Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪ್ಪನ ಡ್ರೀಮ್ ಬೈಕ್ ಗಿಫ್ಟ್ ಮಾಡಿದ ಮಗ: ಅಪ್ಪನ ರಿಯಾಕ್ಷನ್ ನೋಡಿ ನೆಟ್ಟಿಗರೂ ಫುಲ್ ಖುಷ್
ಮಧ್ಯಮವರ್ಗದ ಕುಟುಂಬದಲ್ಲಿ ಮಕ್ಕಳ ಆಸೆಗಳನ್ನು ಪೂರೈಸಲು ಪೋಷಕರು ತಮ್ಮೆಲ್ಲಾ ಆಸೆಗಳನ್ನು ಬದಿಗಿಡುತ್ತಾರೆ. ಒಂದೊಳ್ಳೆ ಸ್ಕೂಟರ್ ಬೇಕು ಎಂಬ ಮನಸ್ಸಿರುತ್ತದೆ, ಆದರೆ ಮಕ್ಕಳ ಫೀಸ್ ಕಟ್ಟಿ, ಮಕ್ಕಳಿಗೆ ಬೇಕಾಗಿರುವುದನ್ನು ಕೊಡಿಸುವಷ್ಟರಲ್ಲಿ ಜೇಬು ಖಾಲಿ..ಸದಾ ಮಕ್ಕಳು-ಮಕ್ಕಳು ಅಂತ ತಮ್ಮೆಲ್ಲಾ ಆಸೆಗಳನ್ನು ಮರೆತು ಬಿಡುತ್ತಾರೆ...

ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಮ್ಮ ಪೋಷಕರ ಮನಸ್ಸು ಅರಿತು ನಡೆದುಕೊಂಡರೆ ಅವರೆಷ್ಟು ಖುಷಿ ಪಡುತ್ತಾರೆ ಎಂಬುವುದಕ್ಕೆ ಈ ವೀಡಿಯೋನೇ ಸಾಕ್ಷಿ. ಇದರಲ್ಲಿ ಮಗ ಅಪ್ಪನ ಹುಟ್ಟು ಹಬ್ಬಕ್ಕೆ ಬೈಕ್ ಉಡುಗೊರೆ ನೀಡಿದಾಗ ಆ ತಂದೆಯ ಮುಖದಲ್ಲಿ ಮೂಡಿದ ಖುಷಿ ನೋಡಿ ನೆಟ್ಟಿಗರು ತುಂಬಾನೇ ಇಷ್ಟಪಡುತ್ತಿದ್ದಾರೆ.
ಬೈಕ್ ಕೀಯನ್ನು ಗಿಫ್ಟ್ ಪ್ಯಾಕ್ ಮಾಡಿದ ರೀತಿಯಲ್ಲಿ ತಂದೆಗೆ ಕೊಡ್ತಾನೆ, ತಂದೆ ಓಪನ್ ಮಾಡಿ ನೋಡಿದರೆ ಬೈಕ್ ಕೀ... ನಂತರ ಮಗ ನೀಡಿದ ಬೈಕ್ ಏರಿ ಕೂರುವ ತಂದೆಯ ಖುಷಿ ಹೇಳತೀರದು.. ಈ ಎಲ್ಲಾ ಸುಂದರ ಕ್ಷಣಗಳನ್ನು ಮಗ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ವೀಡಿಯೋ ತುಂಬಾನೇ ವೈರಲ್ ಆಗಿದೆ.
ಈ ವೀಡಿಯೋವನ್ನು ಉಜ್ವಲ್ ಸಿದ್ನಾಗ್ ಶೇರ್ ಮಾಡಿ, ತನ್ನ ತಂದೆಗೆ ಏಕೆ ನಾನು ಆ ಬೈಕ್ ಕೊಡಿಸಬೇಕೆಂದು ಯೋಚಿಸಿದೆ ಎಂಬುವುದನ್ನು ಬರೆದುಕೊಂಡಿದ್ದಾರೆ.
