Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈರಲ್ ವೀಡಿಯೋ: ಸೂಟ್‌ಕೇಸ್‌ಗೆ ಬಟ್ಟೆ ತುಂಬುವ ಟ್ರಿಕ್ಸ್, ಸ್ಕೇಟಿಂಗ್ ಮಾಡುತ್ತಾ ಕುದುರೆ ಜೊತೆ ಹೋಗುತ್ತಿರುವ ವೀಡಿಯೋ ಸೂಪರ್ ಆಗ
ಬಟ್ಟೆ ಮಡಚಿಡುವುದು ಒಂದು ಕಲೆ, ಅದರಲ್ಲೂ ಸೂಟ್‌ಕೇಸ್‌ನಲ್ಲಿ ಬಟ್ಟೆ ತುಂಬುವುದು ಇದೆಯೆಲ್ಲಾ ಅದಕ್ಕೆ ಟ್ರಿಕ್ಸ್ ಗೊತ್ತಿರಬೇಕು.

ಇಲ್ಲದಿದ್ದರೆ ನಾಲ್ಕು ಬಟ್ಟೆ ತುಂಬುವಾಗ ಸೂಟ್‌ಕೇಸ್ ಅಥವಾ ಟ್ರಾಲಿ ತುಂಬುತ್ತದೆ, ನಿಮಗೆ ಎಲ್ಲಿಗಾದರೂ ಹೋಗುವಾಗ ಸೂಟ್‌ಕೇಸ್‌ಗೆ ಬಟ್ಟೆ ತುಂಬುವುದೇ ಒಂದು ದೊಡ್ಡ ಚಾಲೆಂಜ್ ಆಗಿದ್ದರೆ ಈ ವೈರಲ್ ವೀಡಿಯೋ ಖಂಡಿತ ನಿಮಗೆ ಬಟ್ಟೆ ಹೇಗೆ ತುಂಬಬೇಕು ಎಂಬ ಐಡಿಯಾ ನೀಡುತ್ತದೆ.
ಬಟ್ಟೆಯನ್ನು ಹೇಗೆ ಮಡಚಿಡಬೇಕು ಎಂಬ ವೀಡಿಯೋವೊಂದನ್ನು @TansuYege ಎಂಬವರು ಶೇರ್ ಮಾಡಿದ್ದು ಈ ವೀಡಿಯೋ ತುಂಬಾನೇ ವೈರಲ್ ಆಗಿದೆ. ಈ ಟ್ರಿಕ್ಸ್ ನೋಡಿದವರು ನೆಕ್ಟ್ಸ್ ನಾನು ಟ್ರಾಲಿ ಪ್ಯಾಕ್ ಮಾಡುವಾಗ ಖಂಡಿತ ಹೀಗೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ, ನಿಮಗೂ ಈ ಟ್ರಿಕ್ಸ್ ಇಷ್ಟ ಆಯ್ತಾ?
ಮತ್ತೊಂದು ವೀಡಿಯೋ ಮನಸ್ಸಿಗೆ ತುಂಬಾ ಮುದ ನೀಡುವಂತಿದೆ. ಮಹಿಳೆಯೊಬ್ಬರು ಸ್ಕೇಟಿಂಗ್ ಮಾಡುತ್ತಿದ್ದಾರೆ, ಕುದುರೆ ಅವರನ್ನು ಹಿಂಬಾಲಿಸುತ್ತಿದೆ, ಮುಂಜಾನೆ ಕುದುರೆ ಹಾಗೂ ಅವಳ ದೋಸ್ತಿ ನೆಟ್ಟಿಗರನ್ನು ಮೋಡಿ ಮಾಡಿದೆ. ಬರೀ ಕುದುರೆ ಮಾತ್ರವಲ್ಲ, ನಾಯಿ ಕೂಡ ಅವರ ಜೊತೆ ಓಡುತ್ತಿರುವುದನ್ನು ಕಾಣಬಹುದು.
