Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ಸೋಮವಾರ ವಾರದಲ್ಲಿಯೇ ಅತ್ಯಂತ ಕೆಟ್ಟ ದಿನವೆಂದ' ಗಿನ್ನಸ್ ವಿಶ್ವ ದಾಖಲೆ'
ಸೋಮವಾರವನ್ನು ತಮಾಷೆಗೆ ಸೋಮಾರಿಗಳ ದಿನವೆಂದು ಹೇಳಲಾಗುವುದು. ಸಾಮಾನ್ಯವಾಗಿ ಕೆಲಸದ ಸ್ಥಳಗಳಲ್ಲಿ ಭಾನುವಾರ ರಜೆ ಇರುತ್ತೆ, ರಜೆಯನ್ನು ಆರಾಮವಾಗಿ, ಸುತ್ತಾಡುತ್ತಾ ಅಥವಾ ಪಾರ್ಟಿ ಮಾಡುತ್ತಾ ಕಳೆದು ಸೋಮವಾರ ಬೆಳಗ್ಗೆ ಆದಾಗ ಏನೋ ಒಂದು ರೀತಿಯ ಉದಾಸೀನ.

ಇವತ್ತು ಕೂಡ ರಜೆ ಮಾಡಬೇಕು ಎಂದು ಮನಸ್ಸು ಹೇಳುತ್ತಿರುತ್ತದೆ, ಆದರೆ ಕೆಲಸಕ್ಕೆ , ಶಾಲಾ-ಕಾಲೇಜುಗಳಿಗೆ ಹೀಗೆ ನಮ್ಮ-ನಮ್ಮ ಕಾರ್ಯಗಳಿಗೆ ಹೋಗದೆ ವಿಧಿಯಿಲ್ಲ, ಹೋಗಬೇಕಾಗುತ್ತದೆ. ಸೋಮವಾರ ಈ ರೀತಿ ಉದಾಸೀನ ಉಂಟಾಗುವುದಕ್ಕೆ' Monday blues' ಎಂದು ಕರೆಯಲಾಗುತ್ತಿತ್ತು.
ಇದೀಗ ಗಿನ್ನಸ್ ವಿಶ್ವ ದಾಖಲೆಯು ಸೋಮವಾರವನ್ನು ವಾರದಲ್ಲಿಯೇ ಅತ್ಯಂತ ಕೆಟ್ಟ ದಿನವೆಂದು ಘೋಷಿಸಿದೆ. ಇದಕ್ಕೆ ನೆಟ್ಟಿಗರು ಕೂಡ ತುಂಬಾ ಪ್ರತಿಕ್ರಿಯಿಸುತ್ತಿದ್ದಾರೆ.
ಕೆಲವರು ಭಾನುವಾರ ಬಳಿಕ ಸೋಮವಾರ ಆಫೀಸ್‌ಗೆ ಹೋಗಲು ಇಷ್ಟವಾಗದೆ ರಜೆ ಹಾಕಿದೆ ಎಂದು ಹೇಳಿದರೆ ಇನ್ನು ಕೆಲವರು ಸೋಮವಾರ ಸರಿಯಾಗಿದ್ದರೆ ವಾರದ ಇನ್ನುಳಿದ ದಿನವು ಸರಿಯಿರುತ್ತದೆ ಎಂದು ಹೇಳಿದ್ದಾರೆ.
ಇನ್ನು ಕೆಲವರು ಭಾನುವಾರ ಸಂಜೆ ಉಂಟಾಗುವ ಫೀಲಿಂಗ್ ಸೋಮವಾರ ಬೆಳಗ್ಗೆ ಬರುವ ಫೀಲಿಂಗ್‌ಗಿಂತಲೂ ಕೆಟ್ಟದಾಗಿರುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ಸಾಮಾಜಿಕ ತಾಣದಲ್ಲಿ ಗಿನ್ನಿಸ್ ವಿಶ್ವ ದಾಖಲೆ ಈ ರೀತಿ ಹೇಳಿರುವುದಕ್ಕೆ ಹಲವಾರು ಪ್ರತಿಕ್ರಿಯೆಗಳು ಬರುತ್ತಿವೆ.
ಈ ಕುರಿತು ನಿಮಗೆ ಏನು ಅನಿಸುತ್ತೆ? ಸೋಮವಾರ ಬಂದಾಗ ಅಯ್ಯೋ ಭಾನುವಾರ ಮುಗಿದೇ ಹೋಯ್ತೇ ಎಂಬ ನಿರಾಸೆ ನಿಮ್ಮನ್ನೂ ಕಾಡುವುದೇ?



Click it and Unblock the Notifications

