Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮುಳ್ಳುಹಂದಿ-ಚಿರತೆಯ ರೋಚಕ ಫೈಟ್-ವೀಡಿಯೋ ವೈರಲ್
ಚಿರತೆ ಹಾಗೂ ಮುಳ್ಳುಹಂದಿ ಎದುರುಬದರಾದಾಗ ಕಿತ್ತಾಡಿಕೊಂಡ ವೀಡಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡುತ್ತಿದ್ದರೆ ರೋಮ ನಿಮಿರೇಳುವುದು, ಅಷ್ಟೊಂದು ರೋಚಕವಾಗಿದೆ. ಇದನ್ನು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪರ್ವೀನ್ ಕಶ್ವಾನ್ ಟ್ವಿಟರ್ ಹಂಚಿಕೊಂಡಿದ್ದಾರೆ.
ಚಿರತೆಗೆ ಭೇಟೆಯ ಚಿಂತೆಯಾದರೆ ಮುಳ್ಳುಹಂದಿಗೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ. ಚಿರತೆ ತನ್ನ ಮೇಲೆ ಆಕ್ರಮಣಕ್ಕೆ ಮುಂದಾದಾಗ ತನ್ನ ಮುಳ್ಳುಗಳನ್ನು ನಿಮರಿಸಿ ಚಿರತೆಗೆ ಸರಿಯಾದ ಪಾಠವನ್ನೇ ಕಲಿಸಿದೆ.

ಹೌದು, ಮುಳ್ಳುಹಂದಿಯನ್ನು ಕಚ್ಚಲು ಬಂದ ಚಿರತೆಯ ಬಾಯಿಗೆ ಅದರ ಮುಳ್ಳು ಸಿಕ್ಕಿಕೊಂಡು ತೆಗೆಯಲು ಸಾಧ್ಯವಾಗದೆ ಒದ್ದಾಡಲು ಪ್ರಾರಂಭಿಸುತ್ತದೆ. ಮುಳ್ಳುಹಂದಿ ಅಲ್ಲಿಂದ ಓಡಿ ಹೋಗದೆ ಬಾ... ನಿನಗೆ ಪಾಠ ಕಲಿಸುತ್ತೇನೆ ಎಂಬಂತೆ ನಿಂತಿರುತ್ತದೆ. ಮುಳ್ಳು ಚುಚ್ಚಿಕೊಂಡು ನೋವು ಅನುಭವಿಸಿದ ಚಿರತೆ ಮಾತ್ರ ಅಯ್ಯೋ... ನಿನ್ನ ಸಹವಾಸವೇ ಬೇಡ ಎಂಬಂತೆ ಕಾಡಿಗೆ ಮರುಳಿದರೆ, ಗೆದ್ದ ಸಂತೋಷದಲ್ಲಿ ಹೋಗುತ್ತಿರುವ ಮುಳ್ಳುಹಂದಿಯನ್ನು ಇಲ್ಲಿ ನೋಡಬಹುದು.
ತನ್ನ ಎದುರಾಳಿ ಎಷ್ಟೇ ಬಲಿಷ್ಠವಾಗಿದ್ದರೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ತಂತ್ರ ಪ್ರತಿಯೊಂದು ಪ್ರಾಣಿಯಲ್ಲಿ ಇರುತ್ತದೆ ಎಂದು ಈ ವೀಡಿಯೋ ನೋಡಿದಾಗ ತಿಳಿಯುತ್ತದೆ. ಇದೊಂದು ಹಳೆಯ ವೀಡಿಯೋ ಆಗಿದ್ದರೂ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.



Click it and Unblock the Notifications
