Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವೈರಲ್ ವೀಡಿಯೋ: ಆನೆಯೊಂದು ಬಿಡಿಸಿದ ಆನೆಯ ಚಿತ್ರ ನೋಡಣ್ಣಾ...
ಹಳೆಯದಾದರೂ ಕೆಲವೊಂದು ವೀಡಿಯೋಗಳನ್ನು ನೋಡಿದಷ್ಟೂ ಏನೋ ಖುಷಿಯಾಗುವುದು, ಅಲ್ಲದೆ ಅಂಥ ಮನಸ್ಸಿಗೆ ಖುಷಿ ಕೊಡುವ ವೀಡಿಯೋ ಬೇಗನೆ ಸಾಮಾಜಿಕ ತಾಣದಲ್ಲಿ ಟ್ರೆಂಡ್ ಕೂಡ ಆಗುವುದು.

ಈಗ ಅಂಥದ್ದೇ ಹಳೆಯ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಆನೆಯೊಂದು ಆನೆಯ ಚಿತ್ರ ಬರೆಯುತ್ತಿರುವ ಕ್ಯೂಟ್ ವೀಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಆನೆಯನ್ನು ನೋಡುವುದೇ ಚೆಂದ. ಅದು ಸಾಕಾನ ಆಗಿರಲಿ, ಕಾಡಾನೆ ಆಗಿರಲಿ ಆನೆಯ ವೀಡಿಯೋ ಅಂದ್ರೆನೇ ನೆಟ್ಟಿಗರ ಮನ ಸೆಳೆಯುತ್ತದೆ, ಅಂಥದ್ದರಲ್ಲಿ ಆನೆಯೊಂದು ತನ್ನದೇ ಚಿತ್ರ ಬರೆಯುತ್ತಿರುವುದು ನೋಡಲು ಎಷ್ಟೊಂದು ಖುಷಿ ಅಲ್ಲವೇ?
ಆನೆ ತನ್ನ ಆನೆಯ ಚಿತ್ರ ಬರೆದಿದ್ದು ಮಾತ್ರವಲ್ಲ ಅದರ ಮುಂದುಗಡೆ ಹೂ ಬಿಟ್ಟಿರುವ ಮರ ಬಿಡಿಸಿ, ಸುದಾ ಅಂತ ತನ್ನ ಹೆಸರು ಕೂಡ ಬರೆಯುತ್ತೆ.
ಈ ವೀಡಿಯೋವನ್ನು ನೋಡಿ ಕೆಲವರು ತುಂಬಾ ಖುಷಿ ಪಟ್ಟರೆ ಇನ್ನು ಕೆಲವರು ಇದು ಕ್ರೂರತನ ಪ್ರಾಣಿಗಳನ್ನು ಅದರ ಪಾಡಿಗೆ ಬಿಡಬೇಕು. ಇಷ್ಟು ತರಬೇತಿ ಆನೆಗೆ ಕೊಡುವಾಗ ಅದು ಅನುಭಿಸಿರುವ ಹಿಂಸೆ ಎಂಥದ್ದು ಊಹಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದು ಥೈಲ್ಯಾಂಡ್ನ ಸುದಾ ಎಂಬ ಆನೆಯಾಗಿದೆ.



Click it and Unblock the Notifications
