Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೊಟ್ಟೆ ಹಸಿವು ಎಂದು ಯಾವುದೋ ಮದುವೆಗೆ ಊಟಕ್ಕೆ ಹೋದ ಹಾಸ್ಟೆಲ್ ಬಾಯ್: ವೀಡಿಯೋ ಆಯ್ತು ವೈರಲ್
ನೀವು ಅಮೀರ್‌ಖಾನ್, ಮಾಧವನ್, ಶರ್ಮನಾನ್ ಜೋಷಿ ಅಭಿನಯದ ತ್ರಿ ಈಡಿಯಟ್ ಪಿಕ್ಚರ್ ನೋಡಿದ್ದರೆ ಅದರಲ್ಲಿ ರಾಂಚೊ, ರಾಜು, ಫರ್ಹಾನ್ ಪಿಯಾಳ(ಕರೀನಾಳ) ಸಹೋದರಿ ಯಮದುವೆಗೆ ಆಮಂತ್ರಣ ಇಲ್ಲದಿದ್ದರೂ ಒಂದು ಒಳ್ಳೆಯ ಊಟಕ್ಕೆ ಆಸೆಪಟ್ಟು ಮದುವೆಗೆ ಹೋಗುವ ದೃಶ್ಯ ನೆನಪಿರಬಹುದು. ಆ ದೃಶ್ಯ ಬಂದಾಗ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೇವೆ.
ಆ ಸಿನಿಮಾ ನೆನಪಿಸುವ ನೈಜ ಘಟನೆಯೊಂದು ಬಿಹಾರದಲ್ಲಿ ನಡೆದಿದ್ದು ಆ ವೀಡಿಯೋ ತುಂಬಾನೇ ವೈರಲ್ ಆಗಿದೆ. ಆ ವೀಡಿಯೋ ನೋಡುವಾಗ ಫನ್ನಿ ಅನಿಸುವುದರ ಜೊತೆಗೆ ನಿಮಗೆ ಅಯ್ಯೋ ಪಾಪನೂ ಅನಿಸುತ್ತೆ.... ಒಂದೊಳ್ಳೆಯ ಊಟದ ಮಹತ್ವ ಹಾಸ್ಟೆಲ್ ಜೀವನ ಅನುಭವಿಸಿದವರಿಗೆ ಖಂಡಿತ ಗೊತ್ತಿರುತ್ತದೆ.

ಈ ವೀಡಿಯೋದಲ್ಲಿ ಒಬ್ಬ ಯುವಕ ಮದುವೆ ಹುಡುಗನ ಬಳಿ ಬಂದು ಅವನ ಬಳಿ ಹೇಳುತ್ತಾನೆ 'ನನಗೆ ನೀವು ಯಾರು, ನಿಮ್ಮನ್ನು ಮದುವೆಯಾಗುತ್ತಿರುವ ಹುಡುಗಿ ಯಾರು ಏನೂ ಗೊತ್ತಿಲ್ಲ, ಇಲ್ಲಿ ಯಾರ ಪರಿಚಯವೂ ನನಗಿಲ್ಲ, ಹಾಸ್ಟೆಲ್‌ನಲ್ಲಿದ್ದೆ ತುಂಬಾ ಹಸಿವಾಗುತ್ತಿತ್ತು, ಒಂದೊಳ್ಳೆ ಊಟ ಸಿಗುತ್ತೆ ಅಂತ ಬಂದೆ. ಹಾಗೇ ಬಂದು ತಿಂದು ಹೋಗಬಹುದಿತ್ತು, ಆದರೆ ನಿಮಗೆ ಹೇಳಬೇಕೆನಿಸಿತ್ತು, ಹಾಗಾಗಿ ಹೇಳ್ತಾ ಇದ್ದೀನಿ, ನಾನು ಊಟ ಮಾಡುವುದರಿಂದ ನಿಮಗೇನು ಸಮಸ್ಯೆಯಿಲ್ಲ ತಾನೆ?' ಎಂದು ಕೇಳಿದ್ದೇನೆ.
