Latest Updates
-
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ
ಶನೇಶ್ವರ ಅಮವಾಸ್ಯೆಯಂದು ಸೂರ್ಯಗ್ರಹಣ: ಈ 5 ರಾಶಿಯವರು ಹುಷಾರಾಗಿರಬೇಕು
2022 ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30ಕ್ಕೆ ಸಂಭವಿಸಲಿದೆ. ಶನೇಶ್ವರ ಅಮವಾಸ್ಯೆಗೆ ಮೇಷ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ.ಸೂರ್ಯಗ್ರಹಣಕ್ಕೆ ವೈದಿಕ ಶಾಸ್ತ್ರದಲ್ಲಿ ತುಂಬಾನೇ ಮಹತ್ವವಿದೆ. ಗ್ರಹದ ಪ್ರಭಾವ ರಾಶಿಗಳ ಮೇಲೆ, ದೇಶ-ವಿದೇಶದ ಮೇಲೆ ಇರಲಿದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.

ಏಪ್ರಿಲ್‌ನಲ್ಲಿ ಸಂಭವಿಸಲಿರುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯಗ್ರಹಣ ಏಪ್ರಿಲ್ 30 ಮಧ್ಯರಾತ್ರಿ 2:15ರಿಂದ ಮುಂಜಾನೆ 4:07ರವರೆಗೆ ಇರಲಿದೆ. ಪಶ್ಚಿಮ-ದಕ್ಷಿಣ ಅಮೆರಿಕ, ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಖಂಡ, ಅಂಟಾರ್ಕ್ಟಿಕ ಸಾಗರ ಈ ಭಾಗಗಳಲ್ಲಿ ಕಂಡು ಬರಲಿದೆ.
ಭಾರತದಲ್ಲಿ ಗ್ರಹಣ ಗೋಚರಿಸದಿದ್ದರೂ ಅದರ ಪ್ರಭಾವ ಅಂತೂ ರಾಶಿಗಳ ಮೇಲೆ ಇದ್ದೇ ಇರುತ್ತದೆ. ಈ ಸೂರ್ಯಗ್ರಹಣ ದ್ವಾದಶ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ಈಗಾಗಲೇ ನೀಡಲಾಗಿದೆ.
ಇಲ್ಲಿ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಈ ಸೂರ್ಯಗ್ರಹಣ ಯಾವ ರಾಶಿಗಳಿಗೆ ಒಳ್ಳೆಯದಲ್ಲ, ಯಾರು ಹುಷಾರಾಗಿರಬೇಕು ಎಂಬ ವಿಷಯ ನೀಡಲಾಗಿದೆ ನೋಡಿ:

ಮೇಷ ರಾಶಿ:
ಏಪ್ರಿಲ್ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಸಂಭವಿಸುತ್ತದೆ. ಆದ್ದರಿಂದ, ಮೇಷ ರಾಶಿಯ ಜನರು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಗ್ರಹಣದ ಪ್ರಭಾವದಿಂದಾಗಿ ಅದಷ್ಟ ನಿಮ್ಮನ್ನು ಬೆಂಬಲಿಸುವುದಿಲ್ಲ ಆದ್ದರಿಂದ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ರಾಶಿಯವರು ಸೂರ್ಯಗ್ರಹಣದ ಪ್ರಭಾವದಿಂದ ಹಣವನ್ನು ಕಳೆದುಕೊಳ್ಳಬಹುದು. ಈ ದಿನ ವಹಿವಾಟು ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ದೂರ ಪ್ರಯಾಣ ಮಾಡಬೇಡಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ವರ್ಷದ ಮೊದಲ ಸೂರ್ಯಗ್ರಹಣವು ಒಳ್ಳೆಯದಲ್ಲ. ನೀವು ಮಕ್ಕಳ ವೃತ್ತಿಜೀವನದ ಬಗ್ಗೆ ಚಿಂತೆ ಹೆಚ್ಚುವುದು. ಕಠಿಣ ಪರಿಶ್ರಮಕ್ಕೆ ಪೂರ್ಣ ಫಲ ಸಿಗುವುದಿಲ್ಲ. ಯಾರಿಗೂ ಸಾಲ ಕೊಡಬೇಡಿ. ಕೆಮ್ಮು, ಶೀತದ ಸಮಸ್ಯೆ ಕಾಡಬಹುದು. ವೃತ್ತಿ ಬದಲಾವಣೆಗೆ ಅವರಸರ ಬೇಡ.

ತುಲಾ ರಾಶಿ
ತುಲಾ ರಾಶಿಯವರಿಗೆ ಗ್ರಹಣದ ಪ್ರಭಾವವು ಅದೃಷ್ಟವನ್ನು ಸೂಚಿಸುತ್ತದೆ. ನೀವು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ. ಆದರೆ ಆರೋಗ್ಯದ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಆದ್ದರಿಂದ ಈ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ವೃತ್ತಿ ಜೀವನಕ್ಕೆ ಸಮಯ ಸರಿಯಾಗಿರುವುದಿಲ್ಲ. ಉದ್ಯೋಗ-ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಪರಿಚಯಸ್ಥರಿಂದ ಮೋಸ ಹೋಗುವ ಸಾಧ್ಯತೆಯೂ ಇದೆ. ಸಂಗಾತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮನಸ್ಸು ಚಂಚಲವಾಗಿರಬಹುದು.ಈ ಸಮಯವನ್ನು ಆರಾಮವಾಗಿ ಕಳೆಯಲು ಪ್ರಯತ್ನಿಸಿ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಸೂರ್ಯಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ನೀವು ಹಠಾತ್ ಲಾಭ ಪಡೆಯಬಹುದು, ಆದರೆ ಕೌಟುಂಬಿಕ ಕಲಹದ ಸಾಧ್ಯತೆ ಇದೆ, ಇದರಿಂದ ಮಾನಸಿಕ ನೋವು ಹೆಚ್ಚುವುದು.



Click it and Unblock the Notifications











