Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಾವ್! ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೀಗೊಂದು ರೆಸ್ಟೋರೆಂಟ್
ಕೋವಿಡ್ 19 ಬಂದಾಗಿನಿಂದ ಜಗತ್ತಿನ ಚಿತ್ರಣವೇ ಬದಲಾಗಿದೆ. ಮಾಡರ್ನ್ ಲೈಫ್‌ಸ್ಟೈಲ್ ಮರೆತು ಹೋಗೊ ಎಷ್ಟೋ ವರ್ಷಗಳು ಹಿಂದಕ್ಕೆ ಚಲಿಸಿದ್ದೇವೆ. ಮಾಲ್, ಪಬ್, ರೆಸ್ಟೋರೆಂಟ್ ಅಂತ ವೀಕೆಂಡ್ ಮಸ್ತಿಗಳಿಲ್ಲ. ಮನೆಯಾಯಿತು, ತಾವಾಯಿತು, ಜಗತ್ತು ಅಂದ್ರೆ ಮನೆ ಎಮಬಂತಾಗಿದೆ.

ಹೊರಗೆ ಹೋಗದಂತೆ ಲಾಕ್‌ಡೌನ್ ನಿಯಮಗಳು, ನಿಯಮಗಳು ಸ್ವಲ್ಪ ಸಡಲಿಕೆಯಾದರೂ ಹೊರಗೆ ಹೋದಾಗ ಎಲ್ಲಿ ನಮಗೆ ಕೊರೊನಾವೈರಸ್ ಅಂಟಿಕೊಳ್ಳುತ್ತದೆಯೋ ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಇನ್ನು ಮೊದಲಿನಂತೆ ರೆಸ್ಟೋರೆಂಟ್ ಸವಿಯನ್ನು ಸವಿಯಲು ಸಾಧ್ಯವೇ, ಸಾಧ್ಯವಾಗುವುದಾದರೆ ಇನ್ನು ಎಷ್ಟು ಸಮಯ ಬೇಕು ಎಂದು ಆಹಾರ ಪ್ರಿಯರಿಗೆ ಅನಿಸಲಾರಂಭಿಸಿದೆ.
ಇನ್ನು ರೆಸ್ಟೋರೆಂಟ್‌ಗಳಂತೂ ಗ್ರಾಹಕರಿಗೆ ಸುರಕ್ಷತೆಯ ಜೊತೆಗೆ ಸವಿರುಚಿ ಬಡಿಸುವುದು ಹೇಗೆ ಎಂಬ ಚಿಂತನೆ ನಡೆಸುತ್ತಿದೆ. ಹೀಗಿರುವಾಗ ನೆದರ್‌ಲ್ಯಾಂಡ್‌ನ ಆಮ್‌ಸ್ಟರ್‌ಡ್ಯಾಮ್‌ನ ರೆಸ್ಟೋರೆಂಟ್‌ವೊಂದು ಹೊಸ ಐಡಿಯಾ ಮಾಡಿದೆ. ಈ ಹೋಟೆಲ್‌ಗೆ ಕೋವಿಡ್-19 ಬರುತ್ತದೆ ಎಂಬ ಯಾವುದೇ ಭಯವಿಲ್ಲದೆ ಹೋಗಿ ಸವಿಯಬಹುದಂತೆ. ಹಾಗಾದರೆ ಆ ಹೋಟೆಲ್‌ನ ವಿಶೇಷತೆಗಳೇನು ಎಂದು ನೋಡೋಣ ಬನ್ನಿ:

ಭವಿಷ್ಯದ ಹೋಟೆಲ್ ಹೀಗಾಗಬಹುದಾ?
ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಗ್ರಾಹಕರನ್ನೂ ಸೆಳೆಯಬೇಕು ಎಂದು ಯೋಚಿಸುತ್ತಿದ್ದ ನೆದರ್‌ಲ್ಯಾಂಡ್‌ನ ಮೀಡಿಯಾಮೇಟಿಕ್ ಈಟೆನ್ ಎಂಬ ರೆಸ್ಟೋರೆಂಟ್ ಅದ್ಭುತವಾದ ಐಡಿಯಾ ಮಾಡಿದೆ. ಪ್ರತ್ಯೇಕ ಕ್ವಾರೆಂಟೈನ್ ಗ್ರೀನ್ ಹೌಸಸ್ ಮಾಡಿ ಗ್ರಾಹರಿಗೆ ಆಹಾರ ನೀಡುತ್ತಿದೆ.
ಸದ್ಯಕ್ಕೆ ಇದೀಗ ಟ್ರಯಲ್‌ನಲ್ಲಿದೆ. ಹೋಟೆಲ್‌ನ ಉದ್ಯೋಗಿಗಳು, ಕುಟುಂಬಸ್ಥರಿಗೆ ಈ ಹೋಟೆಲ್ ಸರ್ವ್ ಮಾಡುತ್ತಿದೆ. ಇದರ ವಿನ್ಯಾಸವನ್ನು ಇನ್ನೂ ಸ್ವಲ್ಪ ಮಾಡಲಿದ್ದು ಅದು ಮುಗಿದ ಮೇಲೆ ಗ್ರಾಹರಿಕೆ ಬರಲು ಅವಕಾಶ ನೀಡಲು ಕಂಪನಿ ಚಿಂತನೆ ಮಾಡಿದೆ.