ಅದಕ್ಕೆ ವರ 'ಇಲ್ಲ, ನನಗೇನೂ ಅಭ್ಯಂತರವಿಲ್ಲ' ಎಂದು ಹೇಳುತ್ತಾನೆ. ಅಷ್ಟು ಮಾತ್ರವಲ್ಲ ನಿನ್ನ ಹಾಸ್ಟೆಲ್ ಫ್ರೆಂಡ್ಸ್‌ಗೂ ಆಹಾರ ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ. ಆ ಹಾಸ್ಟೆಲ್ ಹುಡುಗ ಆ ನವಜೋಡಿಗೆ ಶುಭಕೋರುತ್ತಾನೆ.
ಹಾಸ್ಟೆಲ್ ಹುಡುಗ ಮದುಮಗನ ಜೊತೆ ತಾನು ಬಂದಿರುವ ಉದ್ದೇಶ ಹೇಳುವಾಗ ವೀಡಿಯೋ ಕೂಡ ಮಾಡಿದ್ದಾನೆ. ಇದೀಗ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಾಸ್ಟೆಲ್ ಲೈಫ್ ಒಂಥರಾ ಸ್ಪೆಷಲ್, ಜೀವನದ ಹಲವು ಪಾಠಗಳನ್ನು ಕಲಿಸುತ್ತದೆ. ಮನೆಯಲ್ಲಿದ್ದು ಶಾಲಾ-ಕಾಲೇಜಿಗೆ ಹೋಗುವುದಕ್ಕೂ, ಹಾಸ್ಟೆಲ್‌ನಲ್ಲಿ ಓದುವುದಕ್ಕೂ ತುಂಬಾನೇ ವ್ಯತ್ಯಾಸವಿರುತ್ತದೆ. ಮನೆಯಲ್ಲಿ ಅಮ್ಮ ನಮಗೆ ಇಷ್ಟವಾದ ಊಟ ಮಾಡಿ ಬಡಿಸುತ್ತಾಳೆ, ಅವಳು ಮಾಡಿದ ಊಟ ಇಷ್ಟವಾಗದಿದ್ದರೆ ನಂಗೆ ಊಟ ಬೇಡ ಅಂತ ಕೊಬ್ಬು ತೋರಿಸುತ್ತೇವೆ.
ಆದರೆ ಹಾಸ್ಟೆಲ್‌ನಲ್ಲಿದ್ದರೆ ಅವರು ಕೊಟ್ಟದ್ದು ತಿನ್ನಬೇಕು. ಇಷ್ಟ ಇಲ್ಲ ಅಂತ ಕೂತ್ರೆ ನೀರು ಕುಡಿದು ಬದುಕಬೇಕು. ಇನ್ನು ಅವರು ಕೂಡುವ ಆಹಾರ ಅವರಿಗೇ ಇಷ್ಟವಾಗಬೇಕು, ಆ ಒಂದೇ ರುಚಿ ಅಥವಾ ಉಪ್ಪು, ಉಳಿ, ಖಾರ ಅಂತ ಏನೂ ಇಲ್ಲದ ಊಟ, ಹಾಸ್ಟೆಲ್ ಪಾಡು ಹಾಸ್ಟೆಲ್‌ನಲ್ಲಿದ್ದವರಿಗಷ್ಟೇ ಗೊತ್ತು...
ಆದ್ದರಿಂದಲೇ ಈ ಹುಡುಗನ ವೀಡಿಯೋ ಅಷ್ಟು ವೈರಲ್ ಆಗಿರಬಹುದು.
ನೀವು ಹಾಸ್ಟೆಲ್‌ನಲ್ಲಿದ್ದಾಗ ಈ ರೀತಿಯ ಏನಾದರೂ ಕೀಟಲೆ ಮಾಡಿದ್ದರೆ ಕಮೆಂಟ್ ಮಾಡುವ ಮೂಲಕ ನಿಮ್ಮ ಅನುಭವ ಹಂಚಿಕೊಳ್ಳಿ...



Click it and Unblock the Notifications

