Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸತ್ತಂತೆ ನಟಿಸಿ ಹುಲಿ ಬಾಯಿಂದ ಬಚಾವ್ ಆದ!: ವೀಡಿಯೋ ವೈರಲ್
ಹುಲಿಯೊಂದು ತಕ್ಷಣ ಎದುರಾದರೆ ಭಯದಿಂದ ಪ್ರಾಣವೇ ಹೋಗುತ್ತದೆ, ಆ ಕ್ಷಣ ಏನು ಮಾಡಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ಓಡುವುದಂತು ಗ್ಯಾರಂಟಿ. ಆದರೆ ಇಲ್ಲೊಬ್ಬ ಸತ್ತಂತೆ ನಟಿಸಿ ಹುಲಿ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದಾನೆ. ಮೈನವಿರೇಳಿಸುವ ಈ ವೀಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಹುಲಿ ದಾಳಿಯಿಂದ ರಕ್ಷಿಸಲು ಅಂತಹ ಸಂದರ್ಭದಲ್ಲಿ ಆತ ಆ ರೀತಿ ಬುದ್ಧಿ ಉಪಯೋಗಿಸಿದ್ದಕ್ಕೆ ಮೆಚ್ಚಲೇಬೇಕು. ಹುಲಿಯೊಂದು ಬಾಯಿ ತೆರೆದು ತನ್ನ ಮುಂದೆ ಕೂತಿದ್ದಾಗ ಉಸಿರನ್ನು ಬಿಗಿ ಹಿಡಿದು ಜೀವ ಇಲ್ಲದಂತೆ ನಟಿಸಿದ. ಹುಲಿ ಆತನ ಮುಂದೆ ಸ್ವಲ್ಪ ಕೂತು ನಂತರ ಜನರು ತನ್ನತ್ತ ಬರುವುದನ್ನು ನೋಡಿ ಅಲ್ಲಿಂದ ಓಟಕಿತ್ತಿದೆ, ಹಾಗಾಗಿ ಈ ಅದೃಷ್ಟವಂತ ಹುಲಿ ಬಾಯಿಂದ ಪಾರಾಗಿದ್ದಾನೆ.
ಜನರ ಗುಂಪನ್ನು ನೋಡಿ ಭಯಗೊಂಡ ಹುಲಿ ಗದ್ದೆ ಕಡೆ ಓಡಿ ಬಂತು, ಆ ಹುಲಿಗೆ ಎದುರಾಗಿದ್ದೇ ಈ ವ್ಯಕ್ತಿ. ಹುಲಿಯನ್ನು ನೋಡಿದ ತಕ್ಷಣ ಆತನ ತಕ್ಷಣವೇ ನೆಲದಲ್ಲಿ ಸತ್ತಂತೆ ಮಲಗಿದ, ಆತನ ಬಳಿ ಕೂತು ಇನ್ನೇನು ಆತನ ಮೇಲೆ ದಾಳಿಮಾಡಬೇಕೆಂದಿದ್ದ ಹುಲಿ ಆತ ಸತ್ತನೆಂದು ತಿಳಿದು ಏನು ಮಾಡದೆ ಅಲ್ಲಿಂದ ಓಡಿ ಹೋಗಿದೆ. ಒಂದು ವೇಳೆ ಆತ ಮಿಸುಕಾಡಿದರೂ ಹುಲಿ ಆತನನ್ನು ಪರಚಿ ಚಿಂದಿ ಮಾಡುವ ಸಾಧ್ಯತೆ ಇತ್ತು.
ಮೈ ನವಿರೇಳಿಸುವ ಈ ಘಟನೆ ಮಹಾರಾಷ್ಟ್ರದ ಭಾಂದ್ರಾ ಜಿಲ್ಲೆಯಲ್ಲಿ ನಡೆದಿದೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.



Click it and Unblock the Notifications
