Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಎರಡು ಬೆಕ್ಕುಗಳ ನಡುವೆ ಜಗಳ ತಂದಾಕಿದ ಕಾಗೆ: ವೀಡಿಯೋ ಫುಲ್ ವೈರಲ್
ಇಬ್ಬರಿಗೆ ಜಗಳ ತಂದಾಕಿ ಮಜಾ ನೋಡುವ ಗುಣ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತದೆ ಗೊತ್ತಾ? ಎರಡು ಬೆಕ್ಕುಗಳ ಜಗಳಾಡುವಂತೆ ಮಾಡುವ ಕಾಗೆಯ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಈ ವೀಡಿಯೋ ತುಂಬಾನೇ ವೈರಲ್ ಆಗಿದೆ.

ಬೆಕ್ಕು, ನಾಯಿಗಳು ಕಚ್ಚಾಡುವುದನ್ನು ನೋಡಿರುತ್ತೇವೆ. ಆದರೆ ಎರಡು ಬೆಕ್ಕುಗಳ ನಡುವೆ ಜಗಳ ತಂದು ಹಾಕುವ ಕಾಗೆಯ ವೀಡಿಯೋ ನೋಡಿದ್ದೀರಾ? ಇಲ್ಲ ಅಂದರೆ ಈ ಈ ವೀಡಿಯೊ ನೋಡಿ, ನಿಮಗೆ ನಗು ತಡೆಯಕ್ಕಾಗಲ್ಲ...
ಎರಡು ಬೆಕ್ಕುಗಳಿಗೆ ಅದೇನೋ ಗೊತ್ತಿಲ್ಲ ದ್ವೇಷ ಉಂಟಾಗಿರುತ್ತೆ, ಒಂದು ಮತ್ತೊಂದರ ಮೇಲೆ ಮುಗಿ ಬೀಳು ಸಿದ್ಧವಾಗಿರುತ್ತೆ, ಆದರೆ ಜಗಳ ಶುರು ಮಾಡಿರಲ್ಲ, ಬಹುಶಃ ಕಾಗೆ ತನ್ನ ಬುದ್ಧಿ ತೋರಿಸದೇ ಹೋಗಿದ್ದರೆ ಆ ಎರಡು ಬೆಕ್ಕುಗಳ ನಡುವೆ ಕಾದಾಟ ನಡೆಯುತ್ತಿರಲಿಲ್ಲ, ಆದರೆ ಕಾಗೆಗೆ ಮಾತ್ರ ಆ ಎರಡು ಬೆಕ್ಕುಗಳು ಕಾದಾಡುವುದನ್ನು ನೋಡಬೇಕೆಂಬ ಆಸೆಯಿತ್ತೇನೋ, ಹಾಗಾಗಿ ಹಿಂದಿನಿಂದ ಹೋಗಿ ಒಂದು ಬೆಕ್ಕಿನ ಬಾಲಕ್ಕೆ ಕಚ್ಚುತ್ತೆ.
ಆ ಬೆಕ್ಕು ಮತ್ತೊಂದು ಬೆಕ್ಕು ನನ್ನ ಬಾಲವನ್ನು ಕಚ್ಚಿರಬಹುದೆಂದು ಫೈಟ್‌ಗೆ ನಿಲ್ಲುತ್ತೆ, ಎರಡು ಬೆಕ್ಕುಗಳ ನಡುವೆ ಕಾದಾಟ ಶುರುವಾಗುತ್ತೆ, ಅದನ್ನು ನೋಡಿ ಕಾಗೆ ಮಜಾ ತೆಗೆದುಕೊಳ್ಳುತ್ತಿರುತ್ತೆ.
ಈ ಎರಡು ಬೆಕ್ಕುಗಳ ಕಾದಾಟ, ಅವುಗಳನ್ನು ಹೊಡೆದಾಡುವಂತೆ ಮಾಡಿದ ಕಾಗೆ ನೋಡಿದವರು ನಮ್ಮ ನಡುವೆ ಕೂಡ ಕಾಗೆಯ ಬುದ್ಧಿಯವರು ಹಲವರು ಇದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಕಾಗೆ ಇತರ ಪಕ್ಷಿಗಳಿಗಿಂತ ಭಿನ್ನ, ತುಂಬಾನೇ ಬುದ್ಧಿವಂತಿಕೆ ಉಪಯೋಗಿಸುತ್ತೆ, ಅಲ್ಲದೆ ಅವುಗಳ ನೆನಪಿನ ಶಕ್ತಿ ಭಯಂಕರ. ಯಾರಾರೂ ಅದಕ್ಕೆ ತೊಂದರೆ ಕೊಟ್ಟರೆ ಅವರನ್ನು ನೆನಪಿಟ್ಟುಕೊಳ್ಳುತ್ತದೆ, ತನ್ನ ಮಕ್ಕಳಿಗೂ ಹೇಳಿಕೊಡುತ್ತೆ.
ನೀವೆಲ್ಲಾ ಬುದ್ಧಿವಂತಿಕೆ ಕಾಗೆಯ ಕತೆ ಓದಿರುತ್ತೇರಿ, ನೋಡಿರುತ್ತೀರಿ, ಈಗ ಕಾಗೆಯ ಕುತಂತ್ರಿ ಬುದ್ಧಿಯನ್ನು ಈ ವೀಡಿಯೋದಲ್ಲಿ ನೋಡಬಹುದು.



Click it and Unblock the Notifications

