Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
14ಕ್ಕೂ ಅಧಿಕ ದಿನಗಳಿಂದ ಈ ಜಾಗವನ್ನು ನಿಲ್ಲದೆ ಸುತ್ತು ಹಾಕುತ್ತಿವೆ ನೂರಾರು ಕುರಿಗಳು, ಕಾರಣ ನಿಗೂಢ: ವೈರಲ್ ವೀಡಿಯೋ
ಕೆಲವೊಮ್ಮೆ ಪ್ರಾಣಿಗಳು ತುಂಬಾನೇ ವಿಚಿತ್ರವಾಗಿ ವರ್ತಿಸಲಾರಂಭಿಸುತ್ತವೆ, ಅವುಗಳ ನಿಗೂಢ ವರ್ತನೆಗೆ ಏನೋ ಒಂದು ಕಾರಣವಿರುತ್ತದೆ, ಏಕೆಂದರೆ ಪ್ರಕೃತಿಯಲ್ಲಿ ಏನಾದರೂ ಬದಲಾವಣೆಯಾದರೆ ಪ್ರಾಣಿಗಳು ವಿಚಿತ್ರವಾಗಿ ವರ್ತಿಸಲಾರಂಭಿಸುತ್ತದೆ.

ಸುನಾಮಿಗೆ ಮುನ್ನ ಜಲಚರಗಳು ವಿಚಿತ್ರವಾಗಿ ವರ್ತಿಸುತ್ತವೆ, ಭೂಕಂಪನಕ್ಕೆ ಮುನ್ನ ನಾಯಿ, ದನ ಮೊದಲಾದ ಪ್ರಾಣಿಗಳು ವಿಚಿತ್ರವಾಗಿ ವರ್ತಿಸಲಾರಂಭಿಸುತ್ತವೆ. ಇತ್ತೀಚೆಗಿನ ಒಂದು ವೀಡಿಯೋ ಇದೇ ರೀತಿ ತುಂಬಾನೇ ಗಮನ ಸೆಳೆದಿದೆ. ನೂರಾರು ಕುರಿಗಳ ಗುಂಪು ವೃತ್ತಾಕಾರವಾಗಿ ಒಂದು ಸ್ಥಳವನ್ನು10 ದಿನಗಳಿಗೂ ಅಧಿಕ ಸಮಯದಿಂದ ನಿಲ್ಲದೆ ಸುತ್ತು ಹಾಕುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು ಚೀನಾದಲ್ಲಿ ಈ ಘಟನೆ ಸಂಭವಿಸಿದೆ.
ಈ ಕುರಿಗಳು 14 ದಿನಗಳಿಂದ ಸುತ್ತು ಹಾಕುತ್ತಿರುವುದೇಕೆ ಎಂಬ ಕಾರಣ ಇನ್ನೂ ನಿಗೂಢವಾಗಿದೆ, ಚೀನಾದ ಮಂಗೋಲಿಯಾದಲ್ಲಿ ಕುರಿಗಳು ಈ ರಿತಿ ವಿಚಿತ್ರ ವರ್ತನೆ ತೋರುತ್ತಿವೆ, ಕುರಿಗಳು ಈ ರೀತಿ ಸುತ್ತಲು ಜನವರಿ ನಾಲ್ಕರಿಂದ ಸುತ್ತು ಹಾಕುತ್ತಿದೆ. ಈ ರೀತಿ ಸುತ್ತು ಹಾಕುತ್ತಿರುವ ಕುರಿಗಳೆಲ್ಲಾ ಆರೋಗ್ಯವಾಗಿದೆಯಂತೆ.
ಆದರೆ ಕುರಿಗಳು ಏಕೆ ಈ ವಿಚಿತ್ರ ವರ್ತನೆ ತೋರುತ್ತಿದೆ ಎಂದು ತಿಳಿಯದಿರುವುದು ಜನರ ಸೋಜಿಗಕ್ಕೆ ಕಾರಣವಾಗಿದೆ. ಇದೀಗ ಈ ಸಿಸಿ ಟಿವಿ ದೃಶ್ಯ ವೈರಲ್ ಆಗಿ ಜಗತ್ತಿನ ಗಮನ ಸೆಳೆಯುತ್ತಿದೆ.



Click it and Unblock the Notifications

