Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಾಕಿದ ನಾಯಿ 'ಗೇ' ಎಂದು ತಿಳಿದಾಗ ಅದನ್ನು ಅನಾಥವಾಗಿ ಬಿಟ್ಟು ಹೋದ ಮಾಲೀಕ!
ಇಲ್ಲೊಬ್ಬ ವ್ಯಕ್ತಿ ತಾನು ಸಾಕಿದ ನಾಯಿ 'ಗೇ' ಎಂದು ಭಾವಿಸಿ ಅದನ್ನು ಅನಾಥವಾಗಿ ಬಿಟ್ಟು ಹೋಗಿದ್ದಾನೆ. ಎನಿಮಲ್ ಸೆಂಟರ್‌ನಲ್ಲಿ ಬಿಟ್ಟು ಹೋಗಿರುವ ಆ ನಾಯಿ ಒಡೆಯನಿಲ್ಲದೆ ಅನಾಥವಾಗಿದೆ.

ಕೆಲವರು ನಾಯಿ ಸಾಕುತ್ತಾರೆ, ಆದರೆ ಅದಕ್ಕೆ ಹುಷಾರು ಇಲ್ಲದಿದ್ದರೆ ಅಥವಾ ಅದು ಹೇಳಿದ ಮಾತು ಕೇಳಲ್ಲ ಎಂದರೆ ಅದನ್ನು ತಂದು ಎಲ್ಲಾದರೂ ಬಿಟ್ಟು ಹೋಗುತ್ತಾರೆ, ಪಾಪ ಅದು ತಿನ್ನಲಿಕ್ಕೆ ಏನೂ ಇಲ್ಲದೆ ಬೀದಿ ನಾಯಿಯಾಗಬೇಕಾಗುತ್ತದೆ. ಇದೀಗ ಈ ನಾಯಿಯ ಪಾಡು ಕೂಡ ಇದೇ ಆಗಿದೆ. ಇದರ ಹೆಸರು ಫೆಝೋ.. ಇದೀಗ ಫೆಝೋ ಸ್ಟೋರಿ ತುಂಬಾನೇ ವೈರಲ್ ಆಗಿದೆ, ನೆಟ್ಟಿಗರು ಆ ನಾಯಿಯ ಬಗ್ಗೆ ಅನುಕಂಪ ವ್ಯಕ್ತ ಪಡಿಸುತ್ತಿದ್ದಾರೆ.
ಫೆಝೋ ಗಂಡು ನಾಯಿಯ ಜೊತೆ ಸಂಭೋಗ ಮಾಡುವುದನ್ನು ನೋಡಿದ ಅವನ್ನು ಸಾಕಿದವ ಕೋಪಗೊಂಡು ಅದನ್ನು ತಂದು ಪ್ರಾಣಿಗಳ ಶೆಲ್ಟರ್ ಬಳಿ ತಂದು ಬಿಟ್ಟು ಹೋಗಿದ್ದಾನೆ.
ಫೆಝೋ ಬುದ್ಧಿವಂತನಾಗಿದ್ದು ಜನರ ಜೊತೆ ತುಂಬಾ ಸ್ನೇಹದಿಂದ ಇರುತ್ತಾರೆ. 25 ಕೆಜಿ ತೂಕ ಹೊಂದಿರುವ ಇದಕ್ಕೆ ಒಂದು ಶಾಶ್ವತ ನೆಲೆ ಸಿಗುವವರೆಗೆ ಯಾರೂ ದತ್ತು ತೆಗೆದುಕೊಳ್ಳುವಂತೆ ಎನಿಮಲ್ ಶೆಲ್ಟರ್ ಕೇಳಿಕೊಂಡಿದೆ. ಇದೀಗ ಈ ಸುದ್ದಿ WCCB ಟಿವಿಯಲ್ಲೂ ಕೂಡ ಬಂದಿದೆ. ಫೆಝೋ ಕತೆ ಕೇಳಿದವರು ಅದರ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ ಹಾಗೂ ಅದನ್ನು ಅನಾಥವಾಗಿ ಬಿಟ್ಟು ಹೋದವನನ್ನು ಬೈಯ್ಯುತ್ತಿದ್ದಾರೆ.
ಯಾರಾದರೂ ತಮ್ಮ ನಾಯಿಯಲ್ಲಿ ವಿಭಿನ್ನ ವರ್ತನೆ ಕಂಡು ಬಂದರೆ ಅದಕ್ಕೆ ಟಾಯ್ ಅಥವಾ ಜಗಿಯಲು ಏನಾದರೂ ನೀಡಿ, ಅದರ ಜೊತೆ ಆಟವಾಡುತ್ತಾ ಅದನ್ನು ಎಂಗೇಜ್ ಮಾಡಿ, ಆಗ ಅದು ನೀವು ಹೇಳಿದಂತೆ ಕೇಳುತ್ತೆ.
ಈಗ ಫೆಝೋಗೆ ಉತ್ತಮ ಒಡೆಯ ಸಿಗಲಿ ಎಂಬುವುದೇ ಅದರ ಸ್ಟೋರಿ ಕೇಳಿದವರ ಆಶಯವಾಗಿದೆ.



Click it and Unblock the Notifications
