Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ವೈರಲ್ ಆಗ್ತಿದೆ ಐಸ್‌ಕ್ರೀಮ್ ಸ್ಟಿಕ್‌ನಲ್ಲಿ ಇಡ್ಲಿ ಜೊತೆ ಚಟ್ನಿ, ಸಾಂಬಾರ್
ಆಹಾರದಲ್ಲಿ, ಬಗೆ ಬಗೆಯ ರೆಸಿಪಿಗಳಲ್ಲಿ ವೈವಿಧ್ಯತೆ ಮತ್ತು ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಆದರೆ ಕೆಲವು ಪ್ರಯತ್ನಗಳು ಜನರನ್ನು ಹೆಚ್ಚು ಹಾಗೂ ಬಹುಬೇಗ ಆಕರ್ಷಿಸುತ್ತದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆದ ತಿಂಡಿಯೊಂದರ ಬಗ್ಗೆ ನಿಮಗೆ ಹೇಳಲಿದ್ದೇವೆ.

ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಐಸ್ ಕ್ರೀಮ್ ವಿನ್ಯಾಸದ ಇಡ್ಲಿಯನ್ನು ತಯಾರಿಸಿ ವಿಭಿನ್ನತೆ ತೋರಿದೆ. ಎಂಥವರಿಗೂ ನೋಡಿದಾಕ್ಷಣ ಇದು ಇಡ್ಲಿನಾ ಅಥವಾ ಐಸ್ ಕ್ರೀಮಾ ಎಂದು ಸಂಶಯ ಬಾರದೆ ಇರದು!. ನೀವು ಇದರ ರುಚಿ ನೋಡುವವರೆಗೂ ಇದನ್ನು ಇಡ್ಲಿ ಎಂದು ನೀವು ನಂಬುವುದಕ್ಕೆ ಸಾಧ್ಯವೇ ಇಲ್ಲ.
ಹೌದು, ಗ್ರಾಹರನ್ನು ಸೆಳೆಯುವ ದೃಷ್ಟಿಯಿಂದ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ "ಸೇವರಿ ರೈಸ್ ಕೇಕ್" ರೆಸಿಪಿ ವಿಭಿನ್ನವಾಗಿ ತಯಾರಿಸಿದ್ದಾರೆ. ಚಟ್ನಿ ಹಾಗೂ ಸಾಂಬಾರ್ ಜೊತೆಗೆ ಐಸ್‌ಕ್ರೀಮ್‌ನಂತೆ ಕಾಣುವ ಈ ಇಡ್ಲಿಯನ್ನು ನೋಡಲು ವಿಚಿತ್ರ ಎನಿಸುತ್ತದೆ. ಗ್ರಾಹರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸೇವರಿ ರೈಸ್ ಕೇಕ್ ಭಾರೀ ವೈರಲ್ ಆಗಿದೆ.
ಇದಕ್ಕೆ ಜನರು ತಮ್ಮ ಕಮೆಂಟ್‌ಗಳ ಮೂಲಕ ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆವಿಷ್ಕಾರ ಹಾಗೂ ತಂತ್ರಜ್ಞಾನ ಎರಡರ ಮಿಶ್ರಣ ಈ ಇಡ್ಲಿ. ಬೆಂಗಳೂರು ಸದಾ ಫುಡ್ ಇನ್ನೋವೆಷನ್‌ನಲ್ಲಿ ಬೆಸ್ಟ್ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಬಹುತೇಕರಿಗೆ ಈ ವಿಶಿಷ್ಟ ಪ್ರಯೋಗ ಇಷ್ಟವಾದರೆ, ಕೆಲವರು ಇಡ್ಲಿ ಈಗಲೇ ಚೆನ್ನಾಗಿದೆ, ವಿಭಿನ್ನತೆ ಎಂದು ಹೇಳಿ ಇದನ್ನು ಹಾಳು ಮಾಡಬೇಡಿ ಎಂದು ಸಹ ತಮ್ಮ ಪ್ರತಿಕ್ರಿಯೆ ಹೇಳಿದ್ದಾರೆ.
ಏನೇ ಆದರೂ ಹೊ ಹೊಸ ಪ್ರಯತ್ನಗಳು ಮಾತ್ರ ಸದಾ ನಿರಂತರ. ನೀವು ಮನೆಯಲ್ಲಿ ಮಾಡಿ ನೋಡಿ, ಮಕ್ಕಳಿಗೆ ಖಂಡಿತ ಇಷ್ವವಾಗುತ್ತದೆ. ಸಾಧ್ಯವಾದರೆ ರೆಸ್ಟೋರೆಂಟ್‌ಗೆ ಭೇಟಿ ನೀಡಿ ಈ ವಿಭಿನ್ನ ಇಡ್ಲಿಯನ್ನು ಸವಿಯಿರಿ.



Click it and Unblock the Notifications
