Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಿನ್ನಿ ಮೌಸ್ ಮಹಿಳೆಯ ಫೈಟ್ ವೀಡಿಯೋ ವೈರಲ್
ಡಿಸ್ನಿಯ ಜನಪ್ರಿಯ ಪಾತ್ರ ಮಿನ್ನಿ ಮೌಸ್ ರೀತಿ ವೇಷ ಧರಿಸಿದ ಮಹಿಳೆ ಸೆಕ್ಯೂರಿಟಿ ಮಹಿಳೆಯನ್ನು ಎಳೆದು ಹೊಡೆಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ವೀಡಿಯೋ ಹತ್ತು ಸಾವಿರಕ್ಕೂ ಅಧಿಕ ರೀಟ್ವೀಟ್ ಆಗಿದ್ದು ನೆಟ್ಟಿಗರು ಮನಸ್ಸಿಗೆ ತೋಚಿದ್ದು ಕಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ. ಈ ಮಿನ್ನಿ ಮೌಸ್ ಪಾತ್ರದ ಮಹಿಳೆ, ಸೆಕ್ಯೂರಿಟಿ ಮಹಿಳೆಗೆ ಹೊಡೆಯಲು ಕಾರಣವೇನೆಂದು ಗೊತ್ತಿಲ್ಲ, ಆದರೆ ಈ ವೀಡಿಯೋ ನೋಡಿದವರು ಕಾರಣವಿಲ್ಲದೆ ಹೊಡೆಯಲ್ಲ, ಬಹುಶಃ ಕೆಲಸದಿಂದ ತೆಗೆದು ಹಾಕಿರಬಹುದು ಎಂದೆಲ್ಲಾ ಫನ್ನಿ ಕಮೆಂಟ್ ಮಾಡುತ್ತಿದ್ದಾರೆ.

38 ಸೆಕೆಂಡ್‌ನ ಈ ವೀಡಿಯೋ 5 ಮಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ಬಿಳಿ ಮಹಿಳೆಯ ಕೂದಲನ್ನು ಎಳೆದು ಜಗ್ಗುತ್ತಾ ಹೊಡೆಯುತ್ತಿರುವ ಮಿನ್ನಿ ಮೌಸ್ ಪಾತ್ರದ ಮಹಿಳೆ, ಮಿಕಿ ಮೌಸ್ ಹಾಗೂ ಗೂಫಿ ಪಾತ್ರದ ಪುರುಷರು ಮಿನ್ನಿ ಮೌಸ್‌ನ ಸಮಧಾನ ಮಾಡಲು ಪ್ರಯತ್ನಿಸಿದರೂ, ಮಿನ್ನಿ ಮೌಸ್ ಕೋಪ ಎಷ್ಟಿತ್ತು ಎಂದರೆ ಆ ಸೆಕ್ಯೂರಿಟಿ ಮಹಿಳೆಯನ್ನು ಬೀಳಿಸಿ, ಅವಳ ಮೈ ಮೇಲೆ ಕುಳಿತು ಹೊಡೆಯುತ್ತಾಳೆ. ವೀಡಿಯೋದ ಕೊನೆಯಲ್ಲಿ ಮಿಕಿ ಹಾಗೂ ಗೂಫಿ ಜೊತೆ ಹೋಗುತ್ತಿರುವ ಮಿನ್ನಿ ಮೌಸ್ ಕಾಣುತ್ತದೆ.
ವೀಡಿಯೋ ನೋಡಿದವರು ಮಿನ್ನಿ ಮೌಸ್ ಮಾಡಿದ್ದೇ ಸರಿ ಎಂಬಂತೆ ಆಕೆ ಪರ ನಿಲ್ಲುತ್ತಿದ್ದಾರೆ. ಯಾರದು ಸರಿ, ಯಾರದು ತಪ್ಪು ಎನ್ನುವುದು ದೇವರಿಗೇ ಗೊತ್ತು....



Click it and Unblock the Notifications
