Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಯ್ಯೋ... ಈ ಮುದ್ದು ಆನೆಮರಿ ಆಟ ಎಷ್ಟೊಂದು ಕ್ಯೂಟ್ ನೋಡಿ
ಬೆಳಗ್ಗೆಯಿಂದ ಕೆಲಸ-ಕೆಲಸ ಅಂತ ಸುಸ್ತಾಗಿದ್ದಾರೆ ಈ ಕ್ಯೂಟ್ ವೀಡಿಯೋ ನಿಮ್ಮ ಸುಸ್ತೆಲ್ಲಾ ನಿವಾರಿಸಿ ಮುಖದಲ್ಲಿ ನಗು ಅರಳುವಂತೆ ಮಾಡುವುದಂತು ಗ್ಯಾರಂಟಿ. ಅಷ್ಟೊಂದು ಕ್ಯೂಟ್ ಆಗಿದೆ ಪುಟಾಣಿ ಆನೆಮರಿಯ ಈ ವೀಡಿಯೋ. ಈ ವೀಡಿಯೋ ನೋಡುತ್ತಿದ್ದರೆ ಕೆಲಸದ ಒತ್ತಡ, ಮಾನಸಿಕ ಒತ್ತಡ ಎಲ್ಲಾ ಮಾಯವಾಗಿ ಒಂದು ಕ್ಷಣ ರಿಲ್ಯಾಕ್ಸ್ ಆಗುವಿರಿ. ಈ ವೀಡಿಯೊವನ್ನು ರಾಜಕಾರಣಿ ಪರಿಮಾಳ್ ನಥ್‌ವಾಣಿ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು ವೀಡಿಯೋ ವೈರಲ್ ಆಗಿದೆ.

ಆಟ ಆಡುವ ಮೂಡ್‌ನಲ್ಲಿರುವ ಮುದ್ದು ಆನೆಮರಿ ಅಲ್ಲೇ ಪೇಂಟಿಂಗ್ ಕೆಲಸದಲ್ಲಿ ಮಗ್ನವಾಗಿರುವ ವ್ಯಕ್ತಿಯನ್ನು ಕೀಟಲೆ ಮಾಡಲಾರಂಭಿಸುತ್ತದೆ. ಆ ವ್ಯಕ್ತಿ ಅದರ ಜೊತೆ ಆಡಲು ನಿಲ್ಲದೆ ತನ್ನ ಕೆಲಸ ಮುಂದುವರೆಸಿದಾಗ ಅಲ್ಲಿ ಹಾಕಿರುವ ಅಡ್ಡ ಕಂಬಗಳ ಹೊರಗೆ ಕಾಲು ಹಾಕಿ ಆತನನ್ನು ಸೊಂಡಲಿನಲ್ಲಿ ತನ್ನ ಪಕ್ಕ ಕರೆಯುತ್ತಾ ಆಟ ಆಡುತ್ತಿರುವ ದೃಶ್ಯ ನೋಡುತ್ತಿದ್ದರೆ ಮನಸ್ಸಿಗೆ ತುಂಬಾ ಮನ ರಂಜನೆ ಸಿಗುವುದು.
ಮನುಷ್ಯ ಹಾಗೂ ಪ್ರಾಣಿಗಳ ಬಾಂಧವ್ಯ ಈ ವೀಡಿಯೋದಲ್ಲಿ ಕಾಣಬಹುದಾಗಿದೆ. ಇದೊಂದು ಅದ್ಭುತವಾದ ವೀಡಿಯೋ ಆಗಿದ್ದು ನೋಡಗರ ಕಣ್ಣು ಹಾಗೂ ಮನಸ್ಸಿಗೆ ಮುದ ನೀಡುವುದು ಎಂದು ಟ್ವಿಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮನಸ್ಸನ್ನು ಉಲ್ಲಾಸಗೊಳಿಸುವ ಈ ವೀಡಿಯೋ ಫೆಬ್ರವರಿ 26ಕ್ಕೆ ಅಪ್ಲೋಡ್ ಮಾಡಿದ್ದು, ಇದೀಗ ಈ ವೀಡಿಯೋವನ್ನು ನೆಟ್ಟಗರು ತುಂಬಾ ಮೆಚ್ಚಿಕೊಂಡಿದ್ದು, ವೀಡಿಯೋ ವೈರಲ್ ಆಗಿದೆ.



Click it and Unblock the Notifications
