Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಅಂತರರಾಷ್ಟ್ರೀಯ ಮಹಿಳಾ ದಿನ: ತುಂಬಾ ವಿಶೇಷ ಅರ್ಥದ ಚಿತ್ರಗಳಲ್ಲಿ ಶುಭ ಕೋರಿದೆ ಗೂಗಲ್

ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನ... ಎಲ್ಲಾ ವಿಷಯಗಳಲ್ಲಿ ಗಂಡಿಗಿಂತ ಹೆಣ್ಣು ಕಡಿಮೆಯಿಲ್ಲದಿದ್ದರೂ ಅವಳಿಗೆ ಸಿಗುವ ಮನ್ನಣೆ ಕಡಿಮೆ. ಹೆಣ್ಣಿನ ಮೌಲ್ಯ, ಗೌರವವನ್ನು ಎತ್ತಿ ಹಿಡಿಯಲು ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.
ಇಂದು ಮಹಿಳೆ ಎಲ್ಲಾ ಸ್ತರಗಳಲ್ಲೂ ಗುರುತಿಸಿಕೊಂಡಿದೆ. ಹೆಣ್ಣಿಗೆ ಸಾಧ್ಯವೇ ಇಲ್ಲ ಎಂದು ಎಷ್ಟೋ ಕ್ಷೇತ್ರಗಳಿಂದ ಹೆಣ್ಣನ್ನು ದೂರವಿಡಲಾಗಿತ್ತು, ಆದರೆ ಇಂದು ಅವಳು ತನ್ನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುವ ಶಕ್ತಿಯಿದೆ ಎಂಬುವುದನ್ನು ತೋರಿಸಿದ್ದಾಳೆ. ಅವಳು ಮನಸ್ಸು ಮಾಡಿದರೆ ಯಾವುದು ಅಸಾಧ್ಯವೆಂಬುವುದೇ ಇಲ್ಲ, ಆದರೆ ವಳ ಸಾಧನೆಗೆ ಇಂದಿಗೂ ಅನೇಕ ಅಡೆತಡೆಗಳಿವೆ. ಎಷ್ಟೋ ಹೆಣ್ಣು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಬೆಂಬಲ ಸಿಗದೆ ಅವಳ ಸಾಮಾರ್ಥ್ಯ, ಪ್ರತಿಭೆ ಎಲ್ಲವೂ ಮುದುಡಿ ಹೋಗುತ್ತಿದೆ.
ಇನ್ನು ಕೆಲ ಹೆಣ್ಣು ಮಕ್ಕಳು ಎಲ್ಲಾ ಅಡೆತಡೆಗಳನ್ನು ಮೀರಿ ಬೆಳೆಯುತ್ತಿದ್ದಾರೆ. ಮನೆಯಲ್ಲಿ ತೊಟ್ಟಿಲು ಆಡಿಸುವುದರ ಜೊತೆಗೆ ಕೆಲಸವನ್ನೂ ಮಾಡುತ್ತಿದ್ದಾಳೆ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು, ಮನೆಗೆಲಸ, ಆಫೀಸ್ ಕೆಲಸ ಎಲ್ಲವನ್ನೂ ಒಬ್ಬಂಟಿಯಾಗಿ ಸಮರ್ಥಳಾಗಿ ನಿಭಾಯಿಸುತ್ತಿದ್ದಾಳೆ.
ಮಹಿಳಾ ದಿನದ ವಿಶೇಷವಾಗಿ ಗೂಗಲ್ ಕೂಡ ಮಹಿಳೆಯರಿಗೆ ತುಂಬಾನೇ ವಿಶೇಷವಾಗಿ ಶುಭಾಶಯ ಹೇಳಿದೆ. ತುಂಬಾನೇ ವಿಶಿಷ್ಟವಾಗಿ ಗೂಗಲ್ ಡೂಡೆಲ್ ಮಾಡಿದ್ದು ಒಂದೊಂದು ಫೋಟೋ ಮಹಿಳೆಯ ಬಗ್ಗೆ ಸಾಕಷ್ಟು ಹೇಳುವಂತಿದೆ. ಮನೆಯಲ್ಲಿ, ಹೊರಗಡೆ ದುಡಿಯುವ ಮಹಿಳೆಯಾಗಿ ಗುರುತಿಸಿಕೊಮಡಿರುವ ಮಹಿಳೆಯನ್ನು ತುಂಬಾ ಸುಂದರವಾಗಿ ವರ್ಣಿಸಲಾಗಿದೆ.
ಮಹಿಳೆ ಎಂಬುವುದು ಒಂದು ಶಕ್ತಿ, ಸ್ಪೂರ್ತಿ.... ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು.........



Click it and Unblock the Notifications




