Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
19 ಸೆ. ಮೀ ಉದ್ದದ ಮೂಗಿನ ವ್ಯಕ್ತಿ: ಈತನ ಕತೆ ಆಗಿದೆ ವೈರಲ್, ಯಾರೀತ?
ನೀವು ಟ್ವಿಟರ್ ಬಳಕೆದಾರರಾಗಿದ್ದರೆ ಉದ್ದ ಮೂಗಿನ ವ್ಯಕ್ತಿ ತುಂಬಾ ವೈರಲ್ ಆಗಿರುವುದು ಗಮನಕ್ಕೆ ಬಂದಿರಬಹುದು. ಮನುಷ್ಯರಿಗೆ ಇಷ್ಟುದ್ದದ ಮೂಗು ಇರುವುದೇ? ಎಂದು ಅಚ್ಚರಿಪಡುವಷ್ಟಿದೆ ಆ ಮೂಗು.
ಇದೀಗ ಆ ವ್ಯಕ್ತಿಯ ಬಗ್ಗ ಮತ್ತಷ್ಟು ಮಾಹಿತಿಯನ್ನು Historic Vids ಪೋಸ್ಟ್ ಮಾಡಿದ್ದು ಉದ್ದ ಮೂಗಿನ ವ್ಯಕ್ತಿ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಉದ್ಧ ಮೂಗಿನ ವ್ಯಕ್ತಿ ಬಗ್ಗೆ ತಿಳಿದು ಜನ ಮತ್ತಷ್ಟು ಥ್ರಿಲ್ ಆಗುತ್ತಿದ್ದಾರೆ. ಇವರಾರು? ಈಗ ಬದುಕಿದ್ದಾರೆಯೇ ಎಂಬ ಮಾಹಿತಿ ತಿಳಿಯೋಣ ಬನ್ನಿ.

ಈ ಉದ್ದ ಮೂಗಿನ ವ್ಯಕ್ತಿ ಈಗ ಬದುಕಿಲ್ಲ, ಆದರೆ 18ನೇ ಶತಮಾನದಲ್ಲಿ ಇಂಥ ಒಬ್ಬ ವ್ಯಕ್ತಿ ಇದ್ದರು. ಅವರ ಹೆಸರು ಮಿ. ವೆಡ್ಡರ್ಸ್. ಅವರ ಮೂಗು 7.5 ಉದ್ದವಿದ್ದು, ಈ ವ್ಯಕ್ತಿ ಬರೀ ಮೂಗಿನಿಂದ ಮಾತ್ರ ತನ್ನ ಪ್ರತಿಭೆಯಿಂದಲೂ ಗಮನ ಸೆಳೆಯುತ್ತಿದ್ದರು, ಏಕೆಂದರೆ ಇವರು ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಇವರು ಟ್ರಾವೆಲಿಂಗ್ ಫ್ರೀಕ್ ಸರ್ಕಸ್‌ನ ಮೆಂಬರ್ ಆಗಿದ್ದರು. ಇವರ ಬಗ್ಗೆ ಗಿನ್ನೀಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಒಂದು ಪೇಜ್ ಕೂಡ ಇದೆ. ಅದರಲ್ಲಿ ವಿಶ್ವದಲ್ಲಿಯ ಅತೀ ಉದ್ದದ ಮೂಗು ಹೊಂದಿದ್ದ ವ್ಯಕ್ತಿ ಎಂದು ಹೇಳಲಾಗಿದೆ. ಇವರ ಮೂಗು 19ಸೆ. ಮೀ ಇತ್ತು ಎಂದು ಆ ಟ್ವೀಟ್‌ನಲ್ಲಿ ಹೇಳಲಾಗಿದೆ.
ಆ ಟ್ವೀಟ್ ನನ್ನು 1. 20 ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.
ಇತಿಹಾಸದ ಪುಟಗಳಲ್ಲಿಯೂ ಈ ವ್ಯಕ್ತಿಯ ಬಗ್ಗೆ ಹೇಳಲಾಗಿದೆ ಅಂತೆ. ಥಾಮಸ್ ವೆಡ್ಡರ್ಸ್ 1770ರಲ್ಲಿ ಇಂಗ್ಲೆಂಟ್‌ನಲ್ಲಿ ವಾಸಿಸುತ್ತಿದ್ದರು, ಅವರು ಮೂಗು 19 ಸೆ. ಮೀ ಉದ್ದವಿತ್ತು ಎಂಬೆಲ್ಲಾ ಮಾಹಿತಿ ಇದೆಯಂತೆ.
ಈಗ ಅತ್ಯಂತ ಉದ್ದದ ಮೂಗು ಹೊಂದಿರುವ ವ್ಯಕ್ತಿಯೆಂದರೆ ಟರ್ಕಿಯಲ್ಲಿರುವ ಮೆಹಮತ್ ಒಝೆಯರ್ಕ್, ಈತನ ಮೂಗು 3.46 ಉದ್ದ ಹೊಂದಿದೆ.
ನೀಳ ಮೂಗಿನವರ ವ್ಯಕ್ತಿತ್ವ ಆಕರ್ಷಕ ಅಂತಾರೆ, ಆದರೆ ಇಷ್ಟುದ್ದದ ಮೂಗು ಹೊಂದಿದ್ದರೆ ಅಟ್ರಾಕ್ಷನ್ ಆಫ್ ಮಾಸ್, ನೀವೇನು ಅಂತೀರಿ?



Click it and Unblock the Notifications
