Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಲಟ್ಟಣಿಗೆ ಬಳಸದೆ ಹೀಗೂ ರೌಂಡಾಗಿ, ಪಟ್ ಅಂಥ ಚಪಾತಿಗೆ ತಟ್ಟಬಹುದು : ವೈರಲ್ ಆಯ್ತು ಈ ವೀಡಿಯೋ
ಅಡುಗೆ ಎಂದು ಒಂದು ಕಲೆ ಅದು ಎಲ್ಲರಿಗೆ ಇರಲ್ಲ. ಕೆಲವರು ಏನು ಮಾಡಿದರೂ ತುಂಬಾನೇ ರುಚಿಯಾಗಿರುತ್ತೆ, ಇನ್ನು ಕೆಲವರು ಶ್ರಮದ ಕೆಲಸವನ್ನು ಸುಲಭವಾಗಿ ಮಾಡಲು ಒಂದು ಐಡಿಯಾ ಕಂಡುಕೊಳ್ಳುತ್ತಾರೆ. ಇಂಥ ಐಡಿಯಾಗಳು, ಕೆಲವೊಂದು ಕಿಚನ್ ಹ್ಯಾಕ್ಸ್ ತುಂಬಾನೇ ಅಡುಗೆ ಮಾಡುವಾಗ ತುಂಬಾನೇ ಸಹಾಯ ಮಾಡುತ್ತೆ. ಈಗ ಅಂಥದ್ದೊಂದು ಕಿಚನ್ ಹ್ಯಾಕ್ ವೀಡಿಯೋ ತುಂಬಾನೇ ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು ವೀಡಿಯೋ
ಚಪಾತಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದೆಂದು ಈಗ ಎಲ್ಲಾ ಹೆಚ್ಚಾಗಿ ಮನೆಯಲ್ಲಿ ಒಂದು ಹೊತ್ತು ಚಪಾತಿ ಮಾಡಲಾಗುವುದು. ಚಪಾತಿ ಮಾಡುವುದು ಕೆಲವರಿಗೆ ಸುಲಭದ ಕೆಲಸವಾದರೂ ಬಹುತೇಕರಿಗೆ ಅದೊಮದು ಕಷ್ಟದ ಕೆಲಸವೇ. ಚಪಾತಿ ಹಿಟ್ಟು ಕಲಿಸಬೇಕು, ನಂತರ ಉಂಡೆ ಕಟ್ಟಿ ಅದನ್ನು ಉತ್ತುವುದೇ ದೊಡ್ಡ ವಿಷಯ, ಅದಕ್ಕೇ ತುಂಬಾ ಸಮಯ ಬೇಕಾಗುವುದು. ಆದರೆ ಈ ಹುಡ್ಗಿ ಮಾಡಿರುವ ಕಿಚನ್ ಹ್ಯಾಕ್ ತುಂಬಾನೇ ಸುಲಭವಾಗಿದೆ. ಆದ್ದರಿಂದಲೇ ತುಂಬಾ ಜನರ ಗಮನ ಸೆಳೆದಿದೆ.

ಚಪಾತಿ ತಟ್ಟಲು ಲಟ್ಟಣಿಗೆ ಬೇಡ, ತಟ್ಟೆ ಸಾಕು
ಈಕೆ ತೋರಿಸಿರುವ ಪ್ರಕಾರ ಚಪಾತಿ ತಟ್ಟಲು ಲಟ್ಟಣಿಗೆ ಬೇಕಾಗಿಲ್ಲ, ಎರಡು ಸ್ವಲ್ಪ ಗಟ್ಟಿಯಾದ ತಟ್ಟೆಯಷ್ಟೇ ಸಾಕು. ಒಂದು ತಟ್ಟೆ ಮಗುಚಿ ಹಾಕಿ, ಅದರ ಮೇಲೆ ಪ್ಲಾಸ್ಟಿಕ್ ಹಾಕಿ ಎಣ್ಣೆ ಸವರಿ, ಚಪಾತಿ ಹಿಟ್ಟಿನ ಉಂಡೆಯನ್ನು ಹಿಡಿ, ನಂತರ ಅದರ ಮೇಲೆ ಮತ್ತೊಂದು ಪ್ಲಾಸ್ಟಿಕ್ ಇಟ್ಟು ಮತ್ತೊಂದು ತಟ್ಟೆಯಿಂದ ಒತ್ತಿದರೆ ಸಾಕು... ತವಾ ಮೇಲೆ ಬೇಯಿಸಲು ರೌಂಡಾದ ಚಪತಿ ರೆಡಿ.

ಸಮಯ ಲಾಭ, ಶೇಪ್ ಚೆನ್ನಾಗಿರುತ್ತದೆ
ಚಪಾತಿ ಲಟ್ಟಿಸುವಾಗ ಅದನ್ನು ರೌಂಡ್ ಶೇಪ್‌ಗೆ ತರುವುದು ದೊಡ್ಡ ಕೆಲಸ. ಇದರಲ್ಲಿ ಆದರೆ ಪಟ್ ಅಂಥ ಚಪಾತಿ ಒತ್ತ ಬಹುದು ಹಾಗೂ ಇದರ ಶೇಪ್ ಕೂಡ ಚೆನ್ನಾಗಿರುತ್ತದೆ. ಐಡಿಯೂ ಸೂಪರ್ ಅಲ್ವಾ?



Click it and Unblock the Notifications