ಕೋವಿಡ್ 19 ಭಯ ಪಡೆಯದೆ ಆಹಾರ ಸವಿಯಬಹುದು
ಇಲ್ಲಿಗೆ ಕುಟುಂಬಸ್ಥರ ಜೊತೆ ಪ್ರತ್ಯೇಕ ಹೋಗಿ ಕೂರಬಹುದು ಹಾಗೂ ಗ್ಲಾಸ್‌ನಿಂದ ಮಾಡಿರುವುದರಿಂದ ಯಾರೂ ಕೆಮ್ಮಿದರೂ, ಸೀನಿದರೂ ಈ ಕೋಣೆಯಲ್ಲಿ ಕೂತು ತಿಂದರೆ ಅವರು ಸುರಕ್ಷಿತ. ಇನ್ನು ಮುಂದೆ ಇಂತಹ ಸಾಕಷ್ಟು ಹೋಟೆಲ್‌ಗಳು ಬರುವುದರಲ್ಲಿ ನೋ ಡೌಟ್.

ಹೋಟೆಲ್ ಉದ್ಯಮದಲ್ಲಿ ಹೊಸ ಟ್ರಯಲ್
ಇದೊಂದು ನಾನ್‌ವೆಜ್ ಹೋಟೆಲ್ ಆಗಿದ್ದು, ಸದ್ಯಕ್ಕೆ ಇಲ್ಲಿ ವೆಜ್ ಆಹಾರಗಳನ್ನು ನೀಡಲಾಗುತ್ತಿದೆ. ಅದರಲ್ಲೂ ನಾಲ್ಕು ಬಗೆಯ ಆಹಾರಗಳಷ್ಟೇ ಸಿಗುತ್ತಿವೆ. ಹೋಟೆಲ್ ವಿನ್ಯಾಸ ಪೂರ್ಣಗೊಂಡ ಮೇಲೆ ರುಚಿಕರವಾದ ಮೆನುವಿನೊಂದಿಗೆ ಈ ಹೋಟೆಲ್ ಗ್ರಾಹರಕನ್ನು ಸ್ವಾಗತಿಸಲಿದೆ.

ಭಾರತದಲ್ಲಿಯೂ ಕಾಣಬಹುದೇ ಇಂಥ ರೆಸ್ಟೋರೆಂಟ್?
ಇದೀಗ ಭಾರತದಲ್ಲಿಯೂ ಮೆಲ್ಲ-ಮೆಲ್ಲನೆ ಲಾಕ್‌ಡೌನ್ ಸಡಲಿಕೆ ಆಗುತ್ತಿದೆ. ಆದರೆ ಕೇಸ್‌ಗಳು ಅಧಿಕವಾಗುತ್ತಿದೆ. ಇದು ನಿಜಕ್ಕೂ ಆತಂಕದ ಸಂಗತಿ. ಮುಂದೆ ಈ ರೀತಿಯ ಆತಂಕ ಎಷ್ಟು ದಿನ ಇರುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಈ ಪಿಡುಗಿನಿಂದ ಪಾರಾಗಲು ಇನ್ನುನ ಔಷಧಿಯೂ ಸಿಕ್ಕಿಲ್ಲ, ಮಹಾಮಾರಿ ಕಡಿಮೆಯೂ ಆಗುತ್ತಿಲ್ಲ. ವೈರಸ್‌ನೊಂದಿಗೆ ಜೀವಿಸುವ ಸ್ಕಿಲ್ ಕಲಿಯಬೇಕಾಗಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಂಥ ಹೋಟೆಲ್‌ಗಳು ಸಾಕಷ್ಟು ಹುಟ್ಟಿಕೊಳ್ಳುವುದು ಗ್ಯಾರಂಟಿ, ನಾವು ಏನೇ ಮಾಡಿದರು ಅದರಲ್ಲಿ ಮೊದಲೇ ಪ್ರಾಮುಖ್ಯತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬುವುದಾಗಿದೆ ಅಲ್ವಾ?



Click it and Unblock the Notifications
