Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಡ್ರೈವರ್ ಇಲ್ಲದೆ ಸ್ವಯಂ ಚಲಿಸಿ ಶೋ ರೂಂ ಪುಡಿ ಮಾಡಿದ ಟ್ಯಾಕ್ಟರ್, ವೀಡಿಯೋ ವೈರಲ್
ಡ್ರೈವರ್ ಇಲ್ಲದೆಯೇ ಸ್ಟಾರ್ಟ್ ಆಗಿ ಚಲಿಸಿದ ಟ್ಯಾಕ್ಟರ್, ಇಂಥದ್ದೊಂದು ವಿಚಿತ್ರ ಘಟನೆ ಯುಪಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬಿಜಿನೋರ್ ಎಂಬಲ್ಲಿರುವ ಶೋ ರೂಂ ಅದು, ಹೊರಗಡೆ ಮಾರಾಟಕ್ಕಿರುವ ಟ್ಯಾಕ್ಟರ್ ನಿಲ್ಲಿಸಲಾಗಿತ್ತು. ಶೋ ರೂಂ ಕಡೆಗೆ ಮುಖ ಮಾಡುವಂತೆ ನಿಲ್ಲಿಸಲಾಗಿತ್ತು. ಎಲ್ಲರು ಅವರವರ ಕಾರ್ಯದಲ್ಲಿ ಮಗ್ನರಾಗಿದ್ದರೆ, ನೋಡಿದರೆ ಹೊರಗಡೆ ನಿಂತ ಟ್ಯಾಕ್ಟರ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಯಿತು... ಆದರೆ ಟ್ಯಾಕ್ಟರ್‌ನಲ್ಲಿ ಡ್ರೈವರ್ ಮಾತ್ರ ಇರಲಿಲ್ಲ!

ಹೌದು ಅಚ್ಚರಿ ಅನಿಸಿದರೂ ಇದು ಸತ್ಯ, ಅದಕ್ಕೆ ಅಲ್ಲಿಯ ಸಿಸಿಟಿವಿ ಸಾಕ್ಷಿ, ಇದೀಗ ಆ ವೀಡಿಯೋ ಟ್ವಿಟರ್‌ನಲ್ಲಿ ತುಂಬಾ ಸದ್ದು ಮಾಡುತ್ತಿದೆ, ಜನರು ಈ ವೀಡಿಯೋ ನೋಡಿ, ಶೋ ರೂಮ್ ಆದ ಗತಿ ನೋಡಿ 'ಅಯ್ಯೋ ಶಿವನೇ' ಅಂತಿದ್ದಾರೆ.
ಶೋ ರೂಂ ಒಳಗಡೆ ರಿಸೆಪ್ಷನ್‌ನಲ್ಲಿ ಒಬ್ಬ ಕೂತು ಕೆಲಸ ಮಾಡುತ್ತಿದ್ದ, ನೋಡುತ್ತಾನೆ, ಹೊರಗಡೆ ನಿಂತ ಟ್ಯಾಕ್ಟರ್ ತನ್ನಿಂದ ತಾನೇ ಸ್ಟಾರ್ಟ್ ಆಗುತ್ತದೆ, ಆತ ಎದ್ದು ಹೊರಗಡೆ ಹೋಗುತ್ತಾನೆ, ಒಳಗಿದ್ದ ಮತ್ತೊಬ್ಬರು ಕೂಡ ಬರುತ್ತಾರೆ, ಅವರಿಗೆ ಏನು ಮಾಡಬೇಕೆಂದು ಏನೂ ತೋಚುವುದಿಲ್ಲ, ಹೀಗೆ ಶೋ ರೂಂನ 2-3 ಸ್ಟಾಫ್ ಹೊರಬಂದು ಟ್ಯಾಕ್ಟರ್ ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ, ಆದರೆ ಟ್ಯಾಕ್ಟರ್ ಸ್ವಯಂ ಚಲಿಸುತ್ತಾ ಬಂದು ಶೋ ರೂಂ ಗ್ಲಾಸ್ ಡೋರ್‌ಗೆ ಹೊಡೆದು ಪುಡಿ ಪುಡಿ ಮಾಡಿದೆ, ನಂತರ ಅಲ್ಲಿಯ ಕೆಲಸಗಾರರಲ್ಲಿ ಒಬ್ಬ ಟ್ಯಾಕ್ಟರ್ ಏರಿ ಕುಳಿತು ಟ್ಯಾಕ್ಟರ್ ನಿಲ್ಲಿಸುತ್ತಾನೆ.
ಯಾವ ಕಾರಣಕ್ಕೆ ಟ್ಯಾಕ್ಟರ್ ಸ್ವಯಂ ಚಲಿಸಿತು ಎಂದು ಗೊತ್ತಿಲ್ಲ, ಈ ಕುರಿತು ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಟ್ಯಾಕ್ಟರ್ ಸ್ವಯಂ ಚಲಿಸಿರುವುದು ಮಾತ್ರ ತುಂಬಾನೇ ಅಚ್ಚರಿಗೆ ಕಾರಣವಾಗಿದೆ.
Watch how a tractor starting on its own, entering shop in UP's Bijnor. The whole incident was recorded by a CCTV camera. pic.twitter.com/N6KcjEWDbf
— Dal Baati Churma Rajasthani Surma (@Dal_Bati_Curma) March 3, 2023



Click it and Unblock the Notifications