'ನಿಮ್ಮ ಬಗ್ಗೆ ಹೇಳಿಕೊಳ್ಳಲು ಪದಗಳೇ ಸಿಗ್ತಾ ಇಲ್ಲ, ನೀವೇ ನನ್ನ ಸೂಪರ್‌ಮ್ಯಾನ್, ನೀವು ತುಂಬಾ ಒಳ್ಳೆಯವರು. ನನ್ನ ತಂದೆ ಯಾವಾಗಲೂ ನನ್ನಜ್ಜನ ಬೈಕ್ ತುಂಬಾ ಇಷ್ಟಪಡುತ್ತಿದ್ದರು, ನನ್ನಜ್ಜ ಸಬ್‌ಇನ್‌ಸ್ಪೆಕ್ಟರ್ ಆಗಿದ್ದರು, ಅವರಿಗೆ ಡಿಪಾರ್ಟ್‌ಮೆಂಟ್ ಬೈಕಾಗಿತ್ತು, ಕಳೆದ ವರ್ಷದವರೆಗೆ ನನ್ನ ತಂದೆಗೆ ನಾನು ಕೊಡಿಸಿದ ಬೈಕ್ ತುಂಬಾ ಇಷ್ಟ ಇತ್ತು ಎಂದು ಗೊತ್ತೇ ಇರಲಿಲ್ಲ, ಒಮ್ಮೆ ಹಾಗೇ ಸುಮ್ಮನೆ ಶೋ ರೂಮ್‌ಗೆ ಹೋದ್ವಿ, ಆಗ ಅಪ್ಪ ಈ ಬೈಕ್‌ಗೆ ತುಂಬಾನೇ ಬೆಲೆ,ನಮ್ಮಿಂದ ಇದು ಖರೀದಿಸಲು ಸಾಧ್ಯವಿಲ್ಲ ಎಂದಿದ್ದರು, ಆಗ ನನಗೆ ಅವರಿಗೆ ಆ ಬೈಕ್ ಎಂದರೆ ಎಷ್ಟು ಇಷ್ಟ ಎಂಬುವುದು ಗೊತ್ತಾಯ್ತು. ಏಕೆಂದರೆ ಅದೇ ಬೈಕ್‌ನ ಹಳೆಯ ಮಾಡಲ್ ನನ್ನಜ್ಜ ಬಳಸುತ್ತಿದ್ದರು, ಈ ಬೈಕ್ ಅದರ ಹೊಸ ವರ್ಸನ್. ಆಗ ನನಗೆ ಅಪ್ಪನಿಗೆ ಕೊಡಿಸಲು ಈ ಬೈಕ್ ಕೊಡಿಸುವುದಕ್ಕಿಂತ ದೊಡ್ಡ ಗಿಫ್ಟ್ ಬೇರೆಯಿಲ್ಲ ಎಂಬುವುದು ತಿಳಿಯಿತು, ಅವರ ಕನಸುಗಳನ್ನು ನನಸು ಮಾಡಲು ಶಕ್ತಿ ನೀಡಿದ ದೇವರಿಗೆ ಧನ್ಯವಾದಗಳು, ಇವತ್ತು ನಾನು ಏನಾಗಿದ್ದೇನೆ ಅದು ನಿಮ್ಮಿಂದಾಗಿ, ನಿಮ್ಮ ಬೆಂಬಲದಿಂದಾಗಿ. ನನಗೆ ಈಗಲೂ ನೆನಪಿದೆ ' ನಾನು ಕೆಲಸ ಬಿಟ್ಟು ಬ್ಯುಸ್‌ನೆಸ್ ಮಾಡ್ತೀನಿ ಎಂದಾಗ ನಿನಗೆ ಏ ಏನು ಖುಷಿ ಕೊಡುತ್ತದೋ ಅದನ್ನು ಮಾಡು ಅಂದಿದ್ದೀರಿ, ಇದಕ್ಕಿಂತ ಹೆಚ್ಚಿನದು ನಾನೇನು ಕೇಳಲು ಸಾಧ್ಯ, ಇದು ನನ್ನ ಜೀವನದ ಅತ್ಯಾದ್ಭುತ ದಿನವಾಗಿದೆ' ಎಂದು ಬರೆದುಕೊಂಡಿದ್ದಾರೆ.
ಈ ಅಪ್ಪ-ಮಗನ ನೋಡಿ ನೆಟ್ಟಿಗರು ತುಂಬಾನೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



Click it and Unblock the Notifications

