Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಯಾವ ಹಿರೋಯಿನ್‌ಗಳಿಗೂ ಕಮ್ಮಿಯಿಲ್ಲ ಈ ಕ್ರಿಕೆಟ್ ಆಟಗಾರ್ತಿಯರು
ಕ್ರಿಕೆಟ್ ದೇಶದಾದ್ಯಂತ ಬಹು ಪ್ರಖ್ಯಾತಿ ಪಡೆದಿರೋ ಕ್ರೀಡೆ. ಕ್ರಿಕೆಟ್‌ಗೆ ಅತೀದೊಡ್ಡ ಅಭಿಮಾನಿ ಬಳಗವೇ ಇದೆ. ಕೇವಲ ಪುರುಷರ ಕ್ರಿಕೆಟ್ ಮಾತ್ರವಲ್ಲ ಮಹಿಳೆಯರ ಕ್ರಿಕೆಟ್‌ಗೂ ಜನ ಅಷ್ಟೇ ಸಪೋರ್ಟ್ ಮಾಡ್ತಾರೆ. ಅದ್ರಲ್ಲೂ ಕೆಲ ಮಹಿಳಾ ಕ್ರಿಕೆಟಿಗರು ಆನ್ ದಿ ಫೀಲ್ಡ್‌ನಲ್ಲಿ ಮಾತ್ರವಲ್ಲದೇ ಆಫ್ ದಿ ಫೀಲ್ಡ್‌ನಲ್ಲೂ ಕಮಾಲ್ ಮಾಡ್ತಿದ್ದಾರೆ.

ಹೌದು, ಮಹಿಳಾ ಕ್ರಿಕೆಟಿಗರು ತಮ್ಮ ಆಟದ ಜೊತೆಗೆ ಬ್ಯೂಟಿಫುಲ್ ಲುಕ್‌ನಿಂದ ಗಮನಸೆಳಿತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಮಹಿಳಾ ಕ್ರಿಕೆಟಿಗರು ತಮ್ಮ ಸ್ಟೈಲಿಷ್ ಫೋಟೋಗಳನ್ನು ಆಗಾಗ್ಗೆ ಪೋಸ್ಟ್ ಮಾಡ್ತಾರೆ. ಇದು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಹಾಗಾದ್ರೆ ತಮ್ಮ ಮೋಹಕ ಸೌಂದರ್ಯದಿಂದಲೇ ಮೋಡಿ ಮಾಡಿರೋ ಮಹಿಳಾ ಕ್ರಿಕೆಟಿಗರು ಯಾರು? ಇಲ್ಲಿದೆ ಡಿಟೇಲ್ಸ್.
1. ಸ್ಮೃತಿ ಮಂದಾನ
ಸ್ಮೃತಿ ಮಂದಾನ ಭಾರತದ ತಂಡದ ಭರವಸೆಯ ಆಟಗಾರ್ತಿ ಇವರು ಫೀಲ್ಡ್‌ಗೆ ಎಂಟ್ರಿ ಕೊಟ್ರೆ ಹೊಡೆ ಬಡಿ ಆಟ ಶುರು. ಎಡಗೈ ಬ್ಯಾಟ್ಸ್‌ವುಮೆನ್ ಆಗಿರುವ ಇವರು ಅನೇಕ ಅಂತರಾಷ್ಟೀಯ ಪಂದ್ಯಗಳನ್ನು ಭಾರತದ ಪರವಾಗಿ ಆಡಿದ್ದಾರೆ. ನೋಡೋದಕ್ಕು ತುಂಬಾನೇ ಮುದ್ದು ಮುದ್ದಾಗಿರುವ ಇವರು ತಮ್ಮ ಕ್ಯೂಟ್ ಲುಕ್‌ನಿಂದಾನೇ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ.
2. ಪ್ರಿಯಾ ಪುನಿಯಾ
ಪ್ರಿಯಾ ಪುನಿಯಾ ತಮ್ಮ ಮೊದಲ ಟಿ-20 ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಿದ್ದರು. ಇವರು ಬಲಗೈ ಬ್ಯಾಟ್ಸ್‌ವುಮೆನ್ ಆಗಿದ್ದು, ತಮ್ಮ ಮೋಹಕ ಆಟದಿಂದ ಫೀಲ್ಡ್‌ನಲ್ಲಿ ಕಮಾಲ್ ಮಾಡ್ತಾರೆ. ತುಂಬಾನೇ ಸಿಂಪಲ್ ಲುಕ್‌ನಲ್ಲಿ ಇದ್ರು ಕೂಡ ಕ್ಯೂಟ್ ಆಗಿ ಕಾಣ್ತಾರೆ.
3. ವೇದಾ ಕೃಷ್ಣಮೂರ್ತಿ
ವೇದಾಕೃಷ್ಣಮೂರ್ತಿ ಕರ್ನಾಟಕದಿಂದ ಆಯ್ಕೆಯಾಗಿ ದೇಶವನ್ನು ಪ್ರತಿನಿಧಿಸ್ತಿರೋ ನಮ್ಮ ಹೆಮ್ಮೆಯ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‌ವುಮೆನ್ ಹಾಗೂ ರೈಟ್ ಆರ್ಮ್ ಲೆಗ್ ಬೌಲರ್ ಕೂಡ ಹೌದು. ಇವರು ತಮ್ಮ ಹದಿನೆಂಟನೇಯ ವಯಸ್ಸಿನಲ್ಲೇ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟೀಯ ಪಂದ್ಯವನ್ನು ಆಡಿದ್ದರು. ಇನ್ನೂ ಇವರ ಲುಕ್ ಬಗ್ಗೆ ಹೇಳೋದಾದರೆ ನೋಡೋದಕ್ಕೆ ತುಂಬಾನೇ ಸುಂದರವಾಗಿದ್ದಾರೆ. ಸ್ಟೈಲೀಶ್ ಲುಕ್ ಇವರಿಗೆ ಚೆನ್ನಾಗಿ ಒಪ್ಪುತ್ತದೆ.
