Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಳೆಯಲ್ಲಿ ನೆನೆಯುತ್ತಿರುವ ಫುಡ್ ಡೆಲಿವರಿ ಬಾಯ್: ನೆಟ್ಟಿಗರ ಮನ ಕಲಕಿದ ದೃಶ್ಯ
ಸುರಿಯುತ್ತಿರುವ ಮಳೆಯಲ್ಲಿ ಬೆಚ್ಚನೆ ಮನೆಯಲ್ಲಿ ಕೂತಿರುವಾಗ ಎನಾದರೂ ರುಚಿ-ರುಚಿಯಾಗಿ ತಿನ್ನಬೇಕೆನಿಸುತ್ತದೆ, ಮೊಬೈಲ್ ತೆಗೆದು ಆನ್‌ಲೈನ್ ಫುಡ್ ಆರ್ಡರ್ ಮಾಡಿ ಡೆಲಿವರಿ ಬಾಯ್‌ಗಾಗಿ ಕಾಯುವುದಷ್ಟೇ ನಮ್ಮ ಕೆಲಸ, ಅವನು ಫುಡ್ ತಂದು ಕೊಟ್ಟ ತಕ್ಷಣ ಅವನಿಗೆ ಒಂದು ಥ್ಯಾಂಕ್ಸ್ ಹೇಳದೆಯೂ ನಮ್ಮ ಪಾರ್ಸಲ್ ತಗೊಂಡು ಬಂದು ಬಿಡುವವರೇ ಎಷ್ಟೋ ಮಂದಿ, ಆದರೆ ಈ ಫೋಟೋ ನೋಡಿದ ಮೇಲೆ ಇನ್ನು ಮುಂದೆ ಆ ರೀತಿ ಮಾಡಲು ಖಂಡಿತ ನಿಮಗೆ ಸಾಧ್ಯವಾಗಲ್ಲ, ಒಂದು ಥ್ಯಾಂಕ್ಸ್ ಹೇಳಿಯೇ ಹೇಳುತ್ತೀರಿ...

ಈ ಫುಡ್ ಡೆಲಿವರಿ ಬಾಯ್ಸ್ ಬದುಕು ಸುಲಭವಲ್ಲ, ತಮ್ಮ ಹೊಟ್ಟೆ ಪಾಡಿಗಾಗಿ ಬೇರೆಯವರ ಹೊಟ್ಟೆ ತುಂಬಿಸಲು ಹೊರಡುವ ಅವರದ್ದು ಚಾಲೆಜಿಂಗ್ ಜಾಬ್. ಬೆಂಗಳೂರಿನ ಟ್ರಾಫಿಕ್ ಜಾಮ್, ಮಳೆ, ಬಿಸಿಲು ಯಾವುದೂ ಲೆಕ್ಕಕ್ಕಿಲ್ಲ, ತಮ್ಮ ಗ್ರಾಹಕನಿಗೆ ಹೇಳಿದ ಸಮಯಕ್ಕೆ ಆಹಾರವನ್ನು ತಲುಪಿಸಬೇಕು , ಕೆಲವರಂತೂ ಫುಡ್ ತಲುಪಿಸಲು ಸ್ವಲ್ಪ ಲೇಟ್ ಆದರೂ ಫುಡ್ ರಿಟರ್ನ್ ಮಾಡುವುದು ಅಥವಾ ದರ್ಪದಿಂದ ವರ್ತಿಸುವವರಿಗೇನು ಕಮ್ಮಿಯಿಲ್ಲ, ಇನ್ನು ಮುಂದೆ ಹಾಗೆ ಮಾಡುವಾಗ ಅವರ ಪಡುತ್ತಿರುವ ಶ್ರಮದ ಬಗ್ಗೆ ಒಂದು ಕ್ಷಣ ಯೋಚಿಸಿ, ಫುಡ್ ಡೆಲಿವರಿ ಬಾಯ್ ಬದುಕು ಹೇಗಿರುತ್ತೆ ಎಂಬುವುದಕ್ಕೆ ಉದಾಹರಣೆ ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಆ ವೀಡಿಯೋ, ಈಗ ಅದರ ವೀಡಿಯೋ, ಫೋಟೋಗಳು ತುಂಬಾನೇ ವೈರಲ್ ಆಗಿದೆ.
ದಿನೇಶ್ ಕೊಮ್ಮ ಎಂಬವವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ವೀಡಿಯೋ 5 ಮಿಲಿಯನ್ ವ್ಯೂವ್ಸ್ ದಾಟಿದೆ.
ಧೋ ಅಂತ ಸುರಿಯುತ್ತಿರುವ , ಒಂದು ರೈನ್‌ಕೋಟ್ ಕೂಡ ಇಲ್ಲದೆ ಸ್ವಿಗ್ಗಿ ಡೆಲಿವರಿ ಬಾಯ್ ಫುಡ್ ಡೆಲಿವರಿಗೆ ಹೋಗ್ತಾ ಇದ್ದಾನೆ.. ಈ ವೀಡಿಯೋ ನೆಟ್ಟಿಗರ ಮನ ತಟ್ಟಿದೆ.
ಫುಡ್ ಡೆಲಿವರಿ ಬಾಯ್ ಒಂದು 5-10 ನಿಮಿಷ ತಡವಾಗಿ ಬಂದರೆ ಸಿಡುಕಬೇಡಿ, ಬ್ಯಾಡ್ ರೇಟಿಂಗ್ ಕೊಡಬೇಡಿ, ನಿಮ್ಮ ಒಂದು ಒಳ್ಳೆಯ ರೇಟಿಂಗ್‌ಗಾಗಿ ಅವರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಬರ್ತಾ ಇರುತ್ತಾರೆ, ನಮ್ಮ ಹೊಟ್ಟೆ ತುಂಬಲು ಬರುವ ಅವರ ಹೊಟ್ಟೆಯು ತಣ್ಣಗಿರಲಿ ಎಂದು ನಾವು ಆಶಿಸಬೇಕು ಅಲ್ವಾ?



Click it and Unblock the Notifications

