Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಡ್ಲೆ ಚಿಕ್ಕಿಯಂತೆ ಕಂಡ ಸೂರ್ಯನ ಫೋಟೋ ವೈರಲ್
ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ನೋಡುವುದೇ ಕಣ್ಣಿಗೆ ಹಬ್ಬ, ಇನ್ನು ಅದೇ ಸೂರ್ಯವನ್ನು ಮಧ್ಯಾಹ್ನದ ಹೊತ್ತಿನಲ್ಲಿ ಬರಿ ಕಣ್ಣಿನಲ್ಲಿ ನೋಡಲು ಸಾಧ್ಯವಾಗದಷ್ಟು ಪ್ರಕಾಶ ಮಾನವಾಗಿ ಬೆಂಕಿಯ ಉಂಡೆಯ ರೀತಿ ಕಾಣಿಸುತ್ತಿರುತ್ತಾನೆ.

ಈ ಸೂರ್ಯನ ಮೇಲ್ಮೈ ಹೇಗಿರಬಹುದು ಎಂಬ ಯಾವುದೇ ಊಹೆ ಯಾರಿಗೂ ಇರಲಿಲ್ಲ. ಆದರೆ ಇದೀಗ ನಾಸಾ ಸೂರ್ಯನ ಕ್ಲೋಸ್ ಅಪ್ ಫೋಟೋವನ್ನು ಬಿಡುಗಡೆ ಮಾಡಿದ್ದು ಇದೀಗ ಆ ಫೋಟೋ ವೈರಲ್ ಆಗಿದೆ. ಆ ಫೋಟೋ ನೋಡುತ್ತಿದ್ದರೆ ಅಯ್ಯೋ ಸೂರ್ಯ ನಮ್ಮ ಕಡ್ಲೆ ಚಿಕ್ಕಿ ಕಂಡಂತೆ ಕಾಣುತ್ತಿದ್ದಾನೆ ಅಲ್ವಾ ಎಂದು ಖುಷಿಯಾಗಿದೆ ಇರಲ್ಲ. ಈ ಫೋಟೋವನ್ನು ಅತಿ ದೊಡ್ಡ ಸೌರ ದೂರದರ್ಶಕವಾದ ಡೇನಿಯಲ್ ಇನೊಯ್ ಸೋಲಾರ್ ಟೆಲಿಸ್ಕೋಪ್ ಮೂಲಕ ತಸೆರೆ ಹಿಡಿಯಲಾಗಿದೆ.
ಸೌರ ಮಂಡಲದಲ್ಲಿ ಕಣಗಳಂಥ ವಸ್ತುಗಳು ಒಂದಕ್ಕೊಂದು ಸವರಿಕೊಂಡಂತೆ ಅಡ್ಡಾಡುತ್ತಿರುವ ಚಿತ್ರವನ್ನು ಬುಧವಾರ ಬಿಡುಗಡೆ ಮಾಡಿದ್ದು ನೆಟ್ಟಿಗರು ಅದನ್ನು ಚಿಕ್ಕಿಗೆ ಹೋಲಿಸುತ್ತಿದ್ದಾರೆ.
ಇಷ್ಟು ದಿನ ನಮಗೆಲ್ಲಾ ಚಂದ್ರ ಮೇಲ್ಮೈಯ ಚಿತ್ರಣ ಮಾತ್ರ ಗೊತ್ತಿರುತ್ತಿತ್ತು. ಇದೀಗ ಈ ಚಿತ್ರದ ಮೂಲಕ ಚಂದ್ರನ ಮೇಲ್ಮೆ ಹೇಗಿರಬಹುದೆಂಬುವುದಕ್ಕೆ ಎಂಬುವುದಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿದೆ.
ಹುವೈಯ ಬಾಹ್ಯಾಕಾಶ ವಿಶ್ವವಿದ್ಯಾನಿಲಯದ ಪ್ರೊ. ಜೆಫ್ ಕುಹಾನ್ ಸೂರ್ಯನ ಫೋಟೋವನ್ನು ಸಮೀಪದಿಂದ ತೆಗೆದ ಸಂಶೋಧಕರ ತಂಡದ ಪ್ರಮುಖ ವ್ಯಕ್ತಿಯಾಗಿದ್ದು ಇವರು 'ಸೂರ್ಯನನ್ನು ತಿಳಿಯುವ ಪ್ರಯತ್ನ ಗೆಲಿಲಿಯೋ ಕಾಲದಿಂದಲೂ ನಡೆಯುತ್ತಿದ್ದು, ಸೂರ್ಯನ ಬಗ್ಗೆ ಹೆಚ್ಚಿನದ್ದು ತಿಳಿಯಲು ಇನ್ನೂ ಸಾಧ್ಯವಾಗಿಲ್ಲ. ಇದೀಗ ಡಿಕೆಐಎಸ್‌ಟಿ ಮೂಲಕ ಸೂರ್ಯನ ಮೇಲ್ಮೈ ಪೋಟೋ ತೆಗೆಯಲು ಸಾಧ್ಯವಾಗಿದ್ದು ಈ ಉಪಕರಣ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಭೂಮಿಯ ಮೇಲೆ ಸೂರ್ಯನ ವರ್ತನೆ ಬಗ್ಗೆ ಹೆಚ್ಚು ತಿಳಿಯುವ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.



Click it and Unblock the Notifications
