Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಹಿಜಾಬ್ ಹಾಗೂ ಬುರ್ಕಾದ ನಡುವಿನ ವ್ಯತ್ಯಾಸವೇನು?
ಹಿಜಾಬ್ ಹಾಗೂ ಬುರ್ಕಾ ಎನ್ನುವುದು ಮುಸ್ಲಿಂ ಧರ್ಮದಲ್ಲಿ ಅಗ್ಯತವಾ ಗಿ ಧರಿಸಬೇಕಾದ ವಸ್ತ್ರಧಾರಣೆಯಾಗಿದೆ.ಹಿಜಾಬ್ ಮತ್ತು ಬುರ್ಕಾ ಎಂಬುವುದು ಎರಡು ಪ್ರತ್ಯೇಕವಾದ ವಸ್ತ್ರವಾಗಿದ್ದರೂ ಎರಡರ ನಡುವಿನ ವ್ಯತ್ಯಾಸ ಮಹತ್ವದ್ದಾಗಿದೆ. ಮುಸ್ಲಿಂ ಮಹಿಳೆಯರು ಧರಿಸುವ ಈ ವಸ್ತ್ರಗಳ ನಡುವಿನ ವ್ಯತ್ಯಾಸವೇನು ಎಂದು ನೋಡುವುದಾದರೆ:

ಹಿಜಾಬ್:
ಮುಖ ಹಾಗೂ ಕೈಗಳನ್ನು ಬಿಟ್ಟು ಸಂಪೂರ್ಣವಾಗಿ ದೇಹವನ್ನು ಮುಚ್ಚುವುದನ್ನು ಹಿಜಾಬ್ ಎಂದು ಕರೆಯಲಾಗುತ್ತದೆ. ಹಿಜಾಬ್ ಎಂಬುವುದು ತಲೆಯನ್ನು ಮುಚ್ಚುವಂಥ ಸ್ಕಾರ್ಫ್. ಇದು ಕೂದಲನ್ನು ಹಾಗೂ ಕುತ್ತಿಗೆಯನ್ನು ಮುಚ್ಚುತ್ತದೆ. ಕೆಲ ಮುಸ್ಲಿಂ ಮಹಿಳೆಯರು ಭುಜ ಹಾಗೂ ಎದೆ ಭಾಗ ಮುಚ್ಚುವಂಥ ಹಿಜಾಬ್ ಧರಿಸುವುದುಂಟು. ಮುಸ್ಲಿಂ ಧರ್ಮದಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಅಲ್ಲಾನ ಆಜ್ಞೆ, ಹಿಜಾಬ್ ಧರಿಸುವುದು ಸೃಷ್ಟಿಕರ್ತನಿಗೆ ತೋರಿಸುವ ವಿಧೇಯತೆ ಎಂದು ಹೇಳಲಾಗುತ್ತದೆ.
ಬುರ್ಕಾ ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿರುತ್ತದೆ. ಆದರೆ ಹಿಜಾಬ್ ಯಾವುದೇ ಬಣ್ಣದ ಬಟ್ಟೆಯಿಂದಲೂ ಧರಿಸಬಹುದು.

ಬುರ್ಕಾ
ಬುರ್ಕಾ ಮೈ ಮುಚ್ಚುವಂಥ ವಸ್ತ್ರವಾಗಿದೆ. ಈ ಬುರ್ಕಾ ಹಲವು ವಿನ್ಯಾಸಗಳಲ್ಲಿ ದೊರೆಯುತ್ತದೆ. ಬುರ್ಕಾ ತಲೆಯಿಂದ ಕಾಲಿನವರೆಗೆ ದೇಹವನ್ನು ಮುಚ್ಚುತ್ತದೆ. ಕೆಲವರು ಮುಖ ಮಾತ್ರ ಕಾಣುವಂತೆ ಬುರ್ಕಾ ಧರಿಸಿದರೆ, ಇನ್ನು ಕೆಲವರು ಮುಖ ಕೂಡ ಕವರ್ ಮಾಡಿ ಬುರ್ಕಾ ಧರಿಸುತ್ತಾರೆ. ಬುರ್ಕಾವನ್ನು ಒಂದೇ ಬಟ್ಟೆಯಿಂದ ಅಥವಾ ಎರಡು ಬಟ್ಟೆಯಿಂದ ತಯಾರಿಸಲಾಗುತ್ತಿದೆ. ಬುರ್ಕಾ ಧರಿಸಿದಾಗ ಕಣ್ಣಿನ ಭಾಗ ಮಾತ್ರ ತೆರೆದಿರುತ್ತದೆ, ಕೆಲವರು ನೆಟ್ ರೀತಿ ಪರದೆಯನ್ನು ಬಳಸಿ, ಇಡೀ ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿರುತ್ತಾರೆ, ಆದರೆ ಕಣ್ಣಿನ ಭಾಗದಲ್ಲಿ ವಸ್ತ್ರ ಪಾರದರ್ಶಕವಾಗಿದ್ದು ಅವರಿಗೆ ಅದರೊಳಗಿನಿಂದ ನೋಡಲು ಸಾಧ್ಯವಾಗುವುದು.
ಬುರ್ಕಾದಲ್ಲಿ ಕಪ್ಪು ಬಣ್ಣದ ಬುರ್ಕಾವನ್ನು ಹೆಚ್ಚಾಗಿ ಧರಿಸಲಾಗುತ್ತದೆ. ಇತರ ಬಣ್ಣದ ಬುರ್ಕಾ ಇದ್ದರೂ ಹೆಚ್ಚಿನವರು ಕಪ್ಪು ಬಣ್ಣದ ಬುರ್ಕಾ ಧರಿಸುತ್ತಾರೆ.
ಅಲ್ಲದೆ ಮುಸ್ಲಿಂ ಮಹಿಳೆಯರು ನಿಕಾಬ್ ಕೂಡ ಧರಿಸುತ್ತಾರೆ. ಇದರಲ್ಲಿ ಕಣ್ಣುಗಳು ಮಾತ್ರ ಕಾಣುವಂತೆ ವಸ್ತ್ರ ಧರಿಸಲಾಗಿರುತ್ತದೆ, ತಲೆಗೆ ಸ್ಕಾರ್ಫ್ ಸುತ್ತಲಾಗಿರುತ್ತದೆ.

