Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಮೊಸಳೆಯನ್ನು ಮದುವೆಯಾದ ಮೆಕ್ಸಿಕೋ ಮೇಯರ್: ವಿಚಿತ್ರ ಘಟನೆಯ ಫೋಟೋಗಳು ವೈರಲ್
ಚಿತ್ರ-ವಿಚಿತ್ರವಾದ ಎಷ್ಟೋ ಪದ್ಧತಿಗಳು ಈ ಪ್ರಪಂಚದಲ್ಲಿವೆ, ಅವೆಲ್ಲಾ ಕೇಳುವಾಗ ವಿಚಿತ್ರ ಅನಿಸಿದರೂ ಅದನ್ನು ಪಾಲಿಸುವವರೂ ಇದ್ದಾರೆ. ಅಂಥದ್ದೇ ಒಂದು ಸಂಗತಿ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಮೊಸಳೆ ಕಂಡರೆ ನಾವೆಲ್ಲಾ ಜೀವ ಭಯದಿಂದ ದೂರ ಓಡುತ್ತೇವೆ, ಅದೇ ಮೊಸಳೆಯನ್ನು ಮದುವೆಯಾಗುವುದು ಎಂದರೆ... ನಮ್ಮಲ್ಲಿ ಕತ್ತೆ ಜೊತೆ ಮದುವೆ, ಬಾಳೆ ಗಿಡದ ಜೊತೆ ಮದುವೆ ಎಂಬೆಲ್ಲಾ ಕೆಲ ಆಚರಣೆಗಳಿವೆ, ಅದರಂತೆ ಮೆಕ್ಸಿಕೋದಲ್ಲಿ ಮೊಸಳೆ ಜೊತೆ ಮದುವೆಯಾಗುವ ಸಂಪ್ರದಾಯವಿದೆಯಂತೆ, ಅಲ್ಲಿಯ ಮೇಯರ್‌ರೊಬ್ಬರು ಮೊಸಲೆ ಜೊತೆ ಮದುವೆಯಾಗಿರುವ ಫೋಟೋಗಳು ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ.
ಮೊಸಳೆ ಜೊತೆ ಮದುವೆ ಏಕೆ? ಈ ಆಚರಣೆಯ ಹಿಂದಿರುವ ಉದ್ದೇಶವೇನು ಎಂಬೆಲ್ಲಾ ಅಂಶಗಳನ್ನು ನೋಡೋಣ ಬನ್ನಿ:

ಮದುಮಗಳಂತೆ ಅಲಂಕರಿಸಿಕೊಂಡು ಮೊಸಳೆಯನ್ನು ಮದುವೆಯಾದ ಮೇಯರ್
ಮೇಯರ್ ಅಲ್ಲಿ ಮೀನು ಹಿಡಿಯುವವರು ಅಧಿಕವಿರುವ ಚಿಕ್ಕ ಹಳ್ಳಿಯಿಂದ ಬಂದವರಾಗಿದ್ದು ಅಲ್ಲಿಯ ಸಂಪ್ರದಾಯದಂತೆ ಮೊಸಳೆಯನ್ನು ಮದುವೆಯಾಗಿದ್ದು ಅದಕ್ಕೆ ಮುತ್ತಿಟ್ಟಿದ್ದಾರೆ, ಈಗ ಆ ಫೋಟೋಗಳು, ವೀಡಿಯೋಗಳು ನೆಟ್ಟಿಗರ ಗಮನ ಸೆಳೆದಿದೆ.

ಪ್ರಕೃತ್ತಿಯನ್ನು ಆರಾಧಿಸಿ ಮಾಡುವ ಸಂಪ್ರದಾಯ
ಉತ್ತಮ ಮಳೆ-ಬೆಳೆಗಾಗಿ ಪ್ರಕೃತಿ ಮಾತೆಯನ್ನು ಪೂಜಿಸುವ ಸಂಪ್ರದಾಯ ಹಲವು ಕಡೆ. ನಮ್ಮಲ್ಲಿಯೂ ಪ್ರಕೃತಿಗೆ ವಿವಧ ರೀತಿಯಲ್ಲಿ ಪೂಜೆ ಸಲ್ಲಿಸುತ್ತೇವೆ. ಅದೇ ರೀತಿ ಮೆಕ್ಸಿಕೋದಲ್ಲಿ ಒಳ್ಳೆಯ ಮಳೆ-ಬೆಳೆಗಾಗಿ ಪ್ರಕೃತಿಯನ್ನು ಒಂದು ಸಮುದಾಯವರು ಈ ರೀತಿ ಪೂಜಿಸುವ ಸಂಪ್ರದಾಯವಿದೆ. ಸಾಕಷ್ಟು ಮಳೆ ಕೊಡು ದೇವರೇ, ಸಾಕಷ್ಟು ಆಹಾರ ಉತ್ಪಾದನೆಯಾಗಲಿ, ಏಕೆಂದರೆ ಮೀನುಗಳು ನದಿಯಲ್ಲಿವೆ, ನದಿಗಳು ತುಂಬಿ ಹರಿಯುವಂತಾಗಲಿ ಎಂದು ಅಲ್ಲಿ ಮೀನುಗಾರರು ಪ್ರಕೃತಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಮೊಸಳೆ ಜೊತೆ ಮದುವೆಯಾಗುವುದು ಕೂಡ ಅದೇ ಸಂಪ್ರದಾಯದ ಭಾಗವಾಗಿದೆ.

ಮೊಸಳೆ ಜೊತೆ ಮದುವೆಯಾಗುವುದು ಏಕೆ?
7 ವರ್ಷ ಪ್ರಾಯದ ಮೊಸಳೆಗೆ ನವವಧುವಿನಂತೆ ಅಲಂಕರಿಸಿ ಅದಕ್ಕೆ ಕಲರ್‌ಫುಲ್ ಆಭರಣಗಳನ್ನು ತೊಡಿಸಲಾಗಿದೆ. ಮೊಸಳೆ ಭೂ ತಾಯಿಯ ಸ್ವರೂಪ ಎಂದು ಭಾವಿಸಲಾಗಿದೆ, ಅದರ ಜೊತೆ ಮನುಷ್ಯನ ಮದುವೆ ಮಾಡಿದರೆ ಮನುಷ್ಯ ದೇವರ ಜೊತೆ ಸೇರಿದಂತಾಗುವುದು, ಇದರಿಂದಾಗಿ ಪ್ರಕೃತಿ ಒಳ್ಲೆಯ ಮಳೆ, ಬೆಳೆ, ಆಹಾರ ನೀಡುತ್ತಾಳೆ ಎಂದು ನಂಬಲಾಗಿದೆ.
ಎಲ್ಲಾ ಕಡೆಯೂ ಚಿತ್ರ-ವಿಚಿತ್ರವಾದ ಆಚರಣೆಗಳಿವೆ, ಅದು ವಿಚಿತ್ರ ಅನಿಸಿದರೂ ಅದರ ಹಿಂದೆ ಒಂದು ಬಲವಾದ ನಂಬಿಕೆ ಇರುತ್ತದೆ, ಅದರಿಂದಾಗಿ ಹಿಂದಿನಿಂದಲೂ ಪಾಲಿಸುತ್ತಾ ಬರಲಾಗುವುದು. ಅಂದ್ಹಾಗೆ ನೀವು ನೋಡಿರುವ ವಿಚಿತ್ರವಾದ ಸಂಪ್ರದಾಯವೇನು, ಕಮೆಂಟ್ ಮಾಡಿ....



Click it and Unblock the Notifications
