Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಕಳ್ಳನ ರೀತಿ ಬಂದು ಚಪ್ಪಲಿ ತಗೊಂಡು ಓಡಿದ ಹಾವು: ನಕ್ಕು-ನಕ್ಕು ಹೊಟ್ಟೆ ಹುಣ್ಣಾಗಿಸುವ ವೀಡಿಯೋ
ಕೆಲವೊಮ್ಮೆ ಇಂಟರ್‌ನೆಟ್‌ನಲ್ಲಿ ಹರಿದಾಡುವ ವೀಡಿಯೋಗಳು ಸಿಕ್ಕಾಪಟ್ಟೆ ಫನ್ನಿಯಾಗಿದ್ದು ವೈರಲ್ ಆಗುತ್ತವೆ. ಅಂಥದ್ದೇ ಒಂದು ವೀಡಿಯೋವನ್ನು ಪ್ರವೀಣ್ ಕಶ್ವಾನ್ ಎಂಬ ಐಎಫ್‌ಎಸ್ ಆಫೀಸರ್ ಶೇರ್ ಮಾಡಿದ್ದು ಈ ವೀಡಿಯೋ ವೈರಲ್ ಆಗಿದೆ. ಇಂಥ ದೃಶ್ಯ ಬಹುಶಃ ನೀವು ನೋಡಿರಲಿಕ್ಕೆ ಸಾಧ್ಯನೇ ಇಲ್ಲ.

ಈ ವೀಡಿಯೋದಲ್ಲಿ ಹಾವು ಚಪ್ಪಲಿ ತೆಗೆದುಕೊಂಡು ಹೋಗುವುದನ್ನು ನೋಡಬಹುದು. ಹಾವೊಂದು ಅಂಗಳಕ್ಕೆ ಬರುತ್ತದೆ. ಅಲ್ಲಿಗೆ ಬಂದ ಹಾವು ಅಲ್ಲಿ ಬಿದ್ದಿದ್ದ ಹವಾಯಿ ಚಪ್ಪಲಿ ಕಚ್ಚಲಾರಂಭಿಸುತ್ತದೆ. ಅಂಗಳಕ್ಕೆ ಹಾವು ಬಂದಿರುವುದನ್ನು ನೋಡಿ ಬೊಬ್ಬೆ ಹಾಕುವುದು ಸ್ವಾಭಾವಿಕ. ಅದರಂತೆ ಜನ ಬೊಬ್ಬೆ ಹಾಕುತ್ತಾರೆ, ಹಾವು ಆ ಹವಾಯಿ ಚಪ್ಪಲಿ ತೆಗೆದುಕೊಂಡು ಓಡಿ ಹೋಗುತ್ತೆ. ಹಾವು ಹೋಯ್ತು, ಚಪ್ಪಲಿ ಹೋಯ್ತು... ಈ ವೀಡಿಯೋ ನೋಡಿದವರು ಬಿದ್ದು ಬಿದ್ದು ನಗುತ್ತಿದ್ದಾರೆ. ಅಷ್ಟಕ್ಕೂ ಆ ಹಾವಿಗೆ ಏಕೆ ಚಪ್ಪಲಿ ಎಂಬುವುದು ದೇವರಿಗೇ ಗೊತ್ತು.
ಇದು ನಾಗಿಣಿ ಆಗಿರಬೇಕು, ಅದರ ನಾಗರಾಜನಿಗಾಗಿ ಚಪ್ಪಲಿ ತೆಗೆದುಕೊಂಡು ಹೋಗಿದೆ ಎಂದು ಒಬ್ಬ ಪ್ರತಿಕ್ರಿಯಿಸಿದರೆ
ಅರೇ, ಆ ಹಾವು ನೋಡಿ ಎಷ್ಟೊಂದು ಚುರುಕಾಗಿ ಚಪ್ಪಲಿ ತೆಗೆದುಕೊಂಡು ಹೋಯ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ನನಗೆ ಅನಿಸುತ್ತೆ ಯಾರೋ ಚಪ್ಪಲಿಯಲ್ಲಿ ಹಾವಿಗೆ ಹೊಡೆದಿರಬೇಕು, ಅದಕ್ಕೆ ಚಪ್ಪಿಲಿ ತಗೊಂಡು ಹೋಗಿರಬಹುದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈ ವೀಡಿಯೋ ನೋಡಿದವರು ತಮ್ಮದೇ ಫನ್ನಿ ಹೇಳಿಕೆ ಮೂಲಕ ಪ್ರತಿಕ್ರಿಯಿಸುತ್ತಿದ್ದು ಹಾವು ಮಾಡಿದ ಕಾರ್ಯ ನೋಡಿ ನಗುತ್ತಿದ್ದಾರೆ.
ಇಂಥ ಕೆಲ ವಿಚಿತ್ರ ವೀಡಿಯೋಗಳು ಮನುಷ್ಯನ ಮುಖದಲ್ಲಿ ನಗು ತರಿಸುತ್ತಿರುವುದರಲ್ಲಿ ನೋ ಡೌಟ್, ಆದ್ದರಂದಲೇ ಜನ ಇಂಥ ವೀಡಿಯೋ ನೋಡಲು ಇಷ್ಟಪಡುತ್ತಾರೆ, ಈ ವೀಡಿಯೋ ನೋಡಿ ನಿಮಗೇನಿಸಿತ್ತು ಕಮೆಂಟ್ ಮಾಡಿ....



Click it and Unblock the Notifications

