Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕೋಸ್ಕ್: ತಿನ್ನುವಾಗ ಮೂಗಿನ ಮೇಲಷ್ಟೇ ಧರಿಸಲು ಬಂದಿದೆ ಇಂಥದ್ದೊಂದು ಮಾಸ್ಕ್!
ಎರಡು ವರ್ಷಗಳಿಂದ ಮಾಸ್ಕ್ ಎಂಬುವವುದು ತುಂಬಾ ಅವಶ್ಯಕವಾದ ವಸ್ತುಗಳಲ್ಲಿ ಒಂದಾಗಿದೆ. ನಾನಾ ಬಗೆಯ ಮಾಸ್ಕ್ ಬಳಸುತ್ತಾರೆ. ಆದರೆ ಇತ್ತೀಚೆಗೆ ಮೂಗು ಮಾತ್ರ ಮುಚ್ಚುವಂತೆ ಬಳಸುವ ಮಾಸ್ಕ್ ಸಾಮಾಜಿಕ ತಾಣದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ.

ಬರೀ ಮೂಗು ಮಾತ್ರ ಮುಚ್ಚುವಂತಿರುವ ಮಾಸ್ಕ್ ಅನ್ನು 'ಕೋಸ್ಕ್ ಮಾಸ್ಕ್' ಎಂದು ಕರೆಯಲಾಗುತ್ತಿದೆ. ಈ ಮಾಸ್ಕ್‌ನ ವಿಶೇಷತೆಯೆಂದರೆ ಇದನ್ನು ಆಹಾರ ಸೇವಿಸುವಾಗ ಬಳಸಬಹುದಾಗಿದೆ. ಈ ಮಾಸ್ಕ್ ಧರಿಸಿದರೆ ಮೂಗು ಮಾತ್ರ ಮುಚ್ಚಿರುತ್ತದೆ, ಬಾಯಿಯ ಭಾಗವನ್ನು ಮುಚ್ಚಿರದ ಕಾರಣ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸುವಾಗ ಬಳಸಬಹುದಾಗಿದೆ.
ಈ ವಿಚಿತ್ರ ಡಿಸೈನ್ ಮಾಸ್ಕ್ ಅನ್ನು ಅಟ್ಮಾನ್ ಎಂಬ ಸೌತ್ ಕೊರಿಯನ್ ಕಂಪನಿ ತಯಾರಿಸಿದೆ. ಈ ಮಾಸ್ಕ್‌ಗೆ ಕೋಸ್ಕ್ ಎಂಬ ಹೆಸರು ಕೊರಿಯನ್ ಭಾಷೆಯಿಂದ ಬಂದಿದೆ. ಕೋ ಎಂದರೆ ಕೊರಿಯನ್ ಭಾಷೆಯಲ್ಲಿ ಮೂಗು, ಹಾಗಾಗಿ ಇದಕ್ಕೆ ಕೋಸ್ಕ್ ಎಂದು ಕರೆಯಲಾಗಿದೆ ಎಂದು ವಾಶಿಂಗ್‌ಟನ್‌ಪೋಸ್ಟ್ ಹೇಳಿದೆ.
ಈ ಮಾಸ್ಕ್ ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದಕ್ಕೆ KF80 ಮಾಸ್ಕ್ ಎಂಬ ಟ್ಯಾಗ್‌ನಲ್ಲಿದೆ. ಈ ಮಾಸ್ಕ್ 0.3 ಮೈಕ್ರೋನ್ಸ್ ರೋಗಾಣುಗಳನ್ನು ತಡೆಗಟ್ಟುವ ಸಾಮಾರ್ಥ್ಯ ಹೊಂದಿದೆಯಂತೆ.
ಈ ಮಾಸ್ಕ್‌ಗೆ ಸಾಮಾಜಿಕ ತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಕೆಲವರಿಗೆ ಈ ಮಾಸ್ಕ್ ತಮಾಷೆಯಾಗಿ ಕಂಡರೆ ಇನ್ನು ಕೆಲವರು ಇಷ್ಟಪಡುತ್ತಿದ್ದಾರೆ.
ಹೋಟೆಲ್‌ಗಳಿಗೆ ಹೋದಾಗ ನಾವೆಲ್ಲಾ ಮಾಸ್ಕ್ ತೆಗೆದು ತಿನ್ನುತ್ತೇವೆ, ಆಗ ಕೊರೊನಾವೈರಸ್ ಹರಡುವ ಆತಂಕ ಇದ್ದೇ ಇರುತ್ತದೆ, ಇಂಥ ಮಾಸ್ಕ್ ಧರಿಸಿದರೆ ಒಳ್ಳೆಯದೇ ಅಲ್ವಾ? ತಿನ್ನುವಾಗ ಸ್ವಲ್ಪ ಹೊತ್ತು ಮಾಸ್ಕ್ ತೆಗೆದು ಕೂರಬಹುದು ಎಂದು ಅಂದುಕೊಳ್ಳುವವರಿಗೆ ಮಾತ್ರ ಈ ಮಾಸ್ಕ್ ಖಂಡಿತ ಹಿಡಿಸಲ್ಲ...



Click it and Unblock the Notifications
