Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮಾರ್ಚ್ 8ರಂದು ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಮಹಿಳೆಯರ ದಿನಕ್ಕೆ ಬಿಎಂಟಿಸಿ ಕೊಡುಗೆ
ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನ. ಹೆಣ್ಣು ಎಂಬುವುದು ಬರೀ ಒಂದು ವ್ಯಕ್ತಿಯಲ್ಲ, ಅವಳು ಶಕ್ತಿ. ಮಾರ್ಚ್ 8 ಅವಳ ದಿನ, ಈ ದಿನ ವಿಶೇಷವಾಗಿ ನಮ್ಮ ಬಿಎಂಟಿಸಿ ವಿಶೇಷ ಕೊಡುಗೆಯೊಂದಿಗೆ ಬಂದಿದೆ. ಹೌದು ಸ್ನೇಹಿತಿಯರೇ ನೀವು ಮಾರ್ಚ್ 8ಕ್ಕೆ ಬೆಂಗಳೂರಿನ ಬಿಎಂಟಿಸಿಯಲ್ಲಿ ಓಡಾಡುವುದಾದರೆ ಯಾವುದೇ ಹಣ ಪಾವತಿಸದೆ ಓಡಾಡಬಹುದು, ಹೌದು ನಿಮಗಾಗಿ ಫ್ರೀ ಬಸ್ ಟಿಕೆಟ್ ಅನ್ನು ಬಿಎಂಟಿಸಿ ನೀಡಿದೆ.

ಎಂಥ ಖುಷಿಯ ವಿಚಾರವಲ್ಲ, ಫ್ರೀ ಟಿಕೆಟ್ ಕೊಡುತ್ತಿರುವುದಕ್ಕೆ ಖುಷಿಯ ವಿಚಾರವಲ್ಲ, ಮಹಿಳೆಯರ ದಿನಕ್ಕೆ ಬಿಎಂಟಿಸಿ ಅವಳನ್ನು ಗೌರವಿಸಿ ಇಂಥದ್ದೊಂದು ಕೊಡುಗೆ ನೀಡುತ್ತಿದೆಯೆಲ್ಲಾ ಅದು ಖುಷಿಯ ವಿಚಾರ. ನಾಳೆ ನೀವು ಬಿಎಂಟಿಸಿ ಪ್ರಯಾಣಿಸುವಾಗ ವಾವ್! ಈ ದಿನ ನನ್ನ ದು ಎಂಬ ಸ್ಪೆಷಲ್ ಮೂಡುವುದಂತೂ ಖಂಡಿತ.
ಮಹಿಳೆಯರ ದಿನದ ವಿಶೇಷತೆ
ಮಹಿಳೆಯರ ದಿನವನ್ನು ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆಯುವಂತೆ ಉತ್ತೇಜಿಸಲು ಈ ದಿನ ಆಚರಿಸಲಾಗುವುದು. ಇಂದಿಗೂ ಲಿಂಗತಾರತಮ್ಯ ಕಡಿಮೆಯಾಗಿಲ್ಲ. ಎಷ್ಟೋ ಕುಂಟಬಗಳಲ್ಲಿ ಗಂಡು ಮಗು ಹುಟ್ಟಿದಾಗ ಸಂಭ್ರಮಿಸುತ್ತಾರೆ, ಅದೇ ಹೆಣ್ಣು ಮಗು ಹುಟ್ಟಿದರೆ ಆ ಮಗುವನ್ನು ತುಂಬಾ ಕೀಳಾಗಿ ಕಾಣುವ ಅನಿಷ್ಟಮನಸ್ಥಿತಿಗಳು ಇವತ್ತಿಗೂ ಇದೆ.
ಅವಳ ಮೇಲಾಗುತ್ತಿರುವ ಶೋಷಣೆಗೆ ಅಂತ್ಯವೆಂದು?
ಇಂದು ಹೆಣ್ಣು ಗಂಡಿಗಿಂತ ನಾನು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ, ಕುಟುಂಬವನ್ನು ಆರ್ಥಿಕವಾಗಿ ನೆರವು ನೀಡುವ ಮೂಲಕ ಸಂರಕ್ಷಿಸುತ್ತಿದ್ದಾಳೆ, ಆದರೆ ಅವಳ ಮೇಲಾಗುತ್ತಿರುವ ಶೋಷಣೆಗಳು ಕಡಿಮೆಯಾಗುತ್ತಿಲ್ಲ, ಅವಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದಿಂದ ಮುಕ್ತಿ ಸಿಗುತ್ತಿಲ್ಲ. ಎಷ್ಟೋ ಹೆಣ್ಣು ಮಕ್ಕಳು ವರದಕ್ಷಿಣೆಯ ಕಾಟಕ್ಕೆ ಬಲಿಯಾಗುತ್ತಿದ್ದಾರೆ.
ಹೆಣ್ಣು ಆರ್ಥಿಕ ಸ್ವಾವಲಂಬಿಯಾಗಬೇಕು
ಯಾವಾಗ ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲಾ ಬಗೆಯ ಶೋಷಣೆ ಅಂತ್ಯವಾಗುವುದು ಆವಾಗ ಮಹಿಳೆಯರ ದಿನ ಮತ್ತಷ್ಟು ಸಂಭ್ರಮದ ದಿನವಾಗುವುದು. ಮಹಿಳೆ ತನ್ನ ಮೇಲಾಗುತ್ತಿರುವ ಶೋಷಣೆ ತಡೆಯಬೇಕೆಂದರೆ ಅವುಗಳ ವಿರುದ್ಧ ಹೋರಾಡಬೇಕಾಗಿದೆ. ಭಯಪಟ್ಟು ಕೂರುವ ಬದಲಿಗೆ ಶೋಷಣೆಯ ವಿರುದ್ಧ ಜೋರಾಗಿ ಧ್ವನಿ ಎತ್ತಬೇಕಾಗಿದೆ.
ಪೋಷಕರು ಹೆಣ್ಣು-ಗಂಡು ಇಬ್ಬರನ್ನು ಸಮಾನರು ಎಂಬಂತೆ ಬೆಳೆಸಬೇಕಾಗಿದೆ, ಹೆಣ್ಣು ಆರ್ಥಿಕವಾಗಿ ಸ್ವಾವಲಂಬಿಯಾದರೆ ಅವಳ ಬಹುತೇ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದ್ದರಿಂದ ಹೆಣ್ಮಕ್ಕಳೇ ಚಿಕ್ಕ ಕೆಲಸವಾದರೂ ಸರಿ ಆರ್ಥಿಕ ಸ್ವಾವಲಂಬಿಗಳಾಗಿ....
ಸ್ನೇಹಿತೆಯರೇ ಮಹಿಳೆಯರ ದಿನದ ಶುಭಾಶಯಗಳು.....



Click it and Unblock the Notifications