ಈ ವೀಡಿಯೋ ಕೂಡ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಾಣಿಗಳೇ ಹಾಗೇ ಅವುಗಳನ್ನು ಒಮ್ಮೆ ಹಚ್ಚಿಕೊಂಡರೆ ಅವುಗಳ ಆಟ, ಚೇಷ್ಠೆಎಲ್ಲವೂ ತುಂಬನೇ ಖುಷಿ ನೀಡುತ್ತದೆ. ಎಷ್ಟೇ ಟೆನ್ಷನ್ ಇದ್ದರೂ ಎಲ್ಲಾ ಮರೆತು ನಗಲಾರಂಭಿಸುತ್ತೇವೆ, ಅದುವೇ ಅವುಗಳಿಗಿರುವ ಸಾಮರ್ಥ್ಯ.
ಸೂಟ್ ಕೇಸ್ ಪ್ಯಾಕ್ ಮಾಡುವ ಟ್ರಿಕ್ಸ್, ಕುದುರೆಯ ತುಂಟಾಟ ಎರಡು ನಿಮಗೆ ಇಷ್ಟವಾಗಿರಬೇಕಲ್ವಾ?
ಸೂಟ್‌ಕೇಸ್ ಪ್ಯಾಕ್ ಮಾಡಲು ಈ ಟಿಪ್ಸ್ ಸಹಾಯ ಮಾಡುತ್ತೆ ನೋಡಿ:
ಬಟ್ಟೆಯನ್ನು ರೋಲ್ ಮಾಡಿ ತುಂಬಿ: ಮೊದಲಿಗೆ ಪ್ಯಾಂಟ್ ಹಾಗೂ ಶರ್ಟ್ ರೋಲ್ ಮಾಡಿ ಇಡಿ, ನಂತರ ಶೂ ಮತ್ತಿತರ ಸಾಮಗ್ರಿ ಇಡಿ, ನಂತರ ಬಾಚಣಿಕೆ, ಕ್ರೀಮ್ ಮತ್ತಿತರ ವಸ್ತುಗಳನ್ನು ಇಡಿ.
* ಟ್ರಾವೆಲ್‌ಗೆ ಸೂಕ್ತವಾಗುವ ಬಟ್ಟೆಗಳನ್ನು ಬಳಸಿ.
* ನೀವು ಮೊದಲಿಗೆ ಬಳಸುವ ವಸ್ತುಗಳನ್ನು ಮೇಲೆ ಇಡಿ.
* ಭಾರವಾದ ವಸ್ತುಗಳನ್ನು ಕೆಳಗಡೆ ಇಡಿ.
* ಬಟ್ಟೆಗಳ ನಡುವೆ ಪ್ಲಾಸ್ಟಿಕ್ ಪದರಗಳನ್ನು ಇಡಿ. ಹೀಗೆ ಮಾಡುವುದರಿಂದ ಒಂದು ಬಟ್ಟೆ ಎಳೆಯುವಾಗ ಮತ್ತೊಂದು ಎಳೆಯುವುದನ್ನು ತಡೆಗಟ್ಟಬಹುದು.
* ಪ್ಯಾಕಿಂಗ್ ಕ್ಯೂಬ್ಸ್ ಬಳಸಿ (ಇವುಗಳು ಲೈಟ್‌ವೇಯ್ಟ್ ಆಗಿರುವುದರಿಂದ ಸೂಟ್‌ಕೇಸ್‌ನಲ್ಲಿ ಫಿಟ್ ಆಗುತ್ತೆ)
* ಚಿಕ್ಕ ಐರನ್ ಬಾಕ್ಸ್ ಇರಲಿ (ಎಮರ್ಜೆನ್ಸಿಗೆ ಇಸ್ತ್ರಿ ಹಾಕಬಹುದು)
* ಚಿಕ್ಕ ಲಾಂಡ್ರಿ ಬ್ಯಾಗ್ ಇಟ್ಟುಕೊಳ್ಳಿ (ಬಳಸಿರುವ ಬಟ್ಟೆ ಅದರಲ್ಲಿ ಹಾಕಿಡಬಹುದು)
* ಅಗ್ಯತವಿರುವ ಮೆಡಿಕಲ್ ಕಿಟ್ ಇಟ್ಟುಕೊಳ್ಳಿ.



Click it and Unblock the Notifications


