Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ರಣ ಬಿಸಿಲು: ಸ್ಕೂಟರ್ ಸೀಟ್ ಮೇಲೆ ದೋಸೆ ಮಾಡಿದ ವ್ಯಕ್ತಿಯ ವೀಡಿಯೋ ಫುಲ್ ವೈರಲ್
ಈಗೀನ ಕಾಲಾವಸ್ಥೆನೇ ಒಂಥರಾ ವಿಚಿತ್ರವಾಗಿದೆ, ಏನು ಸೆಕೆಯಪ್ಪಾ, ಸಹಿಸಲು ಆಗ್ತಾನೇ ಇಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿರುವುದನ್ನು ನೀವು ಕೇಳಿರಬಹುದು, ಆದರೆ ಕೆಲವರು ಅದರಲ್ಲೂ ಏನೋ ಹೊಸದು ಟ್ರೈ ಮಾಡಲು ಹೋಗುವವರು ಇದ್ದಾರೆ. ಹೌದು ಅಂಥದೊಂದು ಪ್ರಯತ್ನದ ವೀಡಿಯೋ ವೈರಲ್ ಆಗಿದೆ.

ಮೇ ತಿಂಗಳಿನಲ್ಲಿ ಹಲವ ಕಡೆ ರಣ ಬಿಸಿಲು ಇತ್ತು, ಇನ್ನು ಜೂನ್ ತಿಂಗಳಿನಲ್ಲಿ ಕೆಲವು ಕಡೆ ಮಳೆ ಸುರಿಯುತ್ತಿದ್ದರೆ ಇನ್ನು ಕೆಲವು ಕಡೆ ಹೀಟ್ ವೇವ್ ಇದೆ. ಅಂದರೆ ಉಷ್ಣಾಂಶ 45 ಡಿಗ್ರಿC ಹಾಗೂ ಅದಕ್ಕಿಂತ ಅಧಿಕವಿದ್ದರೆ ಅದಕ್ಕೆ ಹೀಟ್ ವೇವ್ ಎಂದು ಕರೆಯಲಾಗುವುದು. ಇಂಥ ಉರಿ ಬಿಸಿಲಿನಲ್ಲಿ ಏನಪ್ಪಾ ಮಾಡುವುದು ಜನ ಕೂತರೆ ಇಲ್ಲೊಬ್ಬ ಬೈಕ್ ಸೀಟ್ ಮೇಲೆ ದೋಸೆ ಮಾಡಿಕೊಂಡು ತಿಂದಿದ್ದಾನೆ. ಆ ವೀಡಿಯೋ ಇದೀಗ ಸಕತ್ ವೈರಲ್ ಆಗಿದೆ.
ಹರ್ಷಾ ಗೋಯೆಂಕಾ ಎಂಬವವರು ಈ ವೀಡಿಯೋ ಶೇರ್ ಮಾಡಿದ್ದು ಬೈಕ್ ಮೇಲೆ ದೋಸೆ ಮಾಡಿದ ವ್ಯಕ್ತಿಯ ಕ್ರಿಯೇಟಿವಿಟಿ ನೆಟ್ಟಿಗರ ಗಮನ ಸೆಳೆದಿದೆ. ಈ ವೀಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ. ಇದನ್ನು ನೋಡಿ ಹಲವು ಜನ ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹೀಗೆ ಮಾಡಿ ಗ್ಯಾಸ್ ಉಳಿಸಬಹುದು ಎಂದು ಹೇಳಿದರೆ ಇನ್ನು ಕೆಲವರು ನವೀಕರಿಸಬಹುದಾದ ಶಕ್ತಿಯನ್ನು ಈ ರೀತಿಯೆಲ್ಲಾ ಬಳಸುವುದು ಉತ್ತಮ ಐಡಿಯಾ ಎಂದೆಲ್ಲಾ ಹೇಳುತ್ತಿದ್ದಾರೆ.
ವೀಡಿಯೋದಲ್ಲಿ ವ್ಯಕ್ತಿ ದೋಸೆ ಹಿಟ್ಟು ಹಾಕಿ, ಅದರಿಂದ ದೋಸೆ ಸುಟ್ಟು ಮಗುಚಿ ಹಾಕುವುದನ್ನು ಕಾಣಬಹುದು.
ದೆಹಲಿ, ಹರಿಯಾಣ, ಪಂಜಾಬ್, ಉತ್ತರ ರಾಜಾಸ್ಥಾನ ಮುಂತಾದ ಕಡೆ ರಣ ಬಿಸಿಲು ಇದೆ, ಎಷ್ಟೋ ಜನರಿಗೆ ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಭಾರತದಲ್ಲಿ ಮಾನ್ಸೂನ್ ಜೂನ್ 15ರಿಂದ ಪ್ರಾರಂಭವಾಗಲಿದೆ.
ಹೀಟ್‌ವೇವ್ ಎಂದರೇನು?
ಉಷ್ಣಾಂಶ ಅಧಿಕವಾದಾಗ ಆ ಪ್ರದೇಶವನ್ನು ಹೀಟ್‌ವೇವ್ ಪ್ರದೇಶ ಎಂದು ಕರೆಯಲಾಗುವುದು. ಸಮತಟ್ಟಾದ ಪ್ರದೇಶದಲ್ಲು ಉಷ್ಣಾಂಶ 40 ಡಿಗ್ರಿ C ತಲುಪಿದಾಗ, ಕರಾವಳಿ ಭಾಗದಲ್ಲಿ 37 ಡಿಗ್ರಿ C, ಬೆಟ್ಟ ಪ್ರದೇಶಗಳಲ್ಲಿ ಉಷ್ಣಾಂಶ 30 ಡಿಗ್ರಿ C ತಲುಪಿದರೆ ಅದಕ್ಕೆ ಹೀಟ್‌ವೇವ್ ಎಂದು ಕರೆಯಲಾಗುವುದು.



Click it and Unblock the Notifications


