Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಕೊರೊನಾವೈರಸ್ ತಡೆಗೆ ಬಾಯ್‌ಫ್ರೆಂಡ್ ವೀರ್ಯವೇ ಈಕೆಗೆ ಔಷಧಿ
ಕೊರೊನಾವೈರಸ್ ಬಂದಾಗಿನಿಂದ ಜನರು ಅದನ್ನು ಬರದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಹೆಚ್ಚಿನವರು ಇದೀಗ ತಮ್ಮ ಹಿಂದಿನ ಅನಾರೋಗ್ಯಕರ ಲೈಫ್‌ಸ್ಟೈಲ್‌ಗೆ ಗುಡ್‌ಬೈ ಹೇಳಿ ಆರೋಗ್ಯಕರ ಆಹಾರ ಸೇವಿಸುತ್ತಿದ್ದಾರೆ.

ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ, ಜ್ಯೂಸ್‌ಗಳನ್ನು ಬಳಸುವುದು, ಗಿಡ ಮೂಲಿಕೆಗಳನ್ನು ಹಾಕಿ ಕಷಾಯ ಮಾಡಿ ಕುಡಿಯುವುದು ಹೀಗೆ ತಮ್ಮ ಆಹಾರಕ್ರಮವನ್ನೇ ಬದಲಾಯಿಸಿಕೊಂಡಿದ್ದಾರೆ.
ಆದರೆ ಇಲ್ಲೊಬ್ಬಾಕೆ ತಾನು ಕೊರೊನಾವೈರಸ್ ತಡೆಗೆ ಏನು ಮಾಡುತ್ತಿದ್ದೇನೆ ಎಂದು ಹೇಳಿದ್ದು ಅದನ್ನು ಕೇಳಿದರೆ ನಿಮಗೆ ವಾಕರಿಗೆ ಬರಬಹುದು. ಕೊರೊನಾವೈರಸ್ ತಡೆಗಟ್ಟಲು ತನ್ನ ಬಾಯ್‌ಫ್ರೆಂಡ್‌ನ ವೀರ್ಯಾವನ್ನು ಔಷಧಿಯಾಗಿ ಬಳಸುತ್ತಿದ್ದಾಳಂತೆ ಈ ಮಹಿಳೆ.

