಲ್ ವಿಶ್ವದ ನಂಬರ್ ಒನ್ ಚೀನೀ ಆಟಗಾರ್ತಿ ಝೌ ಯಿಂಗ್ ಅವರ ವಿರುದ್ಧ 7-11, 7-11, 6-11ರ ನೇರ ಸೆಟ್‌ಗಳಿಂದ ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ.
ಸೆಮಿಫೈನಲ್‌ನಲ್ಲಿ ಝಾಂಗ್ ಮಿಯಾವೋ ಅವರನ್ನು ಸೋಲಿಸಿದ ರೀತಿ ನೋಡಿ ಚಿನ್ನವನ್ನು ಕೂಡ ಗೆಲ್ಲಬಹುದು ಎಂಬ ಆಸೆ ಮೂಡಿಸಿದ್ದರು. ಆದರೆ ಅದೃಷ್ಟ ಅವರಿಗೆ ಕೈ ಕೊಟ್ಟಿದೆ. ಫೈನಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿರುವ ಭಾವಿನಾ ವಿಶೇಷ ಚೇತನರ ವಿಭಾಗದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಭಾವಿನಾ ಕ್ವಾಟರ್‌ಫೈನಲ್‌ನಲ್ಲಿ 2-216ರ ಪ್ಯಾರಾ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಸೈಬೇರಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ಅವರನ್ನು ಸೋಲಿಸಿದ್ದರು. 12 ತಿಂಗಳ ಮಗುವಾಗಿದ್ದಾಗ ಇವರಿಗೆ ಪೋಲಿಯೋ ಬಂದು ಕಾಲುಗಳು ಸ್ವಾದೀನ ಕಳೆದುಕೊಂಡವು. ಕಾಲುಗಳಿಗೆ ಬಲವಿಲ್ಲ ಎಂದು ಕೊರಗುವವರಿಗೆ ನಾವು ಮನಸ್ಸು ಮಾಡಿದರೆ ನಮ್ಮಿಂದಲೂ ಎಲ್ಲವೂ ಸಾಧ್ಯ ಎಂಬುವುದಕ್ಕೆ ನಿದರ್ಶನ ಭಾವಿನಾ ಪಟೇಲ್.



Click it and Unblock the Notifications
