Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯ ಸೀಮಂತದ ಕ್ಯೂಟ್ ಫೋಟೋಗಳು
ಸ್ಯಾಂಡಲ್‌ವುಡ್‌ನ ಕ್ಯೂಟ್ ಸೆಲೆಬ್ರಿಟಿ ಕಪಲ್ ಆಗಿರುವ ನಿಖಿಲ್ ಕುಮಾರಸ್ವಾಮಿ, ರೇವತಿ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚೆಲುವಿನ ರಾಣಿಯಾದ ರೇವತಿ ಗರ್ಭಿಣಿಯಾದ ಮೇಕೆ ಮೈಕೈ ತುಂಬಿ ಮತ್ತಷ್ಟು ಮುದ್ದಾಗಿ ಕಾಣ್ತಾ ಇದ್ದಾರೆ. ರೇವತಿಯವರಿಗೆ ನೆನ್ನೆ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮಾನ್ವಿ ಕನ್ವೆಕ್ಷನ್ ಹಾಲ್‌ನಲ್ಲಿ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.
ಸೀಮಂತ ಸಮಯದಲ್ಲಿ ಅಪ್ಪ-ಅಮ್ಮನ ಪಟ್ಟಕ್ಕೇರಿದ ನಿಖಿಲ್ ಕುಮಾರಸ್ವಾಮಿ -ರೇವತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಗಳನ್ನು ನೋಡಿದವರು ಈ ಮುದ್ದಾದ ಜೋಡಿಗೆ ಮುದ್ದಾದ ಮಗು ಮಡಿಲು ತುಂಬಲಿ ಎಂದು ಹಾರೈಸುತ್ತಿದ್ದಾರೆ.
ಸೀಮಂತ ಸಮಯದಲ್ಲಿ ತುಂಬು ಬಸುರಿ ರೇವತಿ ಕ್ಯಾಮರಾ ಕಣ್ಣಿಗೆ ಕಂಡದ್ದು ಹೀಗೆ...

ನಾವು -ನಮ್ಮ ಮಗು
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್-ರೇವತಿ. ಅಪ್ಪ-ಅಮ್ಮನಾಗುವ ಸಂಭ್ರಮವನ್ನು ಸ್ವಾಗತಿಸಿದ್ದು ಹೀಗೆ.

ಸೀಮಂತ ಕಳೆ
ಸೀಮಂತ ಕಳೆ ಈ ಬ್ಯಾಕ್‌ಗ್ರೌಂಡ್‌ನಲ್ಲಿ ತುಂಬಾ ಶ್ರೀಮಂತವಾಗಿ ಕಂಡಿದೆ... ಕೃಷ್ಣ-ರಾಧೆಯರ ಫೋಟೋವಂತೂ ತುಂಬಾ ಗಮನ ಸೆಳೆದಿದೆ.

ಸಾಂಪ್ರದಾಯಿಕ ಲುಕ್‌ನಲ್ಲಿ ರೇವತಿ-ನಿಖಿಲ್
ಪ್ಯೂರ್ ವೈಟ್ ಅಲ್ಲ, ಈ ಕಡೆ ಬೂದು ಅಲ್ಲದ ಸ್ವಲ್ಪ ಗೋಲ್ಡನ್ ಮಿಶ್ರವಾಗಿರುವ ಕೆಂಪು-ಕೇಸರಿ ಮಿಶ್ರಿತ ಬಾರ್ಡರ್ ಸೀರೆಗೆ ಗೋಲ್ಡನ್ ವರ್ಕ್ ಬ್ಲೌಸ್ ತೊಟ್ಟು ಸಾಂಪ್ರದಾಯಿಕವಾಗಿ ಅಲಂಕಾರ ಮಾಡಿಕೊಂಡ ಗರ್ಭಿಣಿ ಕಳೆಯಲ್ಲಿ ಮಿಂಚುತ್ತಿರುವ ರೇವತಿ. ಪ್ಯೂರ್ ವೈಟ್ ಅಂಡ್ ವೈಟ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನಿಖಿಲ್ ಕುಮಾರಸ್ವಾಮಿ.

ಸೀಮಂತಕ್ಕೂ ಮುನ್ನ ಫೋಟೋಶೂಟ್
ಸೀಮಂತಕ್ಕೂ ಮುನ್ನ ಗಣೇಶ ಹಬ್ಬದ ಸಮಯದಲ್ಲಿ ತೆಗೆದ ಫೋಟೋ...

ಹೊಸ ಅತಿಥಿಯ ಆಗಮನದ ನಿರೀಕ್ಷೆ-
ಮನೆಯಲ್ಲಿ ಹೆಚ್ಚಿದ ಸಂಭ್ರಮನಿಖಿಲ್-ರೇವತಿಗೆ ಮಗು ಜನಿಸಲಿದೆ ಎಂಬ ಸುದ್ದಿ ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಸಂಭ್ರಮ ಹೆಚ್ಚಿಸಿದೆ.



Click it and Unblock the Notifications
