Latest Updates
-
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ!
'ಮದುವೆಯಾಗಲು ಸಾಫ್ಟ್‌ವೇರ್ ಎಂಜಿನಿಯರ್ ಹುಡುಗ ಬೇಡ' ಎಂಬ ಮ್ಯಾಟ್ರಿಮೋನಿ ಜಾಹೀರಾತು ಸಿಕ್ಕಾಪಟ್ಟೆ ವೈರಲ್
ಮದುವೆಗೆ ವರಬೇಕು, ವಧುಬೇಕು ಎಂದು ಕೆಲವರು ನ್ಯೂಸ್ ಪೇಪರ್‌ನಲ್ಲಿ ಜಾಹೀರಾತು ನೀಡುತ್ತಾರೆ. ಹೀಗೆ ಜಾಹೀರಾತು ನೀಡುವವರು ಇಷ್ಟು ವರ್ಷದವರು ಬೇಕು, ಇಂಥ ಪದವಿಯಲ್ಲಿದ್ದರೆ ಒಳ್ಳೆಯದು ಎಂದೆಲ್ಲಾ ತಮ್ಮ ನಿರೀಕ್ಷೆಯ ಬಾಳಸಂಗಾತಿಗೆ ಬಗ್ಗೆ ಹೇಳಿರುತ್ತಾರೆ, ಆ ಪ್ರೊಫೈಲ್‌ಗೆ ಮ್ಯಾಚ್ ಆದವರು ಅವರನ್ನು ಸಂಪರ್ಕಿಸುತ್ತಾರೆ. ಆದರೆ ಇತ್ತೀಚೆಗೆ ಪೇಪರ್‌ನಲ್ಲಿ ನೀಡಲಾಗಿದ್ದ ವರಬೇಕೆಂಬ ಜಾಹೀರಾತು ಸಿಕ್ಕಾಪಟ್ಟೇ ವೈರಲ್ ಆಗಿದೆ.

ಅಷ್ಟಕ್ಕೂ ಆ ಜಾಹೀರಾತು ಇಂಟರ್‌ನೆಟ್‌ನಲ್ಲಿ ವೈರಲ್ ಆಗಲು ಕಾರಣ ಸಾಫ್ಟ್‌ವೇರ್ ಎಂಜಿನಿಯರ್ ಹುಡುಗ ಎಂದು ಹೇಳಿರುವುದು. ಇದೀಗ ಟ್ವಿಟರ್‌ನಲ್ಲಿ ಆ ಜಾಹೀರಾತಿನ ಫೋಟೋ ವೈರಲ್ ಆಗುತ್ತಿದ್ದು ಟೆಕ್ಕಿಗಳಂತೂ ಆ ಜಾಹೀರಾತಿಗೆ ತಮ್ಮದೇ ಶೈಲಿನಲ್ಲಿ ಉತ್ತರಿಸುತ್ತಿದ್ದಾರೆ.
ಆ ಜಾಹೀರಾತು ಪ್ರಕಾರ ಹುಡುಗ ಐಎಎಸ್/ಐಪಿಎಸ್ ಅಥವಾ ಪಿಜಿ ಮಾಡಿರುವ ಡಾಕ್ಟರ್ ಅಥವಾ ಉದ್ಯಮಿಯಾಗಿರಬೇಕು ಎಂದಿದೆ. ಅದರ ಕೆಳಗಡೆ ಸಾಫ್ಟ್‌ವೇರ್ ಎಂಜಿನಿಯರ್‌ಗಳೇ ದಯವಿಟ್ಟು ಕರೆ ಮಾಡಬೇಡಿ ("Software engineers kindly do not call") ಎಂಬುವುದಾಗಿ ಬರೆಯಲಾಗಿದೆ.
ಈ ಫೋಟೋ ಶೇರ್ ಮಾಡಿರುವ ವ್ಯಕ್ತಿ ಇನ್ಮುಂದೆ ಐಟಿಯವರು ಭವಿಷ್ಯ ಏಕೋ ಅಷ್ಟು ಸರಿ ಕಾಣುತ್ತಿಲ್ಲ ಎಂಬುವುದಾಗಿ ಜೋಕ್ ಮಾಡಿದ್ದಾರೆ.
ಇದಕ್ಕೆ ಅನೇಕ ಜನರು ಪ್ರತಿಕ್ರಿಯಿಸಿದ್ದು 'ಏನೂ ಚಿಂತೆಯಿಲ್ಲ, ಎಂಜಿನಿಯರ್‌ಗಳು ನ್ಯೂಸ್‌ಪೇಪರ್ ಜಾಹೀರಾತು ನೋಡಿಕೊಂಡೇನು ಇಲ್ಲ, ಅವರಿಗೆ ಬೇಕಗಿದ್ದು ಪಡೆಯಲು ಗೊತ್ತಿದೆ' ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎಲ್ಲವನ್ನು ಆನ್ಲೈನ್‌ನಲ್ಲಿ ಸರ್ಚ್ ಮಾಡುತ್ತಾರೆ,ಆದ್ದರಿಂದ ಈ ಜಾಹೀರಾತು ನೀಡಿವರು ಚಿಂತೆ ಮಾಡಬೇಕಾಗಿಲ್ಲ, ಅವರು ನ್ಯೂಸ್‌ಪೇಪರ್ ಜಾಹೀರಾತು ನೋಡುವುದೇ ಇಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸದ್ದಾರೆ.
ಹೀಗೆ ಈ ವಿಚಿತ್ರವಾದ ಜಾಹೀರಾತಿಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು ಸಾಫ್ಟ್‌ವೇರ್ ಬೇಡ ಎನ್ನುವ ಜಾಹೀರಾತು ಅಂತೂ ವೈರಲ್ ಆಗಿದೆ... ಅಂದ ಹಾಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು, ಕಮೆಂಟ್ ಮಾಡಿ.



Click it and Unblock the Notifications

