Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಆಮೆ ತಿಂದು ಅದರ ಚಿಪ್ಪನ್ನು ಹೆಲ್ಮೆಟ್ನಂತೆ ಧರಿಸಿ ಹೋಗುತ್ತಿರುವ ಕೊಮೊಡೊ ಡ್ರ್ಯಾಗನ್: ವೈರಲ್ ವೀಡಿಯೋ
ಕೊಮೊಡೊ ಡ್ರ್ಯಾಗನ್ ಪ್ರಪಂಚದ ಅತೀ ದೊಡ್ಡ ಹಲ್ಲಿ, ಇದರ ಹಲ್ಲುಗಳು ಶಾರ್ಕ್ನಂತೆ ಶಾರ್ಪ್ ಹಾಗೂ ತುಂಬಾನೇ ವಿಷಕಾರಿ ಪ್ರಾಣಿಯಾಗಿದೆ. ಇದೀಗ ಈ ಪ್ರಾಣಿ ಆಮೆಯನ್ನು ತಿಂದ ಹಳೆಯ ವೀಡಿಯೋ ಮತ್ತೆ ಟ್ರೆಂಡ್ ಆಗುತ್ತಿದೆ.

ಈ ವೀಡಿಯೋ 2019ರಲ್ಲಿ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿತ್ತು. ಬೃಹದಾಕಾರದ ಈ ಹಲ್ಲಿ ಬೀಚ್ನಲ್ಲಿ ಆಮೆಯ ಚಿಪ್ಪನ್ನು ಹೆಲ್ಮೆಟ್ನಂತೆ ಧರಿಸಿಕೊಂಡು ಹೋದ ವೀಡಿಯೋ ತುಂಬಾನೇ ಗಮನ ಸೆಳೆದಿತ್ತು.
ಇದೀಗ ಆ ಹಳೆಯ ವೀಡಿಯೋ ಮತ್ತೊಮ್ಮೆ ಟ್ರೆಂಡ್ ಆಗುತ್ತಿದೆ. ದೊಡ್ಡ ಗಾತ್ರದ ಆಮೆಯನ್ನು ತಿಂದ ಕೊಮೆಡೊ ಡ್ರ್ಯಾಗನ್ ಅದರ ಚಿಪ್ಪಿನೊಳಗಡೆ ತನ್ನ ಮುಖ ಹಾಕಿ ಸ್ವಲ್ಪ ದೂರ ಸಾಗಿ ನಂತರ ಆ ಚಿಪ್ಪನ್ನು ಪಕ್ಕಕ್ಕೆ ಎಸೆದಿದೆ.
2021ರಲ್ಲಿ ಬೃಹದಾಕಾರದ ಹಲ್ಲಿಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಯೆಂದು ಗುರುತಿಸಿದೆ. ವಿಶ್ವದಲ್ಲಿಯೇ ಈ ಹಲ್ಲಿಗಳು ಕೊಮೆಡೊದ ನ್ಯಾಷನಲ್ ಪಾರ್ಕ್ ಹಾಗೂ ಇಂಡೋನೇಷ್ಯಾದಲ್ಲಿರುವ ದ್ವೀಪಗಳಲ್ಲಿಷ್ಟೇ ಕಂಡು ಬರುತ್ತಿದೆ.
ಇಂಡೋನೇಷ್ಯಾದ ಮೃಗಾಲಯಗಳಲ್ಲಿ ಈ ಕೊಮೆಡೊ ಹಲ್ಲಿಯನ್ನು ಸಂರಕ್ಷಿಸಲಾಗುತ್ತಿದೆ, ಇವುಗಳ ಸಂತತಿ ಹೆಚ್ಚಿಸಿ, ಸಂರಕ್ಷಿಸಲು ಪ್ರಯತ್ನ ನಡೆಯುತ್ತಿವೆ. ಆದರೆ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಈ ಪ್ರಾಣಿಗಳ ಸಂತತಿ ಅಳಿವಿಗೆ ಪ್ರಮುಖ ಕಾರಣವಾಗುತ್ತಿದೆ.



Click it and Unblock the Notifications

