Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊದಲ ಬಾರಿ ಬಣ್ಣ ನೋಡಿ ಭಾವುಕನಾದ ಕಲರ್ ಬ್ಲೈಂಡ್ ಬಾಲಕ: ಹೃದಯಸ್ಪರ್ಶಿ ವೀಡಿಯೋ
ಆ ಹುಡಗನ ಪಾಲಿಗೆ ಅದೊಂದು ಮರೆಯಲಾಗದ ದಿನ. ಜೀವನದಲ್ಲಿ ಬಣ್ಣಗಳು ಹೇಗಿರುತ್ತದೆ ಎಂದು ತಿಳಿದು ಬಂದ ಕಲರ್‌ಫುಲ್ ಡೇ. ಆತನ ಹೆಸರು ಜೋನ್‌ಥಾನ್, ಹುಟ್ಟಿನಿಂದಲೂ ಕಲರ್ ಬ್ಲೈಂಡ್ ಸಮಸ್ಯೆಯಿಂದ ಬಳಲುತ್ತಿದ್ದ. ಆದರೆ ಮೊತ್ತ ಮೊದಲ ಬಾರಿಗೆ ಬಣ್ಣಗಳು ಹೇಗಿರುತ್ತದೆ ಎಂದು ಅವನಿಗೆ ತಿಳಿಯಿತು, ಆ ಖುಷಿಯ ಕ್ಷಣದಲ್ಲಿ ಆತ ಭಾವುಕನಾಗುವ ವೀಡಿಯೋ ಹೃದಯ ಸ್ಪರ್ಶಿಯಾಗಿದೆ.
ಕಲರ್ ಬ್ಲೈಂಡ್ (ಬಣ್ಣ ಕುರುಡು) ಇರುವವರಿಗೆ ಸಾಮಾನ್ಯವಾಗಿ ಕೆಲವೊಂದು ಬಣ್ಣಗಳು ಕಣ್ಣಿಗೆ ಕಾಣುವುದೇ ಇಲ್ಲ. ಹಸಿರು, ಕೆಂಪು ಬಣ್ಣ ಅವರ ಕಣ್ಣಿಗೆ ಗೋಚರಿಸುವುದೇ ಇಲ್ಲ, ಸಾಮಾನ್ಯವಾಗಿ ಕಲರ್ ಬ್ಲೈಂಡ್ ಇರುವವರಿಗೆ ನೀಲಿ ಬಣ್ಣ ಅಷ್ಟೇ ಕಾಣಿಸುತ್ತದೆ, ಇನ್ನು ಕೆಲವರಿಗೆ ಆ ಬಣ್ಣ ಕೂಡ ಕಾಣಿಸುವುದಿಲ್ಲ. ಅವರಿಗೆ ಪ್ರತಿಯೊಂದು ಬಣ್ಣವೂ ಬ್ಲ್ಯಾಕ್ ಅಂಡ್ ವೈಟ್ ಟಿವಿ ನೋಡಿದಾಗ ಹೇಗೆ ಕಾಣುತ್ತೆ ಹಾಗೆಷ್ಟೇ ಕಾಣುತ್ತಿರುತ್ತದೆ.

ಈ ಹುಡುಗನಿಗೆ ಬಣ್ಣವನ್ನು ಗುರುತಿಸಲು ಸಹಾಯವಾಗಲು ವಿಶೇಷ ಕನ್ನಡಕವನ್ನು ಧರಿಸಲು ನೀಡಲಾಯಿತು. ಕಣ್ಣಿಗೆ ಕನ್ನಡಕ ಹಾಕಿದ ತಕ್ಷಣ ಅವನ ಕಣ್ಣಿಗೆ ಬಣ್ಣಗಳು ಗೋಚರಿಸಿದವು. ಮೊದಲ ಬಾರಿಗೆ ಬಣ್ಣ ನೋಡಿದಾಗ ಹುಡುಗ ತುಂಬಾ ಭಾವುಕನಾಗುತ್ತಾನೆ.
ಇದೊಂದು ಹೃದಯಸ್ಪರ್ಶಿಯಾದ ದೃಶ್ಯವಾಗಿದೆ. ಆತ ಭಾವುಕನಾದ ಕ್ಷಣದಲ್ಲಿ ಆತನ ಟೀಚರ್, ಸಹಪಾಠಿಗಳು ಅವನನ್ನು ಸಮಧಾನಿಸುತ್ತಾರೆ. ನಂತರ ಆತ ತನ್ನ ಕುರ್ಚಿಯಿಂದ ಎದ್ದು ಹೋಗಿ ಗೋಡೆಯಲ್ಲಿ ನೇತುಹಾಕಿದ್ದ ಬಣ್ಣದ ಪಿರಿಯಾಡಿಕ್ ಟೇಬಲ್ ನೋಡುತ್ತಾನೆ, ನಂತರ ಮೇಜಿನ ಮೇಲಿದ್ದ ಬಣ್ಣದ ಕ್ಯಾಲೆಂಡರ್ ಗಮನಿಸುತ್ತಾನೆ. ಮೊದಲ ಬಾರಿಗೆ ಬಣ್ಣ ಕಂಡ ಖುಷಿ ಅವನ ಮುಖದಲ್ಲಿ ಎದ್ದು ಕಾಣುತ್ತದೆ.
ಕಲರ್ ಬ್ಲೈಂಡ್ ಕುರಿತ ವಿಶೇಷ ಕ್ಲಾಸ್ ಮಾಡಲು ಜೀನ್‌ಥಾನ್ ಟೀಚರ್ಸ್ ನಿರ್ಧರಿಸುತ್ತಾರೆ. ಆ ಕ್ಲಾಸ್ ಜೀನ್‌ಥಾನ್ ತಾಯಿಯನ್ನ ಕೂಡ ಬರಲು ಹೇಳಿರುತ್ತಾರೆ. ಆ ಕ್ಲಾಸ್‌ನಲ್ಲಿ ಅವನಿಗೆ ವಿಶೇಷವಾದ ಕನ್ನಡಕವನ್ನು ನೀಡಲಾಗುವುದು. ಆಗ ಅವನಿಗೆ ಮೊದಲ ಬಾರಿಗೆ ಬಣ್ಣಗಳನ್ನು ನೋಡಲು ಸಾಧ್ಯವಾಗುತ್ತದೆ, ಈ ಅದ್ಭುತ ಕ್ಷಣವನ್ನು ಸೆರೆಹಿಡಿದಿದ್ದು, ಇದೀಗ ವೈರಲ್ ಆಗಿದೆ.



Click it and Unblock the Notifications
