Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಪ್ರಪಂಚದಲ್ಲಿಯೇ ಅಪರೂಪದ ಅವಳಿ ಸಹೋದರಿಯರಿವರು: ಹೈಟ್ ಕಾರಣಕ್ಕೆ ಗಿನ್ನಿಸ್ ರೆಕಾರ್ಡ್!
ಅವಳಿಗಳು ಅಂದರೆ ಮೊದಲು ನಮ್ಮ ತಲೆಯಲ್ಲಿ ಬರೋದು ನೋಡೋದಕ್ಕೆ ಒಂದೇ ರೀತಿ ಇರ್ತಾರೆ. ಮುಖಲಕ್ಷಣ, ಉದ್ದ, ಎಲ್ಲವೂ ಸೇಮ್ ಸೇಮ್. ಅಷ್ಟೇ ಯಾಕೆ ಕೆಲವೊಂದು ಬಾರಿ ನಡವಳಿಕೆಗಳು ಒಂದೇ ರೀತಿ ಇರ್ತಾವೆ. ಆದ್ರೆ ನಾವು ಈಗ ಹೇಳೋ ಅವಳಿಗಳ ಕಥೆ ಅಪರೂಪದಲ್ಲಿ ಅಪರೂಪ.

ಇವರಿಬ್ಬರು ಒಂದೇ ತಾಯಿಯ ಹೊಟ್ಟೆಯಲ್ಲಿ ಒಟ್ಟಾಗಿ ಹುಟ್ಟಿದ್ರು ಕೂಡ ಇವರು ಅವಳುಗಳು ಅಂತ ಅನ್ನಿಸೋದೇ ಇಲ್ಲ. ಅಷ್ಟೊಂದು ವಿಭಿನ್ನವಾಗಿದ್ದಾರೆ ಈ ಅವಳಿ ಸೋದರಿಯರು. ಅಷ್ಟಕ್ಕೂ ಯಾರು ಈ ಅವಳಿ ಸೋದರಿಯರು? ಮತ್ತು ಇವರ ಮಧ್ಯೆ ಇಷ್ಟೊಂದು ಸಾಮ್ಯತೆ ಇರೋದಕ್ಕೆ ಕಾರಣವೇನು ಅನ್ನೋದನ್ನ ಹೇಳ್ತೀವಿ.
ಜಪಾನ್ ದೇಶದಲ್ಲಿದ್ದಾರೆ ಅಪರೂಪದ ಸೋದರಿಯರು
ಜಪಾನ್ ದೇಶದಲ್ಲಿ ವಾಸವಾಗಿರುವ ಈ ಅವಳಿ ಸಹೋದರಿಯರ ಹೆಸರು ಯೋಶಿ ಮತ್ತು ಮೀಚಿ ಕಿಕುಚಿ. ಇವರು ಜಪಾನ್‌ನ ಒಕಯಾಮದಲ್ಲಿ ಸದ್ಯ ವಾಸವಾಗಿದ್ದಾರೆ. ಇವರ ಇಬ್ಬರ ನಡುವಿನ ಉದ್ದದ ಸಾಮ್ಯತೆಯನ್ನು ಗಮನಿಸಿದರೆ ಇವರಿಬ್ಬರು ಅವಳಿಗಳು ಅಂತ ಅನ್ನಿಸೋದೇ ಇಲ್ಲ. ಹೌದು ಇವರಿಬ್ಬರ ನಡುವೆ ಇರುವ ಹೈಟ್ ಡಿಫರೆನ್ಸ್ ಬರೋಬ್ಬರಿ 75 ಸೆಂ. ಮೀಟರ್.
ಗಿನ್ನಿಸ್ ವಲ್ಡ್ ರೆಕಾರ್ಡ್‌ಗೆ ಸೇರಿದ ಅವಳಿ ಸೋದರಿಯರು
ಹೌದು, ಇಬರಿಬ್ಬರ ನಡುವಿನ ಉದ್ದದ ಸಾಮ್ಯತೆಯನ್ನು ನೋಡಿ ವೈದ್ಯಕೀಯ ಲೋಕವೇ ಅಚ್ಚರಿಪಟ್ಟಿದೆ. 33 ವರ್ಷದ ಈ ಅವಳಿಗಳ ಮುಖ ಲಕ್ಷಣ ಹಾಗೂ ಅವರ ನಡುವಿನ ಉದ್ದ ಒಂದಕ್ಕೊಂದು ಹೋಲಿಕೆಯೇ ಇಲ್ಲ. ಯೋಶಿ 162.5 ಸೆಂಟಿ ಮೀಟರ್ ಉದ್ದವಿದ್ದರೆ, ಮೀಚಿ 87.5 ಸೆಂಟಿ ಮೀಟರ್ ಉದ್ದವಿದ್ದಾಳೆ. ಇಬ್ಬರ ನಡುವೆ 75 ಸೆಂಟಿ ಮೀಟರ್ ಉದ್ದ ಸಾಮ್ಯಾತೆ ಇರಲು ಹೇಗೆ ಸಾಧ್ಯ ಎಂಬುವುದೇ ಅಚ್ಚರಿಗೆ ಕಾರಣವಾಗಿದೆ.
ಇತ್ತೀಚಿಗಷ್ಟೇ ಗಿನ್ನಿಸ್ ವಲ್ಡ್ ರೆಕಾರ್ಡ್ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿತ್ತು. 15 ಅಕ್ಟೋಬರ್ 1989 ಈ ಇಬ್ಬರು ಜನಿಸಿದ್ದು, ಬೆನ್ನುಮೂಳೆಯ ವಿಶೇಷ ಕಾಯಿಲೆಯಿಂದ ಮಿಚಿ ಎಂಬಾಕೆಯ ಬೆಳವಣಿಗೆ ಕುಂಟಿತಗೊಂಡಿದೆ ಎಂದು ಹೇಳಲಾಗಿದೆ.
ಜಗತ್ತಿನಲ್ಲಿ ಒಂದೇ ರೀತಿಯ ಜನಗಳು ಇರೋದಿಲ್ಲ. ಮೈಕಟ್ಟಿನಿಂದ ಹಿಡಿದು ಮುಖಲಕ್ಷಣದವರೆಗೂ ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಪ್ರಪಂಚದಲ್ಲಿ ನಡೆಯುವ ಅದೆಷ್ಟೋ ವಿಚಾರಗಳು ಈಗಲೂ ನಮ್ಮನ್ನು ಚಕಿತಗೊಳ್ಳುವಂತೆ ಮಾಡುತ್ತದೆ. ಅದೂ ಒಂದೇ ತಾಯಿಯ ಹೊಟ್ಟೆಯಲ್ಲಿ, ಒಟ್ಟಿಗೆ ಹುಟ್ಟಿದ ಮಕ್ಕಳಲ್ಲಿ ಇಷ್ಟೊಂದು ಸಾಮ್ಯತೆ ಇರುವುದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.



Click it and Unblock the Notifications
