Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ತೋಳ ಅಲ್ಲ, ನರಿಯೂ ಅಲ್ಲ ಇಂಥ ಪ್ರಾಣಿ ನೋಡೇ ಇಲ್ಲ ಅಂತಿದ್ದಾರೆ ಜನ: ಅಪರೂಪದ ಪ್ರಾಣಿ ವೀಡಿಯೋ ವೈರಲ್
ತೋಳ, ನರಿ ನೀವು ನೋಡಿರುತ್ತೀರಾ? ನಿಜವಾಗಲೂ ನೋಡಿಲ್ಲ ಅಂದಾದರೆ ಮೃಗಾಲಯದಲ್ಲಿ, ಸಿನಿಮಾಗಳಲ್ಲಿ, ವೀಡಿಯೋಗಳಲ್ಲಿ, ಫೋಟೋಗಳಲ್ಲಿ ನೋಡಿರುತ್ತೀರಾ? ಇದೀಗ ನೆಟ್ಟಿಗರನ್ನು ಆಶ್ಚರ್ಯ ಪಡಿಸಿರುವುದು ಅತ್ತ ತೋಳವೂ ಅಲ್ಲ, ಇತ್ತ ನರಿಯೂ ಅಲ್ಲದ ಪ್ರಾಣಿಯೊಂದು.

ನೋಡಿದರೆ ತೋಳದಂತೆ ಕಂಡರೂ ಅದು ತೋಳ, ಇದರ ಕಾಲುಗಳು ತೋಳಕ್ಕಿಂತಲೂ ಉದ್ದವಾಗಿದೆ.' ಇಂಥದ್ದೊಂದು ಪ್ರಾಣಿಯನ್ನು ನಾವಂತೂ ನೋಡೇ ಇಲ್ಲಿ ಎನ್ನುತ್ತಿದ್ದಾರೆ ವೀಕ್ಷಕರು.
ಈ ವೀಡಿಯೋವನ್ನು Reg Saddler ಎಂಬವರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರು ಇದು ಯಾವ ಬಗೆಯ ಪ್ರಾಣಿಯಪ್ಪಾ ಎಂದು ತಿಳಿಯದೆ ಫುಲ್ ಕನ್‌ಫ್ಯೂಸ್ ಆಗಿದ್ದಾರೆ. ಈ ವೀಡಿಯೋ ಶೇರ್ ಮಾಡಿ '"Does anyone know what the heck this is?!" ಎಂಬ ಕ್ಯಾಪ್ಷನ್ ನೀಡಲಾಗಿದೆ.
ಈ ಪೋಸ್ಟ್‌ಗೆ 2 ಮಿಲಿಯನ್‌ಗಿಂತಲೂ ಹೆಚ್ಚಿನ ವೀಕ್ಷಣೆ ಹೇಗಿದೆ. ಈ ವಿಚಿತ್ರವಾದ ಪ್ರಾಣಿ ಯಾವುದು ಎಂದು ತಿಳಿಯದೆ ನೋಡಿದವರು ಕನ್‌ಫ್ಯೂಸ್ ಆಗುತ್ತಿದ್ದಾರೆ, ಕೆಲವರು ಇದನ್ನು ಹೆಯಾನಾ (hyena) ಇರಬಹುದು ಅಂತಿದ್ದಾರೆ.
ಇನ್ನು ಕೆಲವರು ಇದು ನಿಜವಾದ ಪ್ರಾಣಿ ಆಗಿರಲಿಕ್ಕಿಲ್ಲ, ಏಕೆಂದರೆ ಇದನ್ನು ನೋಡುವಾಗ ಫೇಕ್ ವೀಡಿಯೋದಂತೆ ಅನಿಸುತ್ತಿದ್ದೆ ಅನ್ನುತ್ತಿದ್ದಾರೆ. ನಮಗೆ ಏಕೆ ಈ ವೀಡಿಯೋ ಫೇಕ್ ಇರಬಹುದು ಎಂದು ಅನಿಸಿರುವುದಕ್ಕೆ ಕಾರಣವು ಹೇಳಿದ್ದಾರೆ. ಈ ಪ್ರಾಣಿ ರಸ್ತೆಯ ಮೇಲೆ ಹೋಗುವಾಗ ಅದರ ಕುತ್ತಿಗೆ ಭಾಗದಲ್ಲಿ ಕಪ್ಪು ಉದ್ದನೆಯ ಕೂದಲು ಕಾಣುತ್ತದೆ, ಆದರೆ ಕೆಲವೊಮ್ಮೆ ಅದು ಮಿಸ್ ಆಗುತ್ತೆ, ಹಾಗಾಗಿ ಇದು ಫೇಕ್ ಇರಬಹುದು ಅಂತಿದ್ದಾರೆ.
ಇನ್ನು ಕೆಲವರು ಇದು ಕ್ರಾಸ್‌ಬ್ರಿಡ್ ಆಗಿರಬಹುದು, ತೋಳ ಹಾಗೂ ಹೆಯಾನಾ ಮಿಕ್ಸ್ ತಳಿ ಇರಬಹುದು ಎಂಬ ಅಭಿಪ್ರಾಯ ಹೇಳುತ್ತಿದ್ದಾರೆ.
ಈ ವೀಡಿಯೋವನ್ನು ರೀಶೇರ್ ಮಾಡಿರುವ ಟ್ವಿಟರ್ ಪೇಜ್ ಫ್ಯಾಷನಿಟಿಂಗ್ ಇದನ್ನು ಮ್ಯಾನ್ಡ್ ವೂಲ್ಫ್ ಎಂದು ಹೇಳಿದ್ದಾರೆ. ಇದು ತುಂಬಾ ಅಪರೂಪದ ಪ್ರಾಣಿಯಾಗಿದ್ದು ನಾಯಿ ಜಾತಿಗೆ ಸೇರಿದ್ದಾಗಿದೆ, ಈ ಪ್ರಾಣಿ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವುದು ಎಂದು ಹೇಳಿದೆ.
ಈ ಮ್ಯಾನ್ಡ್ ವೂಲ್ಫ್ ಕಾಲುಗಳು ತುಂಬಾನೇ ಉದ್ದ ಇರುತ್ತದೆ, ಕಪ್ಪು ಕೂದಲು ಇರುತ್ತದೆ, ಅದರ ಮೈ ಮೇಲಿನ ರೋಮಗಳು ಕೆಂಚು ಬಣ್ಣದಲ್ಲಿ ಇರುತ್ತದೆ. ಇದು ಮನುಷ್ಯರು ಇರುವ ಕಡೆ ಬರುವುದೇ ಇಲ್ಲ. ಸಣ್ಣ ಹುಳ -ಹುಪ್ಪಟೆ, ಗಿಡಗಳನ್ನು ತಿಂದು ಬದುಕುತ್ತವೆ.



Click it and Unblock the Notifications

