Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪಾಪ! ಐಸ್‌ಕ್ರೀಂಗೆ ಆಸೆಪಟ್ಟು ಪೋಸ್ಟರ್ ನೆಕ್ಕಿದ ನಾಯಿ: ವೀಡಿಯೋ ಸಿಕ್ಕಾಪಟ್ಟೆ ವೈರಲ್
ಇಂಟರ್‌ನೆಟ್‌ನಲ್ಲಿ ನಾಯಿ ಐಸ್‌ಕ್ರೀಮ್ ಪೋಸ್ಟರ್ ನೆಕ್ಕುತ್ತಿರುವ ವೀಡಿಯೋವೊಂದು ಸಕತ್ ವೈರಲ್ ಆಗಿದೆ. ಆ ವೀಡಿಯೋ ನೋಡಿದವರು ಕೆಲವರು ಸಕತ್ ಫನ್ನಿಯಾಗಿದೆ ಎಂದರೆ ಇನ್ನು ಕೆಲವರು ಅಯ್ಯೋ ಪಾಪ... ಅದಕ್ಕೆ ಆಸೆಯಾಗಿದೆ, ಐಸ್‌ಕ್ರೀಂ ಕೊಡಿಸ್ರಿಪ್ಪಾ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.

ಕೆಲವೊಂದು ಫುಡ್ ಪೋಸ್ಟರ್‌ಗಳನ್ನು ನೋಡಿ ನಾವು ರೆಸ್ಟೋರೆಂಟ್‌ಗೆ ಕಾಲಿಡುತ್ತೇವೆ, ಏಕೆಂದರೆ ಆ ಕಲರ್‌ಫುಲ್ ಪೋಸ್ಟರ್ ನಮ್ಮನ್ನೇ ಅಷ್ಟೊಂದು ಮೋಡಿ ಮಾಡುತ್ತೆ ಎಂದ ಮೇಲೆ ಪಾಪ ನಾಯಿಯನ್ನು ಕೇಳಬೇಕೆ? ಇಲ್ಲಿ ಕೂಡ ಅಷ್ಟೇ ಪೋಸ್ಟರ್ ನೋಡಿ ನಾಯಿ ಯಾಮಾರಿದೆ, ಐಸ್‌ಕ್ರೀಂ ಪೋಸ್ಟರ್ ಅನ್ನು ಐಸ್‌ಕ್ರೀಂ ಎಂದು ನೆಕ್ಕಲಾರಂಭಿಸಿದೆ.
ನಾಯಿ ಐಸ್‌ಕ್ರೀಮ್ ಪೋಸ್ಟರ್ ನೆಕ್ಕುತ್ತಿರುವ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಕತ್ ವೈರಲ್ ಆಗಿದೆ. ಆ ವೀಡಿಯೋ ನೋಡಿದವರು ಕೆಲವರು ಸಕತ್ ಫನ್ನಿಯಾಗಿದೆ ಎಂದರೆ ಇನ್ನು ಕೆಲವರು ಅಯ್ಯೋ ಪಾಪ... ಅದಕ್ಕೆ ಆಸೆಯಾಗಿದೆ, ಐಸ್‌ಕ್ರೀಂ ಕೊಡಿಸ್ರಿಪ್ಪಾ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಅದು ಬೀದಿ ನಾಯಿಯಲ್ಲ, ಸಾಕು ನಾಯಿಯೆಂಬುವುದು ಅದರ ಕುತ್ತಿಗೆಯಲ್ಲಿರುವ ಬೆಲ್ಟ್ ಹಾಗೂ ಹಗ್ಗ ನೋಡುವಾಗ ತಿಳಿಯುತ್ತೆ, ಅದರ ಮಾಲೀಕ ಅದನ್ನು ವಾಕ್‌ಗೆ ಕರೆದುಕೊಂಡು ಬಂದಿರಬಹುದು. ಆಗ ಆ ನಾಯಿ ಕಣ್ಣಿಗೆ ಐಸ್‌ಕ್ರೀಮ್ ಪೋಸ್ಟರ್ ಕಾಣುತ್ತೆ.
ಐಸ್‌ಕ್ರೀಂ ರುಚಿ ಅದಕ್ಕೆ ಗೊತ್ತಿರಬಹುದು, ಹಾಗಾಗಿಯೇ ಪೋಸ್ಟರ್ ನೋಡುವಾಗ ಪಾಪ ಆಸೆ ಆಗಿ ಬಿಟ್ಟಿದೆ, ಪೋಸ್ಟರ್ ಅನ್ನೇ ಐಸ್‌ಕ್ರೀಮ್ ಎಂದು ನೆಕ್ಕಲಾರಂಭಿಸುತ್ತದೆ.
ಈ ವೀಡಿಯೋ ವೀಕ್ಷಕರಿಗೆ ಸಕತ್ ಮಜಾ ನೀಡಿದೆ. ಪ್ರಾಣಿಗಳು ಸ್ಟ್ರೆಸ್ ಬಸ್ಟರ್ ಅಂತಾರೆ, ಹೌದು ಅವುಗಳು ಮಕ್ಕಳಂತೆ ತುಂಬ ಮುದ್ದು-ಮುದ್ದಾಗಿ ಆಡುತ್ತವೆ. ಈ ವೀಡಿಯೋ ನೋಡಿ ನಿಮಗೆ ಏನು ಅನಿಸಿತ್ತು?



Click it and Unblock the Notifications