4. ಹರ್ಲಿನ್ ಡಿಯೋಲ್
ಚಂಢೀಗಡದ ಆಟಗಾರ್ತಿಯಾಗಿರೋ ಹರ್ಲಿನ್ ಡಿಯೋಲ್ ಎಡಗೈ ಬ್ಯಾಟ್ಸ್‌ವುಮೆನ್ ಮತ್ತು ರೈಟ್ ಆರ್ಮ್ ಲೆಗ್ ಸ್ಪಿನ್ನರ್ ಕೂಡ ಹೌದು. ಚಂಢೀಗಡದಿಂದ ದೇಶವನ್ನು ಪ್ರತಿನಿಧಿಸ್ತಿರೋ ಎರಡನೇ ಆಟಗಾರ್ತಿ ಆಗಿರೋ ಹರ್ಲಿನ್ ತಮ್ಮ ನಗುವಿನಿಂದಾನೇ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ. ಇನ್ನೂ ಫೋಟೋಶೂಟ್‌ಗಳಲ್ಲಿ ಹಾಟ್ ಆಗಿಯೂ ಕಾಣಿಸಿಕೊಂಡಿದ್ದಾರೆ.
5. ಮಿತಾಲಿ ರಾಜ್
ಮಿತಾಲಿ ರಾಜ್ ಆನ್ ಫೀಲ್ಡ್ ಅಥವಾ ಆಫ್ ದಿ ಫೀಲ್ಡ್‌ನಲ್ಲೂ ತುಂಬಾನೇ ಸ್ಟೈಲಿಶ್ ಆಗಿ ಕಾಣ್ತಾರೆ. ಇವರು ದೇಶ ಕಂಡ ಶ್ರೇಷ್ಠ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ಹಾಗೂ ಮಹಿಳಾ ಅಂತರಾಷ್ಟೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ್ದಾರೆ. ಜೂನ್ 8, 2022ರಲ್ಲಿ ಎಲ್ಲಾ ಫಾರ್ಮೆಟ್‌ನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ.
6. ಹರ್ಮನ್‌ಪ್ರೀತ್ ಕೌರ್
ಹರ್ಮನ್ ಭಾರತದ ಮಹಿಳೆಯರ ಕ್ರಿಕೆಟ್ ತಂಡದ ಎಲ್ಲಾ ಫಾರ್ಮೆಟ್‌ನ ಕ್ಯಾಪ್ಟನ್ ಆಗಿದ್ದಾರೆ. ಈಕೆ ಆಲ್‌ರೌಂಡರ್ ಕೂಡ ಹೌದು. ಈಕೆಗೆ ಆರ್ಜುನ್ ಅವಾರ್ಡ್ ಕೂಡ ಲಭಿಸಿದೆ. ಈಕೆ ಆಟದ ಹೊರತಾಗಿ ತನ್ನ ಸ್ಟೈಲೀಶ್ ಲುಕ್‌ನಿಂದಾನೂ ಗಮನ ಸೆಳೆಯುತ್ತಾರೆ.
7. ಮೋನಾ ಮೆಶ್ರಮ್
ಮೋನಾ ಮೆಶ್ರಮ್ ಅವರು ಬಲಗೈ ಬ್ಯಾಟ್ಸ್‌ವುಮೆಟ್ ಮತ್ತು ರೈಟ್ ಆರ್ಮ್ ಮೀಡಿಯಂ ಬೌಲರ್. ಈಕೆ ಕೂಡ ಸುಂದರವಾದ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು. ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರೋ ಇವರು ಆಗಾಗ್ಗೆ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
8. ಜೆಮಿಮಾ ರೋಡ್ರಿಗ್ರಸ್
ಜೆಮೀಮಾ ರೋಡ್ರಿಗಸ್ ರೈಟ್ ಹ್ಯಾಂಡ್ ಬ್ಯಾಟ್ಸ್‌ವುಮೆನ್. ಜೂನ್ 2018 ರಲ್ಲಿ ಇವರಿಗೆ ಕಿರಿಯರ ದೇಶಿಯ ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆಗಾಗಿ ಎಂ.ಎಸ್ ದೋನಿ ಅವರು ಜಗ್‌ಮೋಹನ್ ದಾಲ್ಮೀಯ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ನೋಡಲು ಮನಮೋಹಕವಾಗಿರುವ ಇವರನ್ನ ಕಂಡರೆ ಎಂತವರು ಕೂಡ ಮನಸೋಲದೇ ಇರುವುದಿಲ್ಲ.
ಇವರೇ ಭಾರತದ ಮಹಿಳಾ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಆಫ್ ದಿ ಫೀಲ್ಡ್‌ನಲ್ಲೂ ಕಮಾಲ್ ಮಾಡಿರೋ ಆಟಗಾರ್ತಿಯರು.



Click it and Unblock the Notifications