Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಜುಲೈ 20ಕ್ಕೆ ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡಮಾರುತ: ಭೂಮಿಗೆ ಅಪಾಯ ಉಂಟಾಗುವುದೇ?
ನಾಲ್ಕು ದಿನದ ಹಿಂದೆ ಅಂದರೆ ಜುಲೈ 15ಕ್ಕೆ ಸೋಲಾರ್ ಜ್ವಾಲೆಯೊಂದು ಸೂರ್ಯನಿಂದ ಬೇರ್ಪಟ್ಟಿತ್ತು. ಸೌರ ಮಂಡಲದಲ್ಲಿ ಅನಿಯಂತ್ರಿತ ಚಟುವಟಿಗೆ ಹಾಗೂ ನಿರಂತರ ಉರಿಯುವಿಕೆಯಿಂದಾಗಿ ಹೊಸ ಜ್ವಾಲೆ ಏರ್ಪಟ್ಟಿದ್ದು ಇದನ್ನು AR3058 ಎಂದು ಕರೆಯಲಾಗುವುದು, ಆ ದಿನವೇ ಅದರ ಕಾಂತೀಯ ಕಿರಣಗಳು ಭೂಮಿಗೆ ತಲುಪಿದ್ದೆವು, ಇದರಿಂದಾಗಿ GPS ಅಡಚಣೆ ವಿಶ್ವದ ಹಲವು ಭಾಗಗಳಲ್ಲಿ ಉಂಟಾಗಿತ್ತು.
ಇದೀಗ ಆ ಸೌರ ಜ್ವಾಲೆ, ಸೌರ ಮಾರುತವಾಗಿ ಭೂಮಿಗೆ ಅಪ್ಪಳಿಸಲಿದೆ. ಈ ಪ್ರಬಲ ಸೌರ ಮಾರುತ ಭೂಮಿಗೆ ಜುಲೈ 20ಕ್ಕೆ ಅಪ್ಪಳಿಸಲಿದೆ. ಈ ಸೌರ ಮಾರುತದಿಂದ ಭೂಮಿಗೆ ಅಪಾಯ ಉಂಟಾಗುವುದೇ? ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ:

ಸೋಲಾರ್ ಮಾರುತ ಬಗ್ಗೆ ಮಾಹಿತಿ ನೀಡಿರುವ SpaceWeather.com
ಸೂರ್ಯನಿಂದ ಬೇರ್ಪಟ್ಟ ಜ್ವಾಲೆ ಸೌರ ಮಾರುತವಾಗಿ ಜಯಲೈ 20 ಅಥವಾ 21ಕ್ಕೆ ಭೂಮಿಗೆ ಅಪ್ಪಳಿಸಲಿದೆ ಎಂದು SpaceWeather.com ಮಾಹಿತಿ ನೀಡಿದೆ. ಇದರ ಬಗ್ಗೆ ಭೌತ ಶಾಸ್ತ್ರಜ್ಞೆ ಡಾ. ತಮಿತಾ ಸ್ಕೌ ತಮ್ಮ ಟ್ವಿಟರ್ ಖಾಲೆಯಲ್ಲಿ ಸೌರ ಮಾರುತ ನಾಳೆ ಅಪ್ಪಳಿಸುವ ಸಾಧ್ಯತೆ ಶೇ.50ರಷ್ಟು ಇದೆ. ಇದರಿಂದ GPSಗೆ ಅಡಚಣೆ ಉಂಟಾಗಲಿದೆ ಎಂದು ಹೇಳಿದ್ದಾರೆ.

ನಾಳೆ ಅಪ್ಪಳಿಸಲಿದೆ ಸೌರ ಚಂಡಮಾರುತ
ಸೋಲಾರ್ ಚಂಡಮಾರುತ ಭೂಮಿಯನ್ನು ತಲುಪಲು 284-48 ಗಂಟೆಗಳು ತೆಗೆದುಕೊಳ್ಳುತ್ತದೆ, ಇದರಿಂದ GPS ಸಿಗ್ನೆಲ್‌ಗಳಲ್ಲಿ ಅಡಚಣೆ ಉಂಟಾಗುವುದು. ಮೊಬೈಲ್ ನೆಟ್‌ವರ್ಕ್‌ನಲ್ಲೂ ತೊಂದರೆಗಳು ಕಂಡು ಬರುವುದು.

ಪ್ರಖರ ಸೌರ ಪ್ರಭೆ ಗೋಚರಿಸಲಿದೆ
ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸುವಾಗ ಪ್ರಖರ ಸೌರ ಪ್ರಭೆ ಕಂಡು ಬರಲಿದೆ. ಸೌರ ಬಿರುಗಾಳಿಗಳು ಸಂವಹನ ಮತ್ತು ಇಂಧನ ಜಾಲಗಳನ್ನು ಅಡ್ಡಿಪಡಿಸುವ ಮತ್ತು ವಿದ್ಯುತ್ ಕಡಿತವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ , ಆದರೆ ಈ ಬಾರಿ ಆ ರೀತಿಯಾಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ.



Click it and Unblock the Notifications
