Latest Updates
-
ಚಂಡಮಾರುತದ ನಂತರ ಮನೆ ಸುರಕ್ಷತೆ: 24 ಗಂಟೆಗಳಲ್ಲಿ ತೇವಾಂಶ ನಿವಾರಣೆ ಮತ್ತು ವಿದ್ಯುತ್ ಉಪಕರಣಗಳ ರಕ್ಷಣೆ ಹೇಗೆ? -
ಕರ್ವಾ ಚೌತ್ 2026: ಮಧುಮೇಹಿಗಳು ಮತ್ತು ಉದ್ಯೋಗಿ ಮಹಿಳೆಯರು ಉಪವಾಸ ಮಾಡುವಾಗ ಈ ಆರೋಗ್ಯ ಸಲಹೆಗಳನ್ನು ಮರೆಯದಿರಿ! -
ದೆಹಲಿ-ಎನ್ಸಿಆರ್ ವಾಯುಮಾಲಿನ್ಯ: ಉಸಿರಾಡಲು ಕಷ್ಟವಾಗ್ತಿದೆಯಾ? ನಿಮ್ಮ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಆತಂಕ: ಸೊಳ್ಳೆ ನಿಯಂತ್ರಣಕ್ಕೆ ಬೆಳಗಿನ 10 ನಿಮಿಷದ ಸಿಂಪಲ್ ರೂಟಿನ್! -
ಚಂಡಮಾರುತದ ಭೀತಿ: ನಿಮ್ಮ ಬಾಲ್ಕನಿ ಮತ್ತು ಕಿಟಕಿಗಳನ್ನು 30 ನಿಮಿಷದಲ್ಲಿ ಸುರಕ್ಷಿತವಾಗಿಡುವುದು ಹೇಗೆ? -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: ದೆಹಲಿಯಲ್ಲಿ 922 ಕೆಜಿ ಕಲ್ಮಷ ಸ್ವೀಟ್ಸ್ ವಶ, ಸುರಕ್ಷಿತವಾಗಿರುವುದು ಹೇಗೆ? -
ಆಫೀಸ್ನಲ್ಲೇ IND vs NZ ಮ್ಯಾಚ್ ಎಂಜಾಯ್ ಮಾಡ್ಬೇಕಾ? ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪ್ಲೇಯಿಂಗ್ 11! -
ವಿಶ್ವ ಸ್ಟ್ರೋಕ್ ದಿನ: ಪಾರ್ಶ್ವವಾಯು ಲಕ್ಷಣಗಳ ಪತ್ತೆಗೆ 'FAST' ಪರೀಕ್ಷೆ ಮತ್ತು ಬಿಪಿ ನಿಯಂತ್ರಣಕ್ಕೆ 7 ನಿಮಿಷದ ವ್ಯಾಯಾಮ! -
'ಅರ್ನಬ್' ಚಂಡಮಾರುತದ ಅಬ್ಬರ: ಆಂಧ್ರದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ -
ಚೆನ್ನೈ ಮಳೆ ಅಲರ್ಟ್: ಬಾಡಿಗೆ ಮನೆಯಲ್ಲಿ ಸುರಕ್ಷಿತವಾಗಿರಲು ಇಲ್ಲಿವೆ ಸರಳ ಮುನ್ನೆಚ್ಚರಿಕಾ ಕ್ರಮಗಳು
ಕಾಡಿನಲ್ಲಿ ಬಂಜೋ ಸಂಗೀತ ಕೇಳಲು ಬಂದ ನರಿ: 10 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವೀಡಿಯೋ
ಸಂಗೀತಕ್ಕೆ ಭಾಷೆಯಿಲ್ಲ.. ಒಂದು ಮಧುರವಾದ ಸಂಗೀತ ಕಿವಿಗೆ ಬಿದ್ದರೆ ಅದು ನಮಗೆ ಅರ್ಥವಾಗದ ಭಾಷೆಯಾದರೂ ಕೂಡ ನಾವು ಕಿವಿಕೊಟ್ಟು ಕೇಳುತ್ತೇವೆ. ಅದುವೇ ಸಂಗೀತಕ್ಕಿರುವ ಮ್ಯಾಜಿಕ್. ಗರ್ಭಿಣಿ ಸಂಗೀತ ಕೇಳಿದರೆ ಹೊಟ್ಟೆಯಲ್ಲಿರುವ ಮಗುವಿನ ಚಲನೆ ಗರ್ಭಿಣಿಯ ಅನುಭವಕ್ಕೆ ಬರುವುದು.

ಎಂಥದ್ದೇ ನೋವಾದರೂ ಅದನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ. ಇದೀಗ ಕಾಡು ಪ್ರಾಣಿಯಾದ ನರಿ ಮ್ಯೂಸಿಕ್ ಕೇಳಿ ಬಂದು ಆಲಿಸಿರುವ ವೀಡಿಯೋ 10 ಮಿಲಿಯನ್ಗಿಂತಲೂ ಅಧಿಕ ವ್ಯೂವ್ಸ್ ಕಂಡಿದೆ.
ಅಮೆರಿಕದ ಸಾಂಪ್ರದಾಯಿಕ ವಾದ್ಯವಾದ ಬಂಜೋವನ್ನು ನುಡಿಸುವಾಗ ನರಿಯೊಂದು ಬಂದು ಆಲಿಸಿರುವ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದ್ದು ಈ ವೀಡಿಯೋಗೆ 10 ಲಕ್ಷಕ್ಕೂ ಅಧಿಕ ವ್ಯೂವ್ಸ್ ಬಂದಿದ್ದು ವೈರಲ್ ಆಗಿದೆ.
ಆ್ಯಂಟಿ ಟೋರ್ನ್ ಎಂಬವವರು ಕಾಡಿನಲ್ಲಿ ನಿಂತು ಬಂಜೋ ನುಡಿಸುತ್ತಿದ್ದರು, ಆಗ ಅವರ ಮುಂದೆ ಬರುವ ನರಿಯೊಂದು ಕೂತು ಅವರ ನುಡಿಸುತ್ತಿರುವ ಸಂಗೀತವನ್ನು ಆಲಿಸುತ್ತಾ ಕೂರುತ್ತದೆ.
ಇದವರೆಗೆ ಸಂಗೀತವನ್ನು ಕೇಳದೇ ಇದ್ದ ಗುಳ್ಳೆನರಿ ಸಂಗೀತವನ್ನು ಆಲಿಸುತ್ತಿರುವ ಮನೋಹರ ದೃಶ್ಯ ವೀಕ್ಷಕರ ಮನ ಗೆದ್ದಿದೆ.



Click it and Unblock the Notifications
