Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಕೊರೊನಾ ವೈರಸ್ ಸೋಂಕಿ ಆಸ್ಪತ್ರೆ ಬೆಡ್‌ನಲ್ಲಿದ್ದರೂ ಕೈಕೈ ಬಿಡದ ವೃದ್ಧ ದಂಪತಿ
ಕೊರೊನಾ ವೈರಸ್ ಎಂಬ ಮಾರಾಣಾಂತಿಕ ಸೋಂಕು ಚೀನಾವನ್ನು ಅಕ್ಷರಶಃ ನರಕವಾಗಿಸಿದೆ. ತಮ್ಮವರು ನರಳಿ-ನರಳಿ ಸಾಯುತ್ತಿದ್ದರೆ ಏನೂ ಮಾಡಲಾಗದೆ, ಅವರನ್ನು ಮುಟ್ಟಲೂ ಆಗದೆ ಅಲ್ಲಿಯ ಜನರು ಅಸಹಾಯಕರಾಗಿ ನಿಂತಿದ್ದಾರೆ.
ಚೀನಾದ ಹಲವಾರು ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೋಡುವಾಗ ಪ್ರತಿಯೊಬ್ಬರ ಮನಸ್ಸು ಕರಗುತ್ತದೆ. ಅದರಲ್ಲೂ ವೃದ್ಧ ದಂಪತಿಯ ಪ್ರೀತಿಯ ವೀಡಿಯೋ ನೋಡಿದವರ ಕಣ್ತುಂಬಿ ಬರುವುದು.

ಯಾವ ಕೊರೊನಾ ವೈರಸ್‌ಗೂ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ ಎಂದು ಅಜ್ಜ-ಅಜ್ಜಿ ಕೈ -ಕೈ ಹಿಡಿದು ಆಸ್ಪತ್ರೆಯ ಐಸಿಯುವಿನಲ್ಲಿ ಮಲಗಿರುವ ವೀಡಿಯೋ ನೋಡಿದಾಗ ಕರಳು ಚುರ್ ಅನ್ನದೆ ಇರಲ್ಲ.
What does a couple mean? Two elderly patients of #coronavirus #CoronarivusOutbreak in their 80s said goodbye in ICU, this could be the last time to meet and greet 😭😭😭 pic.twitter.com/YKQIUM3YXJ
— Incoming Memes (@incoming_memes) February 2, 2020
80ರ ಪ್ರಾಯದ ವೃದ್ಧ ದಂಪತಿಗೆ ಕರೋನಾ ವೈರಸ್ ಸೋಂಕು ತಟ್ಟಿದೆ. ಅವರಿಬ್ಬರನ್ನು ಆಸ್ಪತ್ರೆಯ ಪ್ರತ್ಯೇಕ ಕೋಣೆಯಲ್ಲಿ, ಊ ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವು ಅವರ ಪಕ್ಕ ಕೂತು ಅಟ್ಟಹಾಸದಿಂದ ನಗುತ್ತಿದ್ದರೂ, ಅದನ್ನು ಲೆಕ್ಕಿಸದೆ ಒಬ್ಬರ-ಕೈ ಮತ್ತೊಬ್ಬರು ಹಿಡಿದು ಏನೇ ಬರಲಿ ನಿನ್ನ ಜೊತೆ ನಾನಿರುವೆ...ಸದಾ ನಾನಿರುವೆ ಎಂದು ಹೇಳುವಂತಿರುವ ಆ ವೀಡಿಯೋ ಪ್ರೀತಿಯ ಮಹತ್ವವನ್ನು ಸಾರುತ್ತದೆ.
ಪ್ರೀತಿಗೆ ಜಗತ್ತನ್ನು ಜಯಿಸುವ ಶಕ್ತಿ ಇದೆ, ಈ ಮಾರಕ ಕೊರೊನಾ ವೈರಸ್ ಸೋಲಿಸಿ ಆ ವೃದ್ಧ ದಂಪತಿ ಪ್ರೀತಿಯಿಂದ ಕೈ-ಕೈ ಹಿಡಿದು ನಡೆದಾಡುವಂತಾಗಲಿ ಎಂದು ಆ ವೀಡಿಯೋ ನೋಡಿದ ಪ್ರತಿಯೊಬ್ಬರು ಆಶಿಸುತ್ತಿದ್ದಾರೆ,



Click it and Unblock the Notifications