ಬುರ್ಕಾ vs ಹಿಜಾಬ್ vs ಅಭಯಾ
ವಿಶ್ವದ ವಿವಿಧ ಕಡೆ ಮುಸ್ಲಿಂ ಮಹಿಳೆಯರ ವಸ್ತ್ರಧಾರಣೆಯಲ್ಲಿ ಸ್ವಲ್ಪ ಭಿನ್ನವಿರುತ್ತದೆ. ಅವರು ಯಾವ ಸಂಸ್ಕೃತಿಯಿಂದ ಬಂದಿದ್ದಾರೋ ಅದರಂತೆ ಅವರ ವಸ್ತ್ರಧಾರಣೆ ಇರುತ್ತದೆ. ಕೆಲವರು ತುಂಬಾ ಕಟ್ಟುನಿಟ್ಟಾಗಿ ಬುರ್ಕಾ ಅಂದರೆ ಕಣ್ಣುಗಳನ್ನು ಬಿಟ್ಟು ದೇಹದ ಉಳಿ ಭಾಗ ಕಾಣುವಂತೆ ಬುರ್ಕಾ ಧರಿಸಿದರೆ ಇನ್ನು ಕೆಲವರು ಹಿಜಾಬ್ ಮಾತ್ರ ಧರಿಸುತ್ತಾರೆ. ಹಿಜಾಬ್‌ನಲ್ಲಿ ಮುಖ ಮುಚ್ಚುವುದಿಲ್ಲ. ಅಭಯಾ ಎನ್ನುವುದು ಬುರ್ಕಾದಂತೆ ಮೈಯನ್ನು ಸಂಪೂರ್ಣ ಮುಚ್ಚುವ ವಸ್ತ್ರವಾಗಿದೆ. ಆದರೆ ಇದು ಸ್ವಲ್ಪ ಸ್ಟೈಲಿಷ್ ಆಗಿರುತ್ತದೆ. ವಿದೇಶಗಳಲ್ಲಿ ವೆಸ್ಟರ್ನ್ ಡ್ರೆಸ್ ಧರಿಸಿ ಅಭಯಾ ಧರಿಸುತ್ತಾರೆ. ಅಮೆರಿಕದಂಥ ದೇಶಗಳಲ್ಲಿ ಮುಸ್ಲಿಂ ಮಹಿಳೆಯರು ಜೀನ್ಸ್ ಧರಿಸಿ ಹಿಜಾಬ್ ಧರಿಸುತ್ತಾರೆ. ಅದೇ ಮುಸ್ಲಿಂ ರಾಷ್ಟ್ರಗಳಲ್ಲಿ ಮುಸ್ಲಿಂ ಮಹಿಳೆಯರು ಮಾತ್ರವಲ್ಲ ಇತರ ಮಹಿಳೆಯರೂ ,ಬುರ್ಕಾ ಹಾಕಬೇಕಾಗಿರುತ್ತದೆ.
ಹಿಜಾಬ್, ಬುರ್ಕಾ, ಅಭಯಾ, ಶೈಲಾ, ಆಲ್ ಅಮೈರಾ, ಕೈಮರ್ ಮುಂತಾದವುಗಳು ಮುಸ್ಲಿಂ ಮಹಿಳೆಯರ ಉಡುಗೆಗಳಾಗಿದ್ದು, ಪರ ಪುರುಷನ ಎದುರಿಗೆ ಹೋಗುವಾಗ ಮುಸ್ಲಿಂ ಮಹಿಳೆಯರು ತಮ್ಮ ತಲೆ ಹಾಗೂ ಮೈಯನ್ನು ಮುಚ್ಚಿರಬೇಕು ಎಂಬ ನಿರ್ಬಂಧ ಇಸ್ಲಾಂನಲ್ಲಿದೆ. ಈ ನಿರ್ಬಂಧಗಳು ಎಲ್ಲಾ ಕಡೆ ಒಂದೇ ರೀತಿ ಇಲ್ಲ, ಕೆಲವು ಕಡೆ ಮುಸ್ಲಿಂ ಮಹಿಳೆಯರು ಹಿಜಾಬ್ ಮಾತ್ರ ಧರಿಸಿದರೆ, ಇನ್ನುಕೆಲವು ಕಡೆ ಮೈ ಪೂರ್ತಿ ಕವರ್ ಮಾಡುವಂಥ ಬುರ್ಕಾ ಧರಿಸಬೇಕು.



Click it and Unblock the Notifications