ರೋಗ ನಿರೋಧ ಶಕ್ತಿ ಹೆಚ್ಚಿಸಲು ವೀರ್ಯ ಬಳಸುವ ಮಹಿಳೆ
ಈಕೆಯ ಹೆಸರು ಟ್ರೇಸಿ ಕಿಸ್, 32 ವರ್ಷದ ಈಕೆಗೆ ಮೂರು ವರ್ಷಗಳಿಂದ ಒಂದು ಚಿಕ್ಕ ನೆಗಡಿ ಕೂಡ ಬಂದಿಲ್ವಂತೆ. ಅದಕ್ಕೆ ಕಾರಣ ಬಾಯ್‌ಫ್ರೆಂಡ್‌ನ ವೀರ್ಯವನ್ನು ದಾನವಾಗಿ ಪಡೆದು ಅದರಿಂದ ಸ್ಮೂತಿ ಮಾಡಿ ಕುಡಿಯುತ್ತಿರುವುದು ಎಂದು ಆಕೆಯೇ ಹೇಳಿದ್ದಾಳೆ.
ಆಕೆ ವೇಗನ್ ಡಯಟ್ ಫಾಲೋ ಮಾಡುತ್ತಿದ್ದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಾಯ್‌ಫ್ರೆಂಡ್‌ನ ವೀರ್ಯವನ್ನು ಆಹಾರದಲ್ಲಿ ಸೇವಿಸುತ್ತಿದ್ದಾರೆ. ' ರೋಗ ನಿರೋಧಕ ಔಷಧಿಗಳಲ್ಲಿ ರಾಸಾಯನಿಗಳಿರುತ್ತವೆ, ಅದರ ಬದಲಿಗೆ ರಾಸಾಯನಿಕ ಮುಕ್ತ ಪಾನೀಯ ಸೇವನೆ ಒಳ್ಳೆಯದು' ಎನ್ನುತ್ತಾರೆ ಟ್ರೇಸಿ ಕ್ರಿಸ್.
ಎರಡು ಮಕ್ಕಳ ತಾಯಿಯಾಗಿರುವ ಟ್ರೇಸಿ ಕಿಸ್‌ನ ಎರಡನೇ ಮಗು ತುಂಬಾ ಚಿಕ್ಕದಾಗಿದ್ದು ಅದಕ್ಕೆ ಹಾಲುಣಿಸುತ್ತಿದ್ದಾರೆ. ಎದೆ ಹಾಲುಣಿಸುವ ತಾಯಿ ಪೋಷಕಾಂಶವಿರುವ ಆಹಾರ ಸೇವಿಸಬೇಕು. ಹಾಗಾಗಿ ಈ ಸ್ಮೂತಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ವೀರ್ಯದಿಂದ ಸ್ಮೂತಿ
'ಇದು ಎಲ್ಲರೂ ಬಳಸುವುದಿಲ್ಲ, ಆದರೆ ಈ ಸ್ಮೂತಿಯಲ್ಲಿ ವಿಟಮಿನ್ಸ್ ತುಂಬಿವೆ. 2017ರಿಂದ ಇದನ್ನು ಬಳಸುತ್ತಿದ್ದೇನೆ. ಇದುವರೆಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಿಲ್ಲ, ಅಲ್ಲದೆ ಸೌಂದರ್ಯ ವೃದ್ಧಿಗಾಗಿ ಇದನ್ನು ಮುಖಕ್ಕೆ ಹಚ್ಚುತ್ತೇನೆ' ಎನ್ನುತ್ತಾರೆ ಕಿಸ್.
ಆದರೆ ಕಿಸ್ ನೀಡಿದ ಈ ಸಲಹೆ ಇನ್ನೂ ವಿಶ್ ಆರೋಗ್ಯ ಸಂಸ್ಥೆ ಪರಿಶೀಲನೆ ನಡೆಸಿಲ್ಲ. ಕೊರೊನಾವೈರಸ್ ತಡೆಗಟ್ಟಲು ಆಗಾಗ ಕೈ ತೊಳೆಯಿರಿ, ಸ್ಯಾನಿಟೈಸರ್ ಬಳಸಿ, ಜನರಿಂದ ಅಂತರ ಕಾಯ್ದುಕೊಳ್ಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವೀರ್ಯ ಸಂಗ್ರಹಿಸಿ ಬಳಸುವ ಟ್ರೇಸಿ
ಟ್ರೇಸಿ ಹೇಳುವ ಪ್ರಕಾರ ತನ್ನ ಬಾಯ್‌ಫ್ರೆಂಡ್‌ನ ವೀರ್ಯ ಸಂಗ್ರಹಿಸಿ ಐಸ್‌ಕ್ಯೂಬ್ ಟ್ರೇಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡುತ್ತಾರೆ. ನಂತರ ಅದನ್ನು ಬಾಳೆ ಹಣ್ಣು ಅಥವಾ ಇತರ ಹಣ್ಣುಗಳ ಜೊತೆ ಮಿಶ್ರ ಮಾಡಿ ಸ್ಮೂತಿ ಮಾಡಿ ಕುಡಿಯುತ್ತಾರಂತೆ. ಈ ರೀತಿ ವಾರದಲ್ಲಿ 3 ಬಾರಿ ಬಳಸುತ್ತಾರೆ.
' ನಾನು ಆರೋಗ್ಯಕ್ಕೆ ತುಂಬಾ ಗಮನ ಕೊಡುತ್ತೇನೆ. ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೊಸ ವಿಧಾನ ಅನುಸರಿಸುವುದು ಒಳ್ಳೆಯದು. ರೋಗ ಲಕ್ಷಣ ಕಂಡು ಬಂದ ಮೇಲೆ ಔಷಧಿ ಮಾಡುವುದಕ್ಕಿಂತ ಅದಕ್ಕಿಂತ ಮೊದಲೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.
ಬಾಯ್‌ಫ್ರೆಂಡ್ ಇಲ್ಲ ಎನ್ನುವವರು ನಿಮ್ಮ ಆರೋಗ್ಯವಂತ ಸ್ನೇಹಿತರ ಬಳಿ ಕೇಳಿ ಇದನ್ನು ಬಳಸಬಹುದು ಎನ್ನುತ್ತಾರೆ ಟ್ರೇಸಿ.

ಸೌಂದರ್ಯ ವೃದ್ಧಿಯಲ್ಲೂ ವೀರ್ಯ ಬಳಕೆ
ವೀರ್ಯವನ್ನು ಕೆಲವರು ಸೌಂದರ್ಯ ವೃದ್ಧಿಗೆ ಫೇಶಿಯಲ್‌ನಲ್ಲಿ ಬಳಸುತ್ತಾರೆ. ಆದರೆ ವೀರ್ಯದಿಂದ ಸ್ಮೂತಿ ಮಾಡಿ ಕುಡಿಯುವುದನ್ನು ಇದೇ ಮೊದಲ ಬಾರಿಗೆ ಈ ಮಹಿಳೆ ಹೇಳಿದ್ದಾರೆ. ವೀರ್ಯ ಪಡೆಯುವ ವ್ಯಕ್ತಿ ಆರೋಗ್ಯವಂತರಲ್ಲದಿದ್ದರೆ ಅವರ ಕಾಯಿಲೆಯೂ ಹರಡುವ ಸಾಧ್ಯತೆ ಇದೆ.
ಟ್ರೇಸಿ ಕಿಸ್ ನೀಡಿದ ಸಲಹೆ ಬಳಸುವುದು ಅವರವರ ಮನಸ್ಥಿತಿಗೆ ಬಿಟ್ಟದ್ದು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.



Click it and Unblock the Notifications